ದುಬೈ: ಯುಎಇಯ ಉದ್ಯೋಗ ವೀಸಾ ಪಡೆಯಲು ಸ್ವಭಾವ ಸರ್ಟಿಫಿಕೆಟ್ ಕಡ್ಡಾಯ ಗೊಳಿಸಲಾಗಿದ್ದ ನಿರ್ಧಾರವನ್ನು ಮುಂದಿನ ಘೋಷಣೆ ಬರುವ ತನಕ ಮುಂದೂಡಲಾಗಿದೆ. ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು ತನ್ನ ಟ್ವಿಟರ್ ಖಾತೆ ಮೂಲಕ ಇದನ್ನು ತಿಳಿಸಿದೆ.
ಫೆಬ್ರವರಿ 4 ರಿಂದ, ದೇಶದಲ್ಲಿ ಉದ್ಯೋಗ ವೀಸಾ ಪಡೆಯಲು ಸ್ವಭಾವ ಸರ್ಟಿಫಿಕೆಟ್ ಕಡ್ಡಾಯ ಗೊಳಿಸಿ ಆದೇಶ ಹೊರಡಿಸಲಾಗಿತ್ತು. ಈ ನಿರ್ಧಾರವನ್ನು ಅನುಷ್ಠಾನ ಗೊಳಿಸುವುದನ್ನು ಮುಂದೂಡಲಾಗಿದೆ ಎಂದು ಸಚಿವಾಲಯ ವ್ಯಕ್ತಪಡಿಸಿದೆ. ಸದ್ಯಕ್ಕೆ ಉದ್ಯೋಗ ವೀಸಾ ಪಡೆಯಲು ಸ್ವಭಾವ ಸರ್ಟಿಫಿಕೆಟ್ ಸಮರ್ಪಿಸುವ ಅಗತ್ಯವಿಲ್ಲ