ನೆಲ್ಯಾಡಿ: ಎಸ್ಸೆಸ್ಸೆಫ್ ನೆಲ್ಯಾಡಿ ಶಾಖೆಯ ವಾರ್ಷಿಕ ಮಹಾಸಭೆಯು ದಿನಾಂಕ 26.04.2024ರಂದು ಸೆಕ್ಟರ್ ಅಧ್ಯಕ್ಷರಾದ ಶಫೀಕ್ ಅಹ್ಸನಿ ಇವರ ಅಧ್ಯಕ್ಷತೆಯಲ್ಲಿ ಸುನ್ನೀ ಸೆಂಟರ್ ಕಛೇರಿಯಲ್ಲಿ ಇತ್ತಿಚೆಗೆ ಜರುಗಿತು. SYS , ನೆಲ್ಯಾಡಿ ಯುನಿಟ್ ಅಧ್ಯಕ್ಷರಾದ ಉಸ್ಮಾನ್ ಜೌಹರಿ ಉದ್ಘಾಟಿಸಿದರು. ಮುಹಮ್ಮದ್ ಸುಲ್ತಾನ್ ವರದಿ ವಾಚಿಸಿ, ಅಮೀರ್ ಲೆಕ್ಕಪತ್ರ ಮಂಡಿಸಿದರು.
ನೂತನ ಸಮಿತಿ ಅಧ್ಯಕ್ಷರಾಗಿ ಅನ್ಸಿಫ್ ಸಅದಿ ಪ್ರಧಾನ ಕಾರ್ಯದರ್ಶಿಯಾಗಿ ಇರ್ಶಾದ್ ಕೆ.ಇ , ಕೋಶಾಧಿಕಾರಿಯಾಗಿ ನಿಜಾಮುದ್ದೀನ್ ಹಿದಾಯತ್ ನಗರ, ದ ಅವಾ ಕಾರ್ಯದರ್ಶಿ ತ್ವಾಹಾ, ಮಾಧ್ಯಮ ವಿಭಾಗದ ಕಾರ್ಯದರ್ಶಿ ಅಫ್ಲಾಜ್, ಕ್ಯೂಡಿ ಕಾರ್ಯದರ್ಶಿ ಸುಲ್ತಾನ್, ವಿಸ್ಡಮ್ ಕಾರ್ಯದರ್ಶಿ ಶಬೀಬ್, ಸಿಸಿ ವಿಭಾಗದ ಕಾರ್ಯದರ್ಶಿ ಸಫ್ವಾನ್, ಕ್ಯಾಂಪಸ್ ಕಾರ್ಯದರ್ಶಿಯಾಗಿ ಅಮೀರ್, ರೀಡ್ ಪ್ಲಸ್ ಕಾರ್ಯದರ್ಶಿ ರಮೀಝ್, ರೈಂಬೋ ಕಾರ್ಯದರ್ಶಿ ಝಹೀಂ ಆಯ್ಕೆಯಾದರು.
ಸಮಿತಿ ಸದಸ್ಯರಾಗಿ ಹಾಫಿಲ್ ಹಫೀಝ್, ಸಾಬಿತ್ ಹಾಶಿಮಿ, ಸುಹೈಲ್, ಮುಸ್ತಫಾ, ತುಫೈಲ್, ಝಾಕಿರ್, ರಾಶಿಕ್, ರಾಶಿದ್, ಸುಜಾಹ್, ಸವಾದ್, ಮೊದಲಾದವರು ಆಯ್ಕೆಯಾದರು.
ವೀಕ್ಷಕರಾಗಿ ಆಗಮಿಸಿದ ಎಸ್ಸೆಸ್ಸೆಫ್ ನೆಲ್ಯಾಡಿ ಸೆಕ್ಟರ್ ಅಧ್ಯಕ್ಷರಾದ ಶಫೀಕ್ ಅಹ್ಸನಿ ಕಾರ್ಯದರ್ಶಿಗಳಾದ ಸೊಹೈಲ್ ಹಾಗು ಹನೀಫ್ ಪಟ್ಟೆ.ಹಾಗೂ ಮುಸ್ಲಿಂ ಜಮಾಅತ್ ನೆಲ್ಯಾಡಿ ಯುನಿಟ್ ಅಧ್ಯಕ್ಷರಾದ ಸುಲೈಮಾನ್ N.S ನಾಯಕರುಗಳಾದ ಶರೀಫ್ ಸಖಾಫಿ , ಇಸ್ಮಾಯಿಲ್ NK ಎಸ್.ವೈ.ಎಸ್, ನಾಯಕರಾದ ಅಶ್ರಫ್ CM, ಶಾಹುಲ್ ಹಮೀದ್ ಸಖಾಫಿ SSF ನಾಯಕರಾದ ಮಿಸ್ಹಬ್ ಸ ಅದಿ ಮೊದಲಾದವರು ಉಪಸ್ಥಿತರಿದ್ದರು.