janadhvani

Kannada Online News Paper

ಸೌದಿ ಪ್ರಯಾಣ ಸುಲಭ: ವೃತ್ತಿಪರ ವೀಸಾ ಸ್ಟಾಂಪಿಂಗ್‌ಗೆ ಕಾನ್ಸುಲೇಟ್‌ನ ದೃಢೀಕರಣದ ಅಗತ್ಯವಿಲ್ಲ

ಅರ್ಹತಾ ಪ್ರಮಾಣಪತ್ರಗಳಲ್ಲಿ ಸೌದಿ ರಾಯಭಾರ ಕಚೇರಿ ಅಥವಾ ಕಾನ್ಸುಲೇಟ್‌ನ ದೃಢೀಕರಣದ ಅಗತ್ಯವಿಲ್ಲ

ರಿಯಾದ್: ವೃತ್ತಿಪರ ವೀಸಾದ ಮೇಲೆ ಸೌದಿ ಅರೇಬಿಯಾಕ್ಕೆ ತೆರಳುವವರಿಗೆ ಭಾರತದಲ್ಲಿನ ಸೌದಿ ರಾಯಭಾರ ಕಚೇರಿ(Saudi Arabia Embassy in India) ಮತ್ತು ಕಾನ್ಸುಲೇಟ್ ಪರಿಹಾರ ಕ್ರಮಗಳನ್ನು ಕೈಗೊಂಡಿದೆ. ವೃತ್ತಿಪರ ವೀಸಾವನ್ನು ಸ್ಟ್ಯಾಂಪ್ (Professional Visa Stamping) ಮಾಡಲು ಅರ್ಹತಾ ಪ್ರಮಾಣಪತ್ರಗಳಲ್ಲಿ ಸೌದಿ ರಾಯಭಾರ ಕಚೇರಿ ಅಥವಾ ಕಾನ್ಸುಲೇಟ್‌ನ ದೃಢೀಕರಣದ ಅಗತ್ಯವನ್ನು ಮನ್ನಾ ಮಾಡಲಾಗಿದೆ.

ಭಾರತೀಯ ವಿದೇಶಾಂಗ ಸಚಿವಾಲಯ(Indian Ministry of External Affairs) ಮಾನ್ಯ ಮಾಡಿದ ಪ್ರಮಾಣಪತ್ರಗಳನ್ನು, ಸೌದಿ ರಾಯಭಾರ ಕಚೇರಿ ಅಥವಾ ಕಾನ್ಸುಲೇಟ್ ದೃಢೀಕರಿಸುವ ಅಗತ್ಯವಿಲ್ಲ ಎಂದು ಮುಂಬೈನಲ್ಲಿರುವ ಸೌದಿ ಕಾನ್ಸುಲೇಟ್ (Saudi Consulate) ಸಂಬಂಧಿಸಿದ ನೇಮಕಾತಿ ಏಜೆನ್ಸಿಗಳಿಗೆ(Recruitment Agencies) ತಿಳಿಸಿದೆ.

ಪ್ರಸ್ತುತ ಈ ದೃಢೀಕರಣದ ಪ್ರಕ್ರಿಯೆಯು ಪೂರ್ಣಗೊಳ್ಳಲು ವಿಳಂಬವಾಗುತ್ತಿತ್ತು. ತಿಂಗಳುಗಟ್ಟಲೆ ಕಾದು ದೃಢೀಕರಣ ಲಭಿಸಿದ ನಂತರವಷ್ಟೇ, ವೀಸಾ ಸ್ಟಾಂಪಿಂಗ್‌ಗೆ ಕಳಿಸಲು ಸಾಧ್ಯ. ಇದರಿಂದಾಗಿ ಸೌದಿ ಅರೇಬಿಯಾದಲ್ಲಿ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದರು.

ಶೈಕ್ಷಣಿಕ ಅರ್ಹತೆ ಪ್ರಮಾಣಪತ್ರ ಮತ್ತು ಕೆಲಸದ ಅನುಭವ ಪ್ರಮಾಣಪತ್ರದಲ್ಲಿ ಮೊದಲನೇಯದಾಗಿ ಭಾರತೀಯ ಮಾನವ ಸಂಪನ್ಮೂಲ ಸಚಿವಾಲಯ(Indian Ministry of Human Resource) ಮತ್ತು ವಿದೇಶಾಂಗ ಸಚಿವಾಲಯದ ದೃಢೀಕರಣ ಬೇಕಾಗಿದೆ. ರಾಯಭಾರ ಕಚೇರಿ ಅಥವಾ ದೂತಾವಾಸವು ಆಯಾ ವಿಶ್ವವಿದ್ಯಾನಿಲಯಗಳು ಮತ್ತು ಕೆಲಸದ ಅನುಭವದ ಸಂಸ್ಥೆಗಳಿಗೆ ‘ಡೇಟಾ ಫ್ಲೋ’ ಎಂಬ ಕಂಪನಿಯ ಮೂಲಕ ಪರಿಶೀಲನೆಗಾಗಿ ಪ್ರಮಾಣಪತ್ರಗಳನ್ನು ಕಳುಹಿಸುತ್ತದೆ.ಆ ಪ್ರಕ್ರಿಯೆ ಮುಗಿದ ನಂತರ ಅನುಮತಿ ಪಡೆಯಲು ವಿಳಂಬವಾಗುತ್ತಿತ್ತು. ದೃಢೀಕರಣದ ನಂತರವೇ ವೀಸಾ ಸ್ಟಾಂಪಿಂಗ್ ಮಾಡಲಾಗುವುದು. ಹೊಸ ನಿರ್ಧಾರದಿಂದ ಸದ್ಯದ ಪರಿಸ್ಥಿತಿ ಬದಲಾಗಲಿದೆ.
ಭಾರತೀಯ ವಿದೇಶಾಂಗ ಸಚಿವಾಲಯದಿಂದ ದೃಢೀಕರಣವನ್ನು ಪಡೆದರೆ, ನೀವು ಸ್ಟಾಂಪಿಂಗ್‌ಗಾಗಿ ವೀಸಾವನ್ನು ತ್ವರಿತವಾಗಿ ಕಳುಹಿಸಬಹುದು. ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ದೃಢೀಕರಣವಾಗಿದೆ postal Attestation.

ಎಚ್‌ಆರ್‌ಡಿ ದೃಢೀಕರಿಸಿದ ನಂತರ ಅದನ್ನು ದೆಹಲಿಯಲ್ಲಿರುವ ವಿದೇಶಾಂಗ ಸಚಿವಾಲಯಕ್ಕೆ ಕಳುಹಿಸಲಾಗುತ್ತದೆ. ಅಲ್ಲಿಂದ ದೃಢೀಕರಣ ಲಭಿಸಿದ ಕೂಡಲೇ, ಪ್ರಕ್ರಿಯೆ ಮುಗಿಸಿ ವೀಸಾ ಸ್ಟಾಂಪಿಂಗ್ ಗಾಗಿ ಕಳಿಸಬಹುದು.

ಹೊಸ ಸುತ್ತೋಲೆಯ ಪ್ರಕಾರ ಇನ್ನು ಮುಂದೆ ಕಾನ್ಸುಲೇಟ್‌ನ ದೃಢೀಕರಣಕ್ಕಾಗಿ ಕಾಯುವ ಅಗತ್ಯವಿಲ್ಲ. HRD ಮತ್ತು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ದೃಢೀಕರಿಸಲು ಕೇವಲ ಹದಿನೈದರಿಂದ ಇಪ್ಪತ್ತು ದಿನಗಳು ಬೇಕಾಗುತ್ತವೆ. ತಕ್ಷಣವೇ ವೀಸಾ ಸ್ಟಾಂಪಿಂಗ್‌ಗೆ ಸಲ್ಲಿಸಬಹುದು.

error: Content is protected !! Not allowed copy content from janadhvani.com