janadhvani

Kannada Online News Paper

ಕುವೈತ್: ನಕಲಿ ದಿನಾರ್‌ಗಳ ಹಾವಳಿ- ಸಾರ್ವಜನಿಕರಿಗೆ ಎಚ್ಚರಿಕೆ

ಕುವೈತ್ ನಗರ: ಕುವೈತ್ ಮಾರುಕಟ್ಟೆಯಲ್ಲಿ 10 ದಿನಾರ್‌ಗಳ ನಕಲಿ ಕರೆನ್ಸಿ ಹರಡುತ್ತಿರುವುದಾಗಿ ವರದಿಯಾಗಿದೆ. ಅಪರಾಧ ತನಿಖಾ ಇಲಾಖೆ ಈ ಬಗ್ಗೆ ತನ್ನ ತನಿಖೆಯನ್ನು ತೀವ್ರಗೊಳಿಸಿದೆ.

ಶಾಪಿಂಗ್ ಮಾಡುವಾಗ ಕರೆನ್ಸಿಗಳನ್ನು ಎಚ್ಚರಿಕೆಯಿಂದ ಪರಿಶೀಲಿಸುವುದು ಮುಖ್ಯ ಎಂದು ದೇಶೀಯರಿಗೆ ಮತ್ತು ವೀದೇಶೀಯರಿಗೆ ಭದ್ರತಾ ಇಲಾಖೆ ಮನವಿ ಮಾಡಿದೆ. ನಕಲಿ ನೋಟುಗಳನ್ನು ಪತ್ತೆ ಹಚ್ಚಲು ಬ್ಯಾಂಕುಗಳು ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸುತ್ತವೆ.

ಚಿಲ್ಲರೆ ವ್ಯಾಪಾರ ಕೇಂದ್ರಗಳನ್ನು ಗುರಿಯಾಗಿಸಿ ನಕಲಿ ಕರೆನ್ಸಿಗಳ ಬಳಕೆ ಇದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.ಒಂದೇ ನೋಟದಲ್ಲಿ ಪತ್ತೆ ಹಚ್ಚಲು ಸಾಧ್ಯವಾಗಿಲ್ಲದ ರೀತಿಯ ನಕಲಿ ಕರೆನ್ಸಿಯಾಗಿದೆ ಹರಡುತ್ತಿರುವುದು ಎಂದು ಸ್ಥಳೀಯರು ಪ್ರತಿಕ್ರಿಯಿಸಿದ್ದಾರೆ.

error: Content is protected !! Not allowed copy content from janadhvani.com