janadhvani

Kannada Online News Paper

ಬಜರಂಗದಳ ಪುಂಡಾಟಿಕೆ : ದಲಿತ ಮತ್ತು ಪ್ರಗತಿಪರ ಸಂಘಟನೆಗಳಿಂದ ಚಿಕ್ಕಮಗಳೂರು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಭೇಟಿ

ಚಿಕ್ಕಮಗಳೂರು: ಶಾಂತಿಯುತ ಚಿಕ್ಕಮಗಳೂರು ಜಿಲ್ಲೆಯಲ್ಲಿ ಸಂಘಪರಿವಾರದ ಗೂಂಡಾಗಳು ಸಮಾಜದಲ್ಲಿ ಅಶಾಂತಿ ಸೃಷ್ಟಿಸುತ್ತಿರುವ ಬಗ್ಗೆ ದಲಿತ ಮತ್ತು ಪ್ರಗತಿಪರ ಸಂಘಟನೆಗಳ ಒಕ್ಕೂಟದ ನಿಯೋಗವು ಚಿಕ್ಕಮಗಳೂರು ಪೋಲಿಸ್ ವರಿಷ್ಠಾಧಿಕಾರಿಯವರನ್ನು ಭೇಟಿ ಮಾಡಿ ಮಾತುಕತೆ ನಡೆಸಿತು.

ಕಾನೂನು ಉಲ್ಲಂಘಿಸಿ, ಆಟೋಗಳಲ್ಲಿ ಮೈಕ್ ಸೆಟ್ ಮುಖಾಂತರ ಬಹಿರಂಗವಾಗಿ ಪ್ರಚೋದನಕಾರಿಯಾಗಿ ಭಾಷಣ ಮಾಡಿ, ಮುಸ್ಲಿಮರ ವಿರುದ್ಧ ವಿಷ ಬೀಜ ಬಿತ್ತಿ, ಅಂಗಡಿ, ಮನೆಗಳಿಗೆ ತೆರಳಿ ಮುಸಲ್ಮಾನರ ವಿರುದ್ಧ ದ್ವೇಷ ಭರಿತ ಕರಪತ್ರ ಹಂಚಿ, ಹಲಾಲ್ ವಸ್ತುಗಳನ್ನು ಖರೀದಿಸಬೇಡಿ, ಮುಸಲ್ಮಾನರ ಬಳಿ ವ್ಯಾಪಾರ ಮಾಡಬೇಡಿ ಎಂದು ಸಮಾಜದಲ್ಲಿ ದ್ವೇಷ ಬಿತ್ತುತ್ತಿರುವ ಬಜರಂಗದಳದ ಗೂಂಡಾಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ನಿಯೋಗ ಆಗ್ರಹಿಸಿದೆ.

ಈ ಸಂದರ್ಭದಲ್ಲಿ ದಲಿತ ಮುಖಂಡರಾದ ಶ್ರೀನಿವಾಸ್, SDPI ಜಿಲ್ಲಾ ಅಧ್ಯಕ್ಷರಾದ ಗೌಸ್ ಮುನೀರ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಅಝ್ಮತ್ ಪಾಷ, ದಲಿತ ಮುಖಂಡರುಗಳಾದ ಉಮೇಶ್, ಉದ್ದಪ್ಪ, ಮಂಜುನಾಥ್, ನವೀನ್, ಮೋಹನ್, ಪೂರ್ಣೆಶ್, ಕುಮಾರ್, ಗಿರಿಶ್, ಅಣ್ಣಯ್ಯ, ಸುರೇಶ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

error: Content is protected !! Not allowed copy content from janadhvani.com