janadhvani

Kannada Online News Paper

ಗೃಹ ಕೆಲಸಗಾರರಿಗೆ ಅನುಕೂಲಕರ ಕಾನೂನಿನೊಂದಿಗೆ ಖತಾರ್

ದೋಹಾ: ಗೃಹ ಕೆಲಸಗಾರರ ಕನಿಷ್ಟ ವಯಸ್ಸು 18, ಮತ್ತು ಗರಿಷ್ಠ ವಯಸ್ಸು 60 ಆಗಿರುತ್ತದೆ.18 ರ ಕೆಳಗಿನವರು ಮತ್ತು 60 ವರ್ಷಗಳ ಮೇಲಪಟ್ಟವರನ್ನು ಮನೆಯ ಕೆಲಸಕ್ಕೆ ನಿಯೋಜಿಸುವುದು ಕಾನೂನುಬಾಹಿರವಾಗಿದೆ.

ಆದಾಗ್ಯೂ, ಕಾರ್ಮಿಕ ಸಚಿವರ ಅನುಮತಿಯ ಮೇರೆಗೆ 60 ವರ್ಷ ಕಳೆದವರನ್ನು ಉಳಿಸಿಕೊಳ್ಳಲು ಸಾಧ್ಯವಿದೆ ಎನ್ನಲಾಗಿದೆ.ಮನೆ ಕಾರ್ಮಿಕರರನ್ನು ನೇಮಕಗೊಳಿಸಲು ಕಾರ್ಮಿಕ ಸಚಿವಾಲಯದ ಅನುಮತಿ ಪಡೆಯಬೇಕಾಗಿದೆ.

ಮಾಲೀಕರ ಹೆಸರು, ರಾಷ್ಟ್ರೀಯತೆ, ಕತರ್‌ನ ವಿಲಾಸ, ಕಾರ್ಮಿಕರ ಹೆಸರು, ರಾಷ್ಟ್ರೀಯತೆ, ಒಪ್ಪಂದದ ದಿನಾಂಕ, ಕೆಲಸದ ಸ್ವರೂಪ, ಒಪ್ಪಂದದ ಕಾಲಾವಧಿ, ಒಪ್ಪಂದ ನವೀಕರಿಸುವ  ನಿಬಂಧನೆಗಳು, ಸಂಬಳ, ಸೇವಾ ವ್ಯವಸ್ಥೆ, ಸಂಬಳ ನೀಡಬೇಕಾದ ದಿನಾಂಕ ಮುಂತಾದವುಗಳನ್ನು ಕರಾರಿನಲ್ಲಿ ಸ್ಪಷ್ಟವಾಗಿ ನಮೂದಿಸಿರಬೇಕು.

ರಿಕ್ರೂಟ್ ಮಾಡಿದ ವಿದೇಶಿ ಸ್ಥಾಪನೆಗೆ ಪ್ರತಿಫಲವಾಗಿ ನೀಡಿದ ಹಣ ಅಥವಾ ಖರ್ಚು ವೆಚ್ಚವನ್ನು ಕೆಲಸಗಾರರ ಸಂಬಳದಿಂದ ಪಡೆಯುವುದು ಕಾನೂನು ಬಾಹಿರ ವಾಗಿದೆ. ಕಾರ್ಮಿಕರ ರಕ್ಷಣೆಯು ಉದ್ಯೊಗದಾತನ ಬಾಧ್ಯತೆಯಾಗಿದೆ.

ಅಪಾಯಕಾರಿ ಕೆಲಸಗಳಲ್ಲಿ ಕಾರ್ಮಿಕರನ್ನು ತೊಡಗಿಸಿಕೊಳ್ಳುವಂತಿಲ್ಲ ಮಾತ್ರವಲ್ಲದೆ, ಅನಾರೋಗ್ಯದ ವೇಳೆ ಕೆಲಸ ಮಾಡಿಸುವಂತೆಯೂ ಇಲ್ಲ. ತಿಂಗಳ ಒಪ್ಪಂದದ ಸಂಬಳವನ್ನು ತಿಂಗಳ ಕೊನೆಯಲ್ಲಿ ಅಥವಾ ಮುಂದಿನ ತಿಂಗಳ ಮೂರು ತಾರೀಖಿನ ಒಳಗಾಗಿ ಪಾವತಿಸ ತಕ್ಕದ್ದು.

ನೇರವಾಗಿ ಸಂಬಳ ನೀಡಿದ್ದರೆ ಕಾರ್ಮಿಕರ ಸಹಿ ಇರುವ ರಸೀದಿಯನ್ನು ಉದ್ಯೋಗದಾತ ಇರಿಸಿಕೊಳ್ಳಬೇಕು. ಕೆಲಸಗಾರರ ಒಪ್ಪಿಗೆ ಇಲ್ಲದೆ ಉದ್ಯೋಗದಾತ ಕೆಲಸಗಾರರನನ್ನು ಒಂದು ದೇಶದಿಂದ ಇನ್ನೊಂದು ದೇಶಕ್ಕೆ, ಕೊಂಡೊಯ್ಯಲು ಶ್ರಮಪಟ್ಟರೆ ಕರಾರು ಅಸಿಂಧುಗೊಳಿಸಿ ಕಾರ್ಮಿಕನಿಗೆ ಸ್ವದೇಶಕ್ಕೆ ಮರಳಬಹುದಾಗಿದೆ.

ಈ ಸಂದರ್ಭದಲ್ಲಿ ಎಲ್ಲಾ ಪ್ರಯೋಜನಗಳನ್ನು ಕಾರ್ಮಿಕರು ಪಡೆಯಲು ಅರ್ಹನಾಗಿರುತ್ತಾನೆ.ಕತರ್‌ನಲ್ಲಿ ಇರುವ ವೇಳೆ ಕಾರ್ಮಿಕ ಮರಣ ಹೊಂದಿದ್ದಲ್ಲಿ ಆತನ ಸಂಬಂಧಿಕರು ದೇಹವನ್ನು ಊರಿಗೆ ತಲುಪಿಸಲು ಕೇಳಿಕೊಂಡರೆ ಮಾಲೀಕ ಸ್ವಂತ ವೆಚ್ಚದಲ್ಲಿ ತಲುಪಿಸಬೇಕು.

ಇದಲ್ಲದೆ, ಕಾರ್ಮಿಕರ ಸಾವು ಸಂಭವಿಸಿದ 15 ದಿನಗಳ ಒಳಗೆ ಅವರಿಗೆ ಸಲ್ಲಬೇಕಾದ ಸವಲತ್ತುಗಳನ್ನು ಸರ್ಕಾರಿ ಖಜಾನೆ ಪಾವತಿಸಬೇಕು.ನ್ಯಾಯಾಲಯದ ತೀರ್ಪಿನ ಮೇಲೆ ನಂತರ ಅದನ್ನು ಬಂಧುಗಳಿಗೆ ಒಪ್ಪಿಸಲಾಗುತ್ತದೆ.

ಗೃಹ ಕೆಲಸಗಾರರ ಜವಾಬ್ದಾರಿಗಳು:

  • ಕರಾರಿನ ಪ್ರಕಾರ ಕೆಲಸವನ್ನು ಕೃತ್ಯ ನಿಷ್ಠೆ ಯಿಂದ ಮಾಡುವುದರೊಂದಿಗೆ ಪ್ರತಿ ಕಾರ್ಮಿಕ ದೇಶದ ಕಾನೂನು ಮತ್ತು ಧಾರ್ಮಿಕ ಮತ್ತು ನೈತಿಕತೆಯನ್ನು ಪಾಲಿಸುವುದು ಕಾರ್ಮಿಕನ ಬಾಧ್ಯತೆಯಾಗಿದೆ.
  • ಮಾಲೀಕರ ಆಸ್ತಿ, ಹಣ, ಮತ್ತು ಆಭರಣ ಸುರಕ್ಷಿತವಾಗಿ ಕಾಪಾಡಬೇಕು.
  • ಅವರ ರಹಸ್ಯಗಳನ್ನು ಕಾಪಾಡುವುದು ಕೂಡ ಬಾಧ್ಯತೆ ಯಾಗಿದೆ.
  • ಉದ್ಯೋಗದಾತನೊಂದಿಗೆ ಕಾರ್ಮಿಕರು ವಾಸವಿದ್ದರೆ ಕುಟುಂಬ ಮತ್ತು ಸಂದರ್ಶಕರರೊಂದಿಗೆ ಘನತೆಯನ್ನು ಕಾಪಾಡುವುದರೊಂದಿಗೆ ಅವರ ಸುರಕ್ಷತೆಯನ್ನು ಕಾಪಾಡಬೇಕು.ವಿಶೇಷವಾಗಿ ಹಿರಿಯರು ಮತ್ತು  ಮಕ್ಕಳ ಕಾರ್ಯದಲ್ಲಿ.
  • ಉದ್ಯೋಗದಾತರೊಂದಿಗೆ ಘನತೆಯಿಂದ ವ್ಯವಹರಿಸುವುದು ಕಾರ್ಮಿಕರ ಬಾಧ್ಯತೆಯಾಗಿದೆ.
  • ಪ್ರತಿಫಲ ಪಡೆದು ಇತರೆಡೆ ಕೆಲಸ ಮಾಡುವುದು ಅಥವಾ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಕೆಲಸ ಮಾಡುವುದನ್ನು ನಿಷೇಧಿಸಲಾಗಿದೆ.

error: Content is protected !! Not allowed copy content from janadhvani.com