janadhvani

Kannada Online News Paper

ಕೋವಿಡ್ 19: ಯುಎಇಯಲ್ಲಿ ಡಿ. 4 ರಿಂದ ಜುಮಾ ನಮಾಜ್ ಪುನರಾರಂಭ

ಅಬುಧಾಬಿ | ಕೋವಿಡ್ ಸುರಕ್ಷತೆಯ ಭಾಗವಾಗಿ ಮಸೀದಿಗಳಲ್ಲಿ ಸ್ಥಗಿತಗೊಂಡಿದ್ದ ಶುಕ್ರವಾರದ ಜುಮಾ ಪ್ರಾರ್ಥನೆಯನ್ನು ಡಿಸೆಂಬರ್ 4 ರಿಂದ ಪುನರಾರಂಭಿಸಲು ನಿರ್ಧರಿಸಲಾಗಿದೆ ಎಂದು ಖಲೀಜ್ ಟೈಮ್ಸ್ ವರದಿ ಮಾಡಿದೆ. ಜುಲೈ 1 ರಿಂದ ಮಸೀದಿಗಳಲ್ಲಿ ಇತರ ನಮಾಜುಗಳನ್ನು ಪುನರಾರಂಭಿಸಲಾಗಿತ್ತು, ಆದರೆ ಶುಕ್ರವಾರದ ಜುಮಾ ನಮಾಜ್ ಆರಭಿಸಿರಲಿಲ್ಲ.

ಶುಕ್ರವಾರ ಪ್ರಾರ್ಥನೆಗಾಗಿ ಮಸೀದಿಗಳ ಕೇವಲ 30 ಪ್ರತಿಶತದಷ್ಟು ಭಾಗಗಳನ್ನು ಬಳಸಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ. ಕುತುಬ ಆರಂಭಿಸುವ 30 ನಿಮಿಷಗಳ ಮೊದಲು ಮಸೀದಿಗಳನ್ನು ತೆರೆದು,ಪ್ರಾರ್ಥನೆಯ ನಂತರ 30 ನಿಮಿಷಗಳಲ್ಲಿ ಮುಚ್ಚಲಾಗುವುದು. ಕುತುಬಾ ಮತ್ತು ನಮಾಜ್ ನ್ನು 10 ನಿಮಿಷಗಳಲ್ಲಿ ಪೂರ್ಣಗೊಳಿಲಾಗುವುದು.

ಮಸೀದಿಗಳಲ್ಲಿನ ವಾಶ್‌ರೂಮ್‌ಗಳನ್ನು ಮುಚ್ಚಿಡಲಾಗುವುದರಿಂದ ನಮಾಜ್ ನಿರ್ವಹಿಸಲು ಆಗಮಿಸುವವರು ಮನೆಯಲ್ಲೇ ಅಂಗ ಶುಚಿತ್ವವನ್ನು ನಿರ್ವಹಿಸುವಂತೆ ಸೂಚಿಸಲಾಗಿದೆ.

ಮಗ್ರಿಬ್ ನಮಾಜ್ ಹೊರತುಪಡಿಸಿ ಉಳಿದೆಲ್ಲಾ ಪ್ರಾರ್ಥನೆಗಳಿಗೆ 15 ನಿಮಿಷಗಳ ಮೊದಲು ಮಸೀದಿಗಳು ತೆರೆದಿರುತ್ತವೆ ಮತ್ತು ಪ್ರಾರ್ಥನೆಯ 10 ನಿಮಿಷಗಳ ನಂತರ ಎಲ್ಲಾ ಮಸೀದಿಗಳನ್ನು ಮುಚ್ಚಲಾಗುತ್ತದೆ. ಮಾಸ್ಕ್ ಮತ್ತು ಮುಸಲ್ಲಾವನ್ನು ತಾವಾಗಿಯೇ ತರಬೇಕು. ಹಿರಿಯರು ಮತ್ತು ದುರ್ಬಲರು ಮಸೀದಿಗೆ ತೆರಳದಂತೆ ಅಧಿಕಾರಿಗಳು ಒತ್ತಾಯಿಸಿದ್ದಾರೆ.

error: Content is protected !! Not allowed copy content from janadhvani.com