janadhvani

Kannada Online News Paper

ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆಸಿಎಫ್) ಸೌದಿ ಅರೇಬಿಯಾ ರಾಷ್ಟ್ರೀಯ ಸಮಿತಿಯು ಊರಿನಲ್ಲಿರುವ ಸೌದಿ ಕೆಸಿಎಫ್ ಕಾರ್ಯಕರ್ತರನ್ನು ಸೇರಿಸಿ ನಡೆಸಿದ Confab-21 ಗಲ್ಫ್ ಮೀಟ್ ಕಾರ್ಯಕ್ರಮ ಮಂಗಳೂರಿನ ಅಡ್ಯಾರ್ ಕಣ್ಣೂರಿನಲ್ಲಿರುವ ಅಲ್-ಮರ್ಕಝುಲ್ ಇಸ್ಲಾಮಿ ಕಲ್ಚರಲ್ ಸೆಂಟರ್ ನಲ್ಲಿ ಅಕ್ಟೋಬರ್ 01ರಂದು ಯಶಸ್ವಿಯಾಗಿ ಜರುಗಿತು.

ಕೆಸಿಎಫ್ ಸೌದಿ ಅರೇಬಿಯಾ ರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ಡಿ ಪಿ ಯೂಸುಫ್ ಸಖಾಫಿ ಬೈತಾರ್ ರವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮ ಕಯ್ಯೂಮ್ ಜಾಲ್ಸೂರ್ ಹಾಗೂ ಯೂಸುಫ್ ಮದನಿ ಕೆಯ್ಯೂರ್ ರವರ ನೇತ್ರತ್ವದಲ್ಲಿ ಬುರ್ದಾ ಆಲಾಪಣೆ ಮೂಲಕ ಆರಂಭವಾಯಿತು.

ಕೆಸಿಎಫ್ ಅಂತರ್ರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ಡಾ| ಶೇಖ್ ಬಾವ ಮಂಗಳೂರು ರವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮುಂದಿನ ತಿಂಗಳಲ್ಲಿ ನಡೆಯಲಿರುವ ಇಶ್ಕೇ ರಸೂಲ್ (ﷺ)  ಅಭಿಯಾನವನ್ನು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಶೈಖುನಾ ಝೈನುಲ್ ಉಲಮಾ ಖಾಝಿ ಮಾಣಿ ಉಸ್ತಾದ್ ರವರು ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಘೋಷಣೆ ಮಾಡಿ ಕಾರ್ಯಕರ್ತರಿಗೆ ಹಿತವಚನಗಳನ್ನು ಹೇಳಿದರು.

ನಂತರ ಮಾತನಾಡಿದ ಸುನ್ನಿ ಕೋ-ಓರ್ಡಿನೇಶನ್ ಕರ್ನಾಟಕ ಸಮಿತಿ ಅಧ್ಯಕ್ಷರಾದ ಹುಸೈನ್ ಸಅದಿ ಕೆಸಿ ರೋಡ್ ಉಸ್ತಾದರು ಸೌದಿ ಅರೇಬಿಯಾ ಎಂಬುವುದು ಬಹಳ ವಿಶಾಲವಾದ ರಾಷ್ಟ್ರವಾಗಿದೆ.‌ ದಮ್ಮಾಮಿನಿಂದ ಜಿದ್ದಾ ತಲುಪಬೇಕಾದರೆ ಸಾವಿರಕ್ಕೂ ಅಧಿಕ ಕಿಲೋಮೀಟರ್ ಗಳು ಪ್ರಯಾಣ ಮಾಡಬೇಕಿದೆ. ಹೀಗಿರುವಾಗ ದಮ್ಮಾಮ್ ಹಾಗೂ ಜಿದ್ದಾದಲ್ಲಿರುವ ಕನ್ನಡಿಗರ ಒಡನಾಟದಲ್ಲಿ ಯಾವುದೇ ದೂರವಿಲ್ಲದಂತೆ ಮಾಡಲು ಕೆಸಿಎಫ್ ಸಂಘಟನೆಗೆ ಸಾಧ್ಯವಾಗಿದೆ ಎಂದು ಹೇಳಿದರು. ಅಡ್ಯಾರ್ ಕಣ್ಣೂರ್ ನಲ್ಲಿ ಕಾಮಗಾರಿ ನಡೆಯುತ್ತಿರುವ ಅಲ್-ಮರ್ಕಝುಲ್ ಇಸ್ಲಾಮಿ ಕಲ್ಚರಲ್ ಸೆಂಟರ್ ಇದರ ಸಂಪೂರ್ಣ ಮಾಹಿತಿಯನ್ನು ಕರ್ನಾಟಕ ಸುನ್ನಿ ಕೋ-ಓರ್ಡಿನೇಶನ್ ಸಮಿತಿ ಪ್ರಧಾನ ಕಾರ್ಯದರ್ಶಿಯವರಾದ ಎಸ್ ಪಿ ಹಂಝ ಸಖಾಫಿ ಉಸ್ತಾದರು ವಿವರಿಸಿದರು.

ಅಧ್ಯಕ್ಷರಾದ ಡಿ ಪಿ ಯೂಸುಫ್ ಸಖಾಫಿ ಬೈತಾರ್ ರವರು ಕೆಸಿಎಫ್ ಸೌದಿ ಅರೇಬಿಯಾದ ಅಧೀನದಲ್ಲಿರುವ ರಿಯಾದ್, ಜಿದ್ದಾ ಹಾಗೂ ಅಲ್-ಕಸೀಮ್ ಝೋನಲ್ ಸಮಿತಿಗಳ ಪ್ರಾಯೋಜಕತ್ವದಲ್ಲಿ ಹುಬ್ಬಳ್ಳಿ ಹಾಗೂ ಕೊಪ್ಪಳ ಜಿಲ್ಲೆಗಳಲ್ಲಿರುವ ಇಹ್ಸಾನ್ ನಾಲೇಜ್ ಸೆಂಟರ್ ಯೋಜನೆಯ ಬಗ್ಗೆ ವಿವರಿಸಿದರು. ಇದರಲ್ಲಿ ಹುಬ್ಬಳ್ಳಿಯ ಸೆಂಟರ್ ಈಗಾಗಲೇ ಉದ್ಘಾಟನೆಗೊಂಡು ಕಾರ್ಯನಿರ್ವಹಿಸುತ್ತಿದೆ.

ಮುಹಿಯುದ್ದೀನ್ ಕಾಮಿಲ್ ಸಖಾಫಿ ತೋಕೆ, ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯಾಧ್ಯಕ್ಷರಾದ ಅಬ್ದುಲ್ ಲತೀಫ್ ಸಅದಿ ಶಿವಮೊಗ್ಗ, ಕೆಸಿಎಫ್ ಅಂತರಾಷ್ಟ್ರೀಯ ಸಮಿತಿ ಪ್ರಧಾನ ಕಾರ್ಯದರ್ಶಿ ಖಮರುದ್ದೀನ್ ಗೂಡಿನಬಳಿ, ಎನ್ ಎಸ್ ಅಬ್ದುಲ್ಲಾ ರವರು ಶುಭಾಶಯ ಮಾತುಗಳನ್ನಾಡಿದರು.

ಸದ್ರಿ ಕಾರ್ಯಕ್ರಮದಲ್ಲಿ ಕೆಸಿಎಫ್ ಮದೀನಾ ಝೋನಲ್ ಸಮಿತಿ ಪ್ರಕಟಿಸುತ್ತಿರುವ ಎಂ ಎ ಇಸ್ಮಾಯಿಲ್ ಸಅದಿ ಮಾಚಾರ್ ರವರು ಬರೆದ ಮದೀನಾ ಮಸ್ಜಿದ್ ಪುಸ್ತಕ ಬಿಡುಗಡೆ, ದಮ್ಮಾಮ್ ಹಾಗೂ ಅಲ್-ಖಸೀಮ್ ಝೋನಲ್ ಸಮಿತಿಯ ಅಧೀನದಲ್ಲಿ ನಡೆದ ವೀ-ಕೇರ್ ಸಾಂತ್ವನದ ಚೆಕ್ ಬಿಡುಗಡೆ ಹಾಗೂ ಗಲ್ಫ್ ಇಶಾರ ಸಂಪಾದಕರಾದ ಸ್ವಾಲಿಹ್ ತೋಡಾರ್ ರವರಿಗೆ ಸನ್ಮಾನವನ್ನು ಮಾಡಲಾಯಿತು.

ಕಾರ್ಯಕ್ರಮದಲ್ಲಿ ಡಿಕೆ ಉಮರ್ ಸಖಾಫಿ ಕಂಬಳಬೆಟ್ಟು, ಕೆ.ಕೆ ಮುಹ್ಯಿದ್ದೀನ್ ಕಾಮಿಲ್ ಸಖಾಪಿ, ಇಸ್ಮಾಯಿಲ್ ಸಅದಿ ಕಿನ್ಯಾ, ಅಲ್-ಮರ್ಕಝುಲ್ ಇಸ್ಲಾಮೀ ಕೋಶಾಧಿಕಾರಿ ಶಾಕಿರ್ ಹಾಜಿ ಅಲ್-ಹೈಸಮ್, ಸೌದಿ ರಾಷ್ಟ್ರೀಯ ಸಮಿತಿ ಸಾಂತ್ವನ ಇಲಾಖೆಯ ಕಾರ್ಯದರ್ಶಿ ಅಶ್ರಫ್ ಕಿನ್ಯಾ, ಪಾರೂಕ್ ಅಬ್ಬಾಸ್ ಉಳ್ಳಾಲ್, ಹಾಗೂ ಇನ್ನಿತರ ನೇತಾರರು ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು.

ಅಶ್ರಫ್ ಮದನಿ ಬಡಕಬೈಲ್ ರವರು ಸ್ವಾಗತ ಹೇಳಿದ ಕಾರ್ಯಕ್ರಮವನ್ನು ನವಾಝ್ ಸಖಾಫಿ ಅಡ್ಯಾರ್ ಕಣ್ಣೂರು ರವರು ನಿರೂಪಿಸಿ ಸಲೀಮ್ ಕನ್ಯಾಡಿಯವರು ಧನ್ಯವಾದ ಹೇಳಿದರು.error: Content is protected !! Not allowed copy content from janadhvani.com