janadhvani

Kannada Online News Paper

ಭಾರತದ ರಕ್ಷಣಾ ಸಚಿವಾಲಯದ ಅಧಿಕೃತ ವೆಬ್‍ಸೈಟ್ ಹ್ಯಾಕ್!

ನವದೆಹಲಿ: ಭಾರತದ ರಕ್ಷಣಾ ಸಚಿವಾಲಯದ ಅಧಿಕೃತ ವೆಬ್‍ಸೈಟ್ ಹ್ಯಾಕ್ ಆಗಿದ್ದು, ವೆಬ್‍ಸೈಟ್‍ನ ಮುಖಪುಟದಲ್ಲಿ “The website encountered an unexpected error. Please try again later” ಎಂಬ ಸಂದೇಶ ಕಾಣುತ್ತಿದೆ. ಚೀನಾ ಹ್ಯಾಕರ್‍‍ಗಳು ಈ ಕೃತ್ಯ ಎಸಗಿದ್ದಾರೆ ಎಂದು ಶಂಕಿಸಲಾಗಿದೆ.

ಭಾರತ ಸರ್ಕಾರದ ಅಧಿಕೃತ ವೆಬ್‍ಸೈಟ್‍ಗಳು ಹ್ಯಾಕ್ ಆಗುತ್ತಿರುವುದು ಇದೇ ಮೊದಲ ಬಾರಿ ಏನೂ ಅಲ್ಲ, ಕಳೆದ ವರ್ಷ ಸೈಬರ್ ದಾಳಿ ನಡೆದಾಗ ಗೃಹ ಸಚಿವಾಲಯದ ವೆಬ್‍ಸೈಟ್‍ನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು.

ತಿಂಗಳ ಹಿಂದೆ ರಾಷ್ಟ್ರೀಯ ಭದ್ರತಾ ಪಡೆಯ ವೆಬ್‍ಸೈಟ್‍ ಹ್ಯಾಕ್ ಆಗಿದ್ದು, ಪ್ರಧಾನಿ ನರೇಂದ್ರ ಮೋದಿ ಮತ್ತು ಭಾರತ ವಿರೋಧಿ ವಿಷಯಗಳನ್ನು ವೆಬ್‍ಸೈಟ್‍ನಲ್ಲಿ ಪ್ರಕಟಿಸಲಾಗಿತ್ತು. ಈ ಕೃತ್ಯವನ್ನು ಪಾಕ್ ಮೂಲದ ಹ್ಯಾಕರ್‍‍ಗಳು ಮಾಡಿದ್ದಾರೆ ಎಂದು ಸಂದೇಹ ವ್ಯಕ್ತಪಡಿಸಲಾಗಿತ್ತು.

error: Content is protected !! Not allowed copy content from janadhvani.com