janadhvani

Kannada Online News Paper

ಆತೂರಿನಲ್ಲಿ ಸೌಹಾರ್ದ ಸಂಗಮ ಹಾಗೂ ಅನುಸ್ಮರಣೆ  ಕಾರ್ಯಕ್ರಮ

ಆತೂರು: ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ ಆತೂರು ಯುನಿಟ್ ಇದರ ವತಿಯಿಂದ ಫೆಬ್ರವರಿ 24 ಆದಿತ್ಯವಾರ ದಂದು ಇಲ್ಲಿನ ಸರಕಾರಿ ಆಸ್ಪತ್ರೆಯ ಮುಂಭಾಗದಲ್ಲಿ ಸೌಹಾರ್ದ ಸಂಗಮ ಹಾಗೂ ಅನುಸ್ಮರಣಾ ಕಾರ್ಯಕ್ರಮ ನಡೆಯಲಿದ್ದು.

ಪ್ರಸ್ಥುತ ಕಾರ್ಯಕ್ರಮದಲ್ಲಿ ವಿಶ್ವ ವಿಖ್ಯಾತ ವಾಗ್ಮಿ ಬಹು ಮುಳ್ಳೂರುಕೆರೆ ಮುಹಮ್ಮದಲಿ ಸಖಾಫಿ ಮುಖ್ಯ ಪ್ರಭಾಷಣ ಗೈಯ್ಯಲಿರುವರಲ್ಲದೆ , ಸೌಹಾರ್ದ ಸಂಗಮದಲ್ಲಿ ದ.ಕ ಜಿಲ್ಲಾ ಉಸ್ತುವಾರಿ ಜನಾಬ್ ಯುಟಿ ಖಾದರ್,ಸ್ಥಳೀಯ ಶಾಸಕ ಶ್ರೀ ಎಸ್ ಅಂಗಾರ ಮುಂತಾದ ರಾಜಕೀಯ ಧುರೀಣರು ಭಾಗವಹಿಸಲಿದ್ದಾರೆ.

ದ.ಕ ಜಿಲ್ಲಾ ಎಸ್ಸೆಸ್ಸೆಫ್ಫ್ ಉಪಾಧ್ಯಕ್ಷ ಮುನೀರ್ ಸಖಾಫಿ ಉಳ್ಳಾಲ ಸೌಹಾರ್ದ ಭಾಷಣ ಮಾಡಲಿರುವರಲ್ಲದೆ,ಅಸ್ಸಯ್ಯದ್ ಸಾದಾತ್ ತಂಙಳ್ ಗುರುವಾಯನಕೆರೆ ದುವಾಶಿರ್ವಚನ ನೀಡಲಿದ್ದಾರೆಂದು ಸ್ವಾಗತ ಸಮಿತಿ ಚೇರ್ ಮ್ಯಾನ್ ಆದಂ ಮದನಿ ಆತೂರು ಪ್ರಕಟನೆಗೆ ತಿಳಿಸಿದ್ದಾರೆ.

error: Content is protected !! Not allowed copy content from janadhvani.com