janadhvani

Kannada Online News Paper

ಕಾರಂದೂರ್ ಮರ್ಕಝ್‌ಗೆ ದುಬೈ ಭದ್ರತಾ ಮುಖ್ಯಸ್ಥ ದಾಹಿ ಖಲ್ಫಾನ್ ಭೇಟಿ

ಕೋಝಿಕ್ಕೋಡ್: ದುಬೈ ಭದ್ರತಾ ಮುಖ್ಯಸ್ಥ  ದಾಹಿ ಖಲ್ಫಾನ್ ತಮೀಂ ಮರ್ಕಝ್‌ಗೆ ಭೇಟಿ ನೀಡಿದರು.  ಇಪ್ಪತ್ತು ವರ್ಷಗಳ ಹಿಂದೆ, ತನ್ನ ತಂದೆ ಕೊಯಿಲಾಂಡಿಯಲ್ಲಿ ನಿರ್ಮಿಸಿದ  ಖಲ್ಫಾನ್ ಕುರ್ ಆನ್ ಕಲಿಕಾ ಕೇಂದ್ರವನ್ನು  ಸಂದರ್ಶಿಸಲು ಮತ್ತು ಎ.ಪಿ. ಉಸ್ತಾದರ ಸಾರ್ಥ್ಯದ ಮರ್ಕಝ್‌ನಲ್ಲಿ ನಡೆಯುವ ಕಾರ್ಯ ಚಟುವಟಿಕೆಗಳನ್ನು ಮನವರಿಕೆ ಮಾಡುವ ಸಲುವಾಗಿ ದಾಹಿ ಖಲ್ಫಾನ್ ಕೋಝಿಕ್ಕೋಡ್  ತಲುಪಿದ್ದರು.ಮರ್ಕಝ್‌ನ ವಿವಿಧ ಕ್ಯಾಂಪಸ್ ಗಳಿಗೆ ಅವರು ಬೇಟಿ ನೀಡಿದರು.

ಕೊಯಿಲಾಂಡಿ ಪಾರಪಳ್ಳಿಯಲ್ಲಿ ತಂದೆ ಖಲ್ಫಾನ್ ತಮೀಂ ಸ್ಥಾಪಿಸಿದ ಖುರ್ ಆನ್ ಕಲಿಕಾ ಕೇಂದ್ರದ  ವಿದ್ಯಾರ್ಥಿಗಳು ಮತ್ತು ಅಧ್ಯಾಪಕರರೊಂದಿಗೆ ತಾಸುಗಳ ಕಾಲ ಅವರು ಉಳಿದು ಕೊಂಡರು. ಮರ್ಕಝ್ ಸ್ಥಾಪನೆಗಳ ವಿದ್ಯಾರ್ಥಿಗಳ ಕುರ್ ಆನ್ ಪಾರಾಯಣ ಶೈಲಿಯು ಅತ್ಯಂತ ಮನೋಹರವಾಗಿದ್ದು, ವೈಜ್ಞಾನಿಕ ವಿಧಾನಗಳನ್ನು ಬಳಸಿ ವಿದ್ಯಾರ್ಥಿಗಳಿಗೆ ಪಾಠ ಮಾಡುವ ಮೂಲಕ ಅವರ ಆಧ್ಯಾತ್ಮಿಕ ಮತ್ತು ಮಾನಸಿಕ ಸಾಮರ್ಥ್ಯವನ್ನು ಪುಷ್ಟೀಕರಿಸಿದೆ ಎಂದು ಖಲ್ಫಾನ್ ಹೇಳಿದರು.

ನಂತರ ಖಲ್ಫಾನ್ ಅವರನ್ನು  ಕಾರಂದೂರಿನ ಮರ್ಕಝ್‌ನ ಮುಖ್ಯ ಕ್ಯಾಂಪಸ್ ನಲ್ಲಿ  ಅದ್ದೂರಿಯಿಂದ ಸ್ವಾಗತಿಸಲಾಯ್ತು. ಸ್ವೀಕರಿದರು. ಅವರು ಭಾರತೀಯರು ಸಹಿಷ್ಣುತೆ ಮತ್ತು ಪ್ರೀತಿಯನ್ನು ಎತ್ತಿಹಿಡಿಯುತ್ತಾರೆ ಮತ್ತು ಅವರು ವಿವಿಧ ಸಿದ್ಧಾಂತಗಳನ್ನು ನಂಬುತ್ತಾರಾದರೂ, ಬಹು ಸಾಂಸ್ಕೃತಿಕ ಜೀವನ ಶೈಲಿಯನ್ನು ಜೀವನದಲ್ಲಿ ಅಳವಡಿಸಿಕೊಂಡಿದ್ದಾರೆ ಎಂದು ಹೇಳಿದರು. ಮರ್ಕಝ್‌ನ ಸಂಸ್ಥೆಗಳು ಇಸ್ಲಾಮಿನ ಸರಿಯಾದ ವಿಧಾನಗಳನ್ನು ಪ್ರತಿನಿಧಿಸುತ್ತವೆ. ಇದು ಕಳೆದ ನಾಲ್ಕು ದಶಕಗಳಿಂದ ಭಯೋತ್ಪಾದನೆಯನ್ನು ಪರಿಣಾಮಕಾರಿಯಾಗಿ ಎದುರಿಸಲು ಭಾರತದಾದ್ಯಂತ ಮರ್ಕಝ್‌  ನಡೆಸುವ ವೈಜ್ಞಾನಿಕ ಸೇವೆಯಿಂದ ಸಾಧ್ಯವಾಯಿತು.

ಕಾಂತಪುರಂ ಎ.ಪಿ ಅಬೂಬಕರ್ ಮುಸ್ಲಿಯಾರ್ ಅವರ ನಾಯಕತ್ವದೊಂದಿಗೆ ಮರ್ಕಝ್  ಅದ್ಭುತಕರವಾಗಿ ಕಾರ್ಯಾಚರಿಸುತ್ತಿದೆ. ದುಬೈಯಲ್ಲಿ ಮಸೀದಿಗಳು ಮತ್ತು ಇತರ ಸಂಸ್ಥೆಗಳಲ್ಲಿ ಕೆಲಸ ಮಾಡುವ ಮರ್ಕಝ್‌ನ ಹಳೆ ವಿದ್ಯಾರ್ಥಿಗಳ ಸೇವೆಗಳು ಮಾದರಿಯಾಗಿದೆ. ಇದು ತಾನು ನಿರೀಕ್ಷಿಸಿದ್ದಕ್ಕಿಂತ ದೊಡ್ಡ ಸಂಸ್ಥೆಯಾಗಿದ್ದು, ಮರ್ಕಝ್‌ನ ಸೇವಾ ಕಾರ್ಯಗಳಿಗೆ ಇನ್ನು ಮುಂದೆ ಕೂಡ ತನ್ನ ಎಲ್ಲಾ ತರದ  ಬೆಂಬಲವನ್ನು ನೀಡಲಿದ್ದೇನೆ ಎಂದು ದಾಹಿ ಖಲ್ಫಾನ್ ಹೇಳಿದರು.

ಕಾಂತಪುರಂ ಎ.ಪಿ.ಅಬೂಬಕರ್ ಮುಸ್ಲಿಯಾರ್ ಅಧ್ಯಕ್ಷತೆ ವಹಿಸಿದ್ದರು. ದಶಕಗಳಿಂದ ಆತ್ಮಸಂಭಂದ ಇರುವ ವ್ಯಕ್ತಿತ್ವ ಅವರದ್ದಾಗಿದ್ದು, ದುಬೈಯು ಅಂತರಾಷ್ಟ್ರೀಯ ಮಟ್ಟದಲ್ಲಿ ಸುರಕ್ಷಿತ ನಗರವಾಗಿ ರೂಪುಗೊಳ್ಳಲು ದಾಹಿ ಅವರು ಪ್ರಮುಖ ಪಾತ್ರವಹಿಸಿದ್ದಾರೆ ಎಂದು ಕಾಂತಪುರಂ ಹೇಳಿದರು.

ಯುನೈಟೆಡ್ ಅರಬ್ ಎಮಿರೇಟ್ಸ್ ಅಧ್ಯಕ್ಷ ಖಲೀಫಾ ಬಿನ್ ಝಾಯಿದ್ ಆಲ್ ನಹ್ಯಾನ್ ಮತ್ತು ದುಬೈನ ಆಡಳಿತಾಧಿಕಾರಿ ಶೈಖ್ ಮುಹಮ್ಮದ್ ಬಿನ್ ರಾಷೀದ್ ಆಲ್ ಮಖ್ತೂಂ ಅವರೊಂದಿಗೆ ಉತ್ತಮ ಸಂಬಂಧ ಹೊಂದಿರುವ ಉನ್ನತ ಅಧಿಕಾರಿಯಾಗಿದ್ದಾರೆ ದಾಹಿ ಖಲ್ಫಾನ್ ,1980 ರಿಂದ ಅವರು ದುಬೈನ ಪೋಲಿಸ್ ಕಮಾಂಡರ್ ಇನ್ ಚೀಫ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.ದುಬೈ ಯನ್ನು  ವಿಶ್ವದ ಅತ್ಯುತ್ತಮ ಸುರಕ್ಷಿತ ನಗರವಾಗಿ ಬದಲಿಸಿದ ಕಾರಣಕ್ಕಾಗಿ ದಾಹಿ ಖಲ್ಪಾನ್ ಹಲವು ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿದ್ದಾರೆ.ಇಪ್ಪತ್ತಾರು ಲಕ್ಷ ಮಂದಿ ದಾಹಿ ಖಲ್ಫಾನ್ ಅವರನ್ನು ಟ್ವಿಟ್ಟರ್ನಲ್ಲಿ ಅನುಸರಿಸುತ್ತಿದ್ದಾರೆ.

ಮರ್ಕಝ್ ಕನ್ವೆನ್ಷನ್ ಸೆಂಟರ್ ನಲ್ಲಿ  ನಡೆದ ಕಾರ್ಯಕ್ರಮದಲ್ಲಿ ಎ.ಪಿ. ಅಬೂಬಕರ್ ಮುಸ್ಲಿಯಾರ್ ದಾಹಿ ಖಲ್ಫಾನ್ ಅವರಿಗೆ ಉಡುಗೊರೆ ನೀಡಿದರು, ಡಾ. ಹುಸೈನ್ ಸಾಖಾಫಿ ಚುಳ್ಳಿಕ್ಕೋಡ್ ಪರಿಚಯ ಭಾಷಣ ಮಾಡಿದರು. ಎ.ಪಿ. ಮುಹಮ್ಮದ್ ಮುಸ್ಲಿಯಾರ್, ಕೆ.ಕೆ. ಮುಹಮ್ನದ್ ಕುಟ್ಟಿ ಮುಸ್ಲಿಯಾರ್ ಕಟ್ಟಿಪ್ಪಾರ, ಸಿ, ಮುಹಮ್ಮದ್ ಫೈಝಿ, ವಿ.ಪಿ.ಎಂ ಫೈಝಿ ವಿಳ್ಯಾಪಳ್ಳಿ, ಹಸ್ಸನ್ ಸಖಾಫಿ ತರಯಿಟ್ಟಾಲ್ ಭಾಗವಹಿಸಿದ್ದರು.

error: Content is protected !! Not allowed copy content from janadhvani.com