janadhvani

Kannada Online News Paper

ಜಾಮಿಯಾ ಕಂಝುಲ್ ಈಮಾನ್ ನಲ್ಲಿ ಗಣರಾಜ್ಯೋತ್ಸವ

ಚಿಕ್ಕಮಗಳೂರು: ನಗರದ ಪ್ರತಿಷ್ಠಿತ ಸುನ್ನಿ ಸಂಸ್ಥೆ ಜಾಮಿಯಾ ಕಂಝುಲ್ ಈಮಾನ್ ನಲ್ಲಿ 73ನೇ ಗಣರಾಜ್ಯೋತ್ಸವ ಸಮಾರಂಭ ನಡೆಯಿತು. ಸಂಸ್ಥೆಯ ಅಧ್ಯಕ್ಷರಾದ ಅಲ್ಹಾಜ್ ಮುಹಮ್ಮದ್ ಶಾಹಿದ್ ರಜ್ವಿ ರವರು ಧ್ವಜಾರೋಹಣವನ್ನು ನೆರವೇರಿಸಿದರು. ನಂತರ ಕಂಝುಲ್ ಈಮಾನ್ ವಿದ್ಯಾರ್ಥಿಗಳು ಮತ್ತು ನೆರೆದ ಎಲ್ಲ ಸಾರ್ವಜನಿಕರು ರಾಷ್ಟ್ರಗೀತೆ ಹಾಗೂ ಸಾರೆ ಜಹಾನ್ ಸೆ ಅಚ್ಚಾ ಗೀತೆಯನ್ನು ಹಾಡುವ ಮೂಲಕ ರಾಷ್ರ ಧ್ವಜಕ್ಕೆ ಗೌರವ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ನಗರಸಭಾ ಸದಸ್ಯರುಗಳು ಆದ ಮುನೀರ್ ಅಹ್ಮದ್ ಮತ್ತು ಖಲಂದರ್ ಮೋನು ರವರು ಆಗಮಿಸಿದ್ದರು ಮುಖ್ಯ ಭಾಷಕಾರರಾಗಿ ಮುನೀರ್ ಅಹ್ಮದ್ ರವರು ಮಾತನಾಡಿ ಇಸ್ಲಾಮಿ ಸಂಸ್ಥೆಯಲ್ಲಿ ರಾಷ್ಟ್ರ ಹಬ್ಬವನ್ನು ಸಂಭ್ರಮದಿಂದ ಆಚರಿಸುವ ಸಂಪ್ರದಾಯ ತಲ ತಲಾಂತರದಿಂದ ಬಂದಿದ್ದು ಮುಸಲ್ಮಾನರಲ್ಲಿ ಇರುವ ದೇಶ ಪ್ರೇಮದ ಸಂಕೇತ ಎಂದು ತಿಳಿಸಿದರು.

ನಂತರ ಸಂಸ್ಥೆಯ ಮುಖ್ಯಉಪಾಧ್ಯಾಯರಾದ ಖಾರಿ ಇರ್ಷಾದ್ ರಾಜಾ ವಂದನಾರ್ಪಣೆ ಸಲ್ಲಿಸಿದರು. ಕಾರ್ಯಕ್ರಮದ ನಂತರ ನೆರೆದಿದ್ದ ಎಲ್ಲಾ ಸಾರ್ವಜನಿಕರಿಗೆ ಲಘು ಉಪಹಾರದ ವ್ಯವಸ್ಥೆ ಮಾಡಲಾಗಿತ್ತು. ಈ ಕಾರ್ಯಕ್ರಮದಲ್ಲಿ ನಗರದ ಧಾರ್ಮಿಕ ಮುಖಂಡರಾದ ಮೌಲಾನ ಯೂಸುಫ್,ಮೌಲಾನ ಅಬ್ದುಲ್ ಘನಿ, ಮೌಲಾನ ಇದ್ರೀಸ್ ರಾಜಾ, ಟಿಪ್ಪು ಸುಲ್ತಾನ್ ಮಹವೆದಿಕೆಯ ಜಿಲ್ಲಾಧ್ಯ್ಷರಾದ ಜಂಶಿದ್ ಖಾನ್, ಕರ್ನಾಟಕ ಮುಸ್ಲಿಂ ಜಮಾತ್ ನ ಆರಿಫ್ ಅಲಿ ಖಾನ್, ಮತ್ತು ಇನ್ನಿತರೆ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು ಎಂದು ಸಂಸ್ಥೆಯ ಪ್ರಧಾನ ಕಾರ್ಯದರ್ಶಿಯಾದ ಅಲ್ ಹಾಜ್ ಫೈರೋಜ್ ಅಹ್ಮದ್ ರಜ್ವೀ ರವರು ಪತ್ರಿಕಾ ಪ್ರಕಣೆಯಲ್ಲಿ ತಿಳಿಸಿದ್ದಾರೆ.

error: Content is protected !! Not allowed copy content from janadhvani.com