ರಿಯಾದ್: ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ನಕಲಿ ಹಜ್ ಜಾಹೀರಾತುಗಳ ವಿರುದ್ಧ ಸೌದಿ ಅರೇಬಿಯಾದ ಸಾರ್ವಜನಿಕ ಭದ್ರತೆಯ ಜನರಲ್ ಡೈರೆಕ್ಟರೇಟ್ ನಾಗರಿಕರು ಮತ್ತು ನಿವಾಸಿಗಳಿಗೆ ಎಚ್ಚರಿಕೆ ನೀಡಿದೆ.
ಈ ಜಾಹೀರಾತುಗಳು ಹಜ್‌ಗೆ ಸಂಬಂಧಿಸಿದ ವಿವಿಧ ಸೇವೆಗಳನ್ನು ಒದಗಿಸುವುದಾಗಿ ಸುಳ್ಳು ಹೇಳುತ್ತವೆ. ಅಂತಹ ವಂಚಕರಿಗೆ ಕಠಿಣ ಶಿಕ್ಷೆ ವಿಧಿಸಲಾಗುವುದು ಎಂದು ನಿರ್ದೇಶನಾಲಯ ತಿಳಿಸಿದೆ.
ಅಧಿಕೃತ ಹಜ್ ಮಾರ್ಗಸೂಚಿಗಳು ಮತ್ತು ನಿಬಂಧನೆಗಳನ್ನು ಅನುಸರಿಸಲು ಅಧಿಕಾರಿಗಳು ನಾಗರಿಕರು ಮತ್ತು ನಿವಾಸಿಗಳನ್ನು ಕೇಳಿಕೊಂಡರು.
ಮಕ್ಕಾ, ರಿಯಾದ್ ಮತ್ತು ಪೂರ್ವ ವಲಯದಲ್ಲಿ (911) ಅಥವಾ ದೇಶದಾದ್ಯಂತ ಇತರ ಎಲ್ಲ ಪ್ರದೇಶಗಳಲ್ಲಿ (999) ಸಂಪರ್ಕಿಸುವ ಮೂಲಕ ಅನುಮಾನಾಸ್ಪದ ಚಟುವಟಿಕೆ ಅಥವಾ ಕಾನೂನು ಉಲ್ಲಂಘನೆಗಳನ್ನು ವರದಿ ಮಾಡಲು ಅಧಿಕಾರಿಗಳು ಸಾರ್ವಜನಿಕರನ್ನು ಒತ್ತಾಯಿಸಿದರು.