janadhvani

Kannada Online News Paper

ಉಮ್ರಾ ಯಾತ್ರಿಕರ ಗಮನಕ್ಕೆ: ವೀಸಾ ಅವಧಿ ಬದಲಾವಣೆ- ಮೇ 23 ಕೊನೇ ದಿನ

"ಈ ಹಿಂದೆ ಘೋಷಿಸಲಾದ ದುಲ್ ಖಅದ 29 ರ ಮುಕ್ತಾಯ ದಿನಾಂಕಕ್ಕಿಂತ ಎರಡು ವಾರಗಳ (14 ದಿನಗಳು) ಮುಂಚಿತವಾಗಿ,ಧುಲ್ ಖಅದ 15 ರ ದಿನಾಂಕವನ್ನು ಅನುಮೋದಿಸಲಾಗಿದೆ"

ಜಿದ್ದಾ,ಏ.15- ವಿದೇಶದಿಂದ ಬರುವ ಉಮ್ರಾ ಯಾತ್ರಾರ್ಥಿಗಳ ವೀಸಾ ಅವಧಿಯು ಧುಲ್ ಖಅದ 15 (ಮೇ.23)ಕೊನೆಯ ದಿನವಾಗಿದೆ ಎಂದು ಹಜ್ ಮತ್ತು ಉಮ್ರಾ ಸಚಿವಾಲಯ ಪ್ರಕಟಿಸಿದೆ ಎಂದು ಸೌದಿ ಗಜೆಟ್ ವರದಿ ಮಾಡಿದೆ. ಆದರೆ, ಈ ಬಗ್ಗೆ ಸಚಿವಾಲಯದಿಂದ ಹೊಸ ಸ್ಪಷ್ಟೀಕರಣ ಬಂದಿದ್ದು, ಅದು ಸೌದಿಗೆ ಪ್ರವೇಶಿಸುವ ಕೊನೆಯ ದಿನಾಂಕವಾಗಿದೆ ಎಂದು ಹೇಳಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಾರ್ಷಿಕ ಹಜ್ ಯಾತ್ರೆಗಾಗಿ ಪ್ರಪಂಚದಾದ್ಯಂತದ ಪವಿತ್ರ ನಗರಗಳಾದ ಮಕ್ಕಾ ಮತ್ತು ಮದೀನಾಗಳಿಗೆ ಯಾತ್ರಾರ್ಥಿಗಳ ಹರಿವನ್ನು ಸುಗಮಗೊಳಿಸುವ ಸಲುವಾಗಿ, ಉಮ್ರಾ ವೀಸಾ ಮುಕ್ತಾಯ ದಿನಾಂಕವನ್ನು ದುಲ್ ಖಅದ 29 ರಿಂದ ದುಲ್ ಖಅದ 15 ಕ್ಕೆ ಬದಲಾಯಿಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ.

ಇನ್ಮುಂದೆ ಸೌದಿ ಅರೇಬಿಯಾಕ್ಕೆ ಪ್ರವೇಶಿಸಿದ ದಿನಾಂಕದಿಂದ ಹಿಂದೆ ಅನುಮೋದಿಸಲಾದ ಸಿಂಧುತ್ವದ ಬದಲಿಗೆ ಮೂರು ತಿಂಗಳ ಉಮ್ರಾ ವೀಸಾದ ಸಿಂಧುತ್ವವನ್ನು ಅದರ ವಿತರಣೆಯ ದಿನಾಂಕದಿಂದ ಪ್ರಾರಂಭಿಸಲಾಗುವುದು ಎಂದು ಸಚಿವಾಲಯ ವಿವರಿಸಿದೆ. ಸಚಿವಾಲಯವು ತನ್ನ ಎಕ್ಸ್ ಪ್ಲಾಟ್‌ಫಾರ್ಮ್ ಮೂಲಕ ಕೇಳಲಾದ ಹಲವಾರು ವಿಚಾರಣೆಗಳಿಗೆ ಪ್ರತಿಕ್ರಿಯೆಯಾಗಿ ಇದನ್ನು ಸ್ಪಷ್ಟಪಡಿಸಿದೆ.

ಉಮ್ರಾ ವೀಸಾದ ಸಿಂಧುತ್ವವು ಅದರ ವಿತರಣೆಯ ದಿನಾಂಕದಿಂದ ಮೂರು ತಿಂಗಳುಗಳಾಗಿರುತ್ತದೆ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ, ಪ್ರತೀ ವರ್ಷ ಅದು ದುಲ್ ಖಅದ 15 ರಂದು ಕಾಲವಧಿ ಕೊನೆಗೊಳ್ಳಲಿದೆ. ಈ ಹಿಂದೆ ದುಲ್ ಖಅದ 29 ಆಗಿತ್ತು ಕೊನೇ ದಿನಾಂಕ.

“ಈ ಹಿಂದೆ ಘೋಷಿಸಲಾದ ದುಲ್ ಖಅದ 29 ರ ಮುಕ್ತಾಯ ದಿನಾಂಕಕ್ಕಿಂತ ಎರಡು ವಾರಗಳ (14 ದಿನಗಳು) ಮುಂಚಿತವಾಗಿ,ಧುಲ್ ಖಅದ 15 ರ ದಿನಾಂಕವನ್ನು ಅನುಮೋದಿಸಲಾಗಿದೆ” ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.

ಉಮ್ರಾ ವೀಸಾ ಕಾಲಾವಧಿ: ಗೊಂದಲಕ್ಕೆ ತೆರೆ- ಜೂನ್ 6 ರೊಳಗೆ ಸೌದಿ ತೊರೆಯಬೇಕು

error: Content is protected !! Not allowed copy content from janadhvani.com