janadhvani

Kannada Online News Paper

ಪಾಣಕ್ಕಾಡ್ ಜಬ್ಬಾರ್ ಅಲಿ ಶಿಹಾಬ್ ತಂಙಳ್ ವಫಾತ್ -ಕಾಂತಪುರಂ ಉಸ್ತಾದ್ ಸಂತಾಪ

ಮಲಪ್ಪುರಂ : ಕೇರಳ ಸಂಸ್ಥಾನ ಜಂ-ಇಯ್ಯತುಲ್ ಉಲಮಾ ಜೊತೆಕಾಯದರ್ಶಿ,ಪಾಣಕ್ಕಾಡ್ ಸಯ್ಯಿದ್ ಅಬ್ದುಲ್ ಜಬ್ಬಾರ್ ಅಲಿ ಶಿಹಾಬ್ ತಂಙಳ್ (63) ಮಂಗಳವಾರ ಸಂಜೆ ನಿಧನರಾದರು.

ಮರ್ಹೂಂ ಸಯ್ಯಿದ್ ಕೆ.ಎಂ.ಎಸ್. ಅಬ್ದುಲ್ ಕಹ್ಹಾರ್ ಪೂಕೋಯ ತಂಙಳ್ ಅವರ ಸುಪುತ್ರರಾಗಿರುವ ಇವರು ವಂಡೂರು ಜಾಮಿಅ ವಹಬಿಯಾ ಅರಬಿಕ್ ಕಾಲೇಜು, ಮಂಜೇರಿ ದಾರುಸ್ಸುನ್ನ ಅರಬಿಕ್ ಕಾಲೇಜು, ನಾದಾಪುರ ಫಲಾಹಿಯಾ ಅರಬಿಕ್ ಕಾಲೇಜು ಸಹಿತ ಕೇರಳದ ಹಲವು ಪ್ರಸಿದ್ದ ಅರಬಿಕ್ ಕಾಲೇಜುಗಳ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದರು. ಕೇರಳ ಸುನ್ನಿ ಯುವಜನ ಫೆಡರೇಶನ್ (ಎಸ್‍ವೈಎಫ್) ಇದರ ಚೆಯರ್‍ಮೆನ್ ಆಗಿ ಕಾರ್ಯನಿರ್ವಹಿಸುತ್ತಿದ್ದರು.

ತಂಙಳ್ ಅವರ ದಫನ ಕಾರ್ಯವು ಮಲಪ್ಪುರಂ-ತಲಪ್ಪಾರ ವಲಿಯ ಜಮಾಅತ್ ಮಸೀದಿಯಲ್ಲಿ ಬುಧವಾರ ನೆರವೇರಲಿದೆ.

ಕಲ್ಲಿಕೋಟೆ :ಕೇರಳ ಸಂಸ್ಥಾನ ಜಂ-ಇಯ್ಯತುಲ್ ಉಲಮಾ ಜೊತೆಕಾಯದರ್ಶಿ,ಪಾಣಕ್ಕಾಡ್ ಸಯ್ಯಿದ್ ಅಬ್ದುಲ್ ಜಬ್ಬಾರ್ ಅಲಿ ಶಿಹಾಬ್ ತಂಙಳ್ ಅವರ ವಫಾತ್ ನಲ್ಲಿ ಕಾಂತಪುರಂ ಎ.ಪಿ ಅಬೂಬಕರ್ ಮುಸ್ಲಿಯಾರ್ ಸಂತಾಪ ಸೂಚಿಸಿದ್ದಾರೆ.

ಪಾಂಡಿತ್ಯಪೂರ್ಣ ಮತ್ತು ನಮ್ರತೆಯನ್ನು ಮೈಗೂಡಿಸಿದ  ಮೇರು ವ್ಯಕ್ತಿಯಾಗಿದ್ದರು ಜಬ್ಬಾರಲಿ ಶಿಹಾಬ್ ತಂಙಳ್, ಅವರ ಕೊನೇ ದಿನಗಳಲ್ಲಿ  ಸುನ್ನಿಗಳ ಮಧ್ಯೆ ಐಕ್ಯತೆಗಾಗಿ ಆದ್ಯತೆ ನೀಡಿ ಅವಿರತ ಶ್ರಮ ವಹಿಸಿದ್ದರು ಎಂದು ಕಾಂತಪುರಂ ಹೇಳಿದರು.

error: Content is protected !! Not allowed copy content from janadhvani.com