ಜಿದ್ದಾ: ದಕ್ಷಿಣ ಕರ್ನಾಟಕ ಸುನ್ನೀ ಸೆಂಟರ್ (ರಿ) ಜಿದ್ದಾ ಯೂನಿಟ್ ಇದರ ಸ್ವಲಾತ್ ಮಜ್ಲಿಸ್ ಹಾಗೂ ಮಹಾಸಭೆ ಅಮಾನ್ ಬಂಟ್ವಾಳ ರವರ ಕಿರಾಅತ್ ನೊಂದಿಗೆ ಸಯ್ಯಿದ್ ಮುಹಮ್ಮದ್ ತಂಙಳ್ ಉಚ್ಚಿಲರವರ ನೇತೃತ್ವದಲ್ಲಿ ಜಿದ್ದಾ ರೋಲೆಕ್ಸ್ ಹೋಟೆಲ್ ನಲ್ಲಿ ಜರಗಿತು.
ಕಾರ್ಯಕ್ರಮವನ್ನು ಸಯ್ಯಿದ್ ಝಕರಿಯ್ಯ ಕೋಯ ಸಖಾಫಿ ತಂಙಳ್ ನಾವುಂದ ಉದ್ಘಾಟಿಸಿದರು. ಕಳೆದ ವರ್ಷದ ವರದಿ ಮತ್ತು ಲೆಕ್ಕ ಪತ್ರ ಅಮಾನ್ ವಾಮಾಂಜೂರು ಮಂಡಿಸಿದರು ನಂತರ ಚುನಾವಣಾ ಅಧಿಕಾರಿಯಾಗಿ ಆಗಮಿಸಿದ ಇಬ್ರಾಹಿಂ ಹಾಜಿ ಕನ್ನಂಗಾರ್ 2019 ಹಾಗೂ 2020 ರ ಸಾಲಿನ ನೂತನ ಪದಾಧಿಕಾರಿಗಳನ್ನು ಘೋಷಿಸಿದರು.