janadhvani

Kannada Online News Paper

ಉಮ್ರಾ ನಿರ್ವಹಿಸಲು ಅಂಗವಿಕಲರಿಗಾಗಿ ಮತ್ವಾಫ್ ನಲ್ಲಿ ಪ್ರತ್ಯೇಕ ರೇಖೆ

ಮಕ್ಕಾ: ಉಮ್ರಾ ತೀರ್ಥಯಾತ್ರೆಗಾಗಿ ಮಕ್ಕಾದ ಮಸೀದಿ ಅಲ್-ಹರಾಮ್‌ಗೆ ಬರುವ ಎಲ್ಲರಿಗೂ ತವಾಫ್ ನಿರ್ವಹಿಸಲು ಮತ್ವಾಫ್‌ಗೆ ಪ್ರವೇಶಿಸಲು ಅವಕಾಶವಿದೆ ಎಂದು ಹರಾಮ್ ವ್ಯವಹಾರಗಳ ಸಚಿವಾಲಯ ತಿಳಿಸಿದೆ. ಈ ಮೊದಲು ಅಂಗವಿಕಲರಿಗೆ ಮತ್ವಾಫ್ ಪ್ರವೇಶಿಸಲು ಅವಕಾಶವಿರಲಿಲ್ಲ.

ಕೋವಿಡ್ ಮುನ್ನೆಚ್ಚರಿಕೆ ಕ್ರಮಗಳ ಭಾಗವಾಗಿ ತಾತ ರದ್ದುಪಡಿಸಲಾಗಿದ್ದ ಉಮ್ರಾ ತೀರ್ಥಯಾತ್ರೆಯನ್ನು ಆರೋಗ್ಯ ಸಂರಕ್ಷಣೆಯನ್ನು ಪಾಲಿಸಿ ಪುನರಾರಂಭಿಸಲಾಗಿದೆ. ಇದರೊಂದಿಗೆ,ಅಂಗವಿಕಲ ಯಾತ್ರಾರ್ಥಿಗಳಿಗೆ ಮತ್ವಾಫ್‌ನಲ್ಲಿ ವಿಶೇಷವಾಗಿ ಜೋಡಿಸಲಾದ ಎರಡು ರೇಖೆಗಳ ಮೂಲಕ ಗಾಲಿಕುರ್ಚಿಯ ಮೂಲಕ ತವಾಫ್ ಅನ್ನು ಪೂರ್ಣಗೊಳಿಸಬಹುದು.

ಈ ಹಿಂದೆ ಅಂಗವಿಕಲ ಯಾತ್ರಾರ್ಥಿಗಳು ಹರಮ್ ಮಸೀದಿಯ ಮೇಲಿನ ಮಹಡಿಯ ಮೂಲಕ ತಮ್ಮ ತವಾಫ್ ಅನ್ನು ಪೂರ್ಣಗೊಳಿಸುತ್ತಿದ್ದರು. ಹೊಸ ರೇಖೆಗಳನ್ನು ಕಅಬಾಗೆ ಹತ್ತಿರವೇ ಜೋಡಿಸಲಾಗಿದೆ. 50 ಮಂದಿಗೆ ಒಂದೇ ಸಮಯದಲ್ಲಿ ತವಾಫ್ ನಿರ್ವಹಿಸಬಹುದು ಎಂದು ಹರಮ್ ವ್ಯವಹಾರಗಳ ಸಚಿವಾಲಯ ತಿಳಿಸಿದೆ.

error: Content is protected !! Not allowed copy content from janadhvani.com