ರಿಯಾದ್: (ಜನಧ್ವನಿ ವಾರ್ತೆ ) ಕೆ.ಸಿ.ಎಫ್. ರಿಯಾದ್ ಝೋನ್ ಅಧೀನದಲ್ಲಿ ನೂತನ ದಲ್ಲಾ ಘಟಕ ರಚನೆಯು ದಿನಾಂಕ 23-03-2018 ಶುಕ್ರವಾರ ಬೆಳಿಗ್ಗೆ 8 ಗಂಟೆಗೆ ಸರಿಯಾಗಿ ದಲ್ಲಾ ಮಸೀದಿಯಲ್ಲಿ ಕೆ.ಸಿ.ಎಫ್. ಸೌದಿ ರಾಷ್ಟೀಯ ಸಂಘಟನಾ ವಿಭಾಗದ ಚೇರ್ಮಾನ್ ಸಿಧ್ಧೀಖ್ ಸಖಾಫಿ ಪೆರುವಾಯಿ ಉಸ್ತಾದರ ನೇತೃತ್ವದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಯಾಕೂಬ್ ಸ’ಅದಿ ಉರುವಾಲುಪದವು ವಹಿಸಿದ್ದರು. ಸಭೆಯನ್ನು ಉದ್ಘಾಟಿಸಿ ಮಾತನಾಡಿದ ರಾಷ್ಟ್ರೀಯ ಸಾಂತ್ವನ ವಿಭಾಗದ ಚೆರ್ಮಾನ್ ಸಲೀಂ ಕನ್ಯಾಡಿ , ಕೆ.ಸಿ.ಎಫ್. ಕಾರ್ಯಾಚರಣೆ ಮಹತ್ವವನ್ನು ವಿವರಿಸಿದರು.
ವೇದಿಕೆಯಲ್ಲಿ ಕೆ.ಸಿ.ಎಫ್. ಸೌದಿ ರಾಷ್ಟೀಯ ಸಂಘಟನಾ ವಿಭಾಗದ ಕನ್ವೀನರ್ ರಮೀಝ್ ಕುಳಾಯಿ, ರಿಯಾದ್ ಝೋನ್ ಶಿಕ್ಷಣ ವಿಭಾಗದ ಕನ್ವೀನರ್ ಹಸೈನಾರ್ ಕಾಟಿಪಳ್ಳ ಉಪಸ್ಥಿತಿಯಿದ್ದರು.
ಇಬ್ರಾಹಿಂ ಕುಕ್ಕಾಜೆ ಸ್ವಾಗತಿಸಿದರೆ, ಮಜೀದ್ ಚಿಕ್ಕಮಗಳೂರು ವಂದಿಸಿದರು.
ದಾವೂದ್ ಸ’ಅದಿ ಉರುವಾಲುಪದವು ಕಾರ್ಯಕ್ರಮ ನಿರೂಪಿಸಿದರು.
ಪದಾಧಿಕಾರಿಗಳ ವಿವರ:
ಅಧ್ಯಕ್ಷ – ಯಾಕೂಬ್ ಮದನಿ ಉರುವಾಲುಪದವು
ಉಪಾಧ್ಯಕ್ಷ – ನಝೀರ್ ವಳವೂರು , ಅಬ್ಬಾಸ್ ಕನ್ಯಾನ
ಪ್ರಧಾನ ಕಾರ್ಯದರ್ಶಿ – ಇಬ್ರಾಹಿಂ ಕುಕ್ಕಾಜೆ
ಜೊತೆಕಾರ್ಯದರ್ಶಿ – ಸಾದಿಕ್ ಕುತ್ತಾರ್ , ಮಜೀದ್ ಚಿಕ್ಕಮಗಳೂರು
ಕೋಶಾಧಿಕಾರಿ – NM ಇಬ್ರಾಹಿಂ ಕಟ್ಟತ್ತಾರು
ಕಾರ್ಯಕಾರಿ ಸಮಿತಿ ಸದಸ್ಯರು:
ವಹ್ಹಾಬ್ ಪಡುಬಿದ್ರಿ
ಸೆಲೀಂ ಕನ್ನಂಗಾರ್
ಅಲೀ ಕನ್ಯಾನ
ಅಮೀರ್ ಮಾಣಿ
ಶಬೀರ್ ಸೂರಿಕುಮೇರ್