janadhvani

Kannada Online News Paper

ಪ್ರವಾದಿ ﷺ ರವರ ಶ್ರೇಷ್ಟತೆಯು ಕಡಿಮೆಯಾಗುವಂತದ್ದಲ್ಲ- ಬಶೀರ್ ಝುಹ್ರಿ ಸೂರಿಕುಮೇರು

ಮಾಣಿ : ಎಸ್‌ವೈಎಸ್ ಹಾಗೂ ಎಸ್ಸೆಸ್ಸೆಫ್ ಸೂರಿಕುಮೇರು ಇದರ ವತಿಯಿಂದ ಸಲೀಂ ಮಾಣಿಯವರ ನಿವಾಸದಲ್ಲಿ ನಡೆದ ” ಪ್ರವಾದಿﷺರವರ ಹಾದಿಯಲ್ಲಿ ಗೆಲುವಿದೆ “ಎಂಬ ಧ್ಯೇಯ ವಾಕ್ಯದೊಂದಿಗೆ ನಡೆದ ಇಲಲ್ ಹಬೀಬ್ ಮಾದರಿ ಮೌಲಿದ್ ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿದ ಎಸ್ ಎಸ್ ಅಬ್ದುಲ್ ಬಶೀರ್ ಝುಹ್ರಿ ” ಪ್ರವಾದಿ ( ಸ.ಅ )ರವರ ಶ್ರೇಷ್ಟತೆಯು ಕಡಿಮೆಯಾಗುವಂತದ್ದು ಅಲ್ಲ,ಅದು ಹೆಚ್ಚುತ್ತಲೇ ಇರುವುದು,ಅವರ ಗೌರವಕ್ಕೆ ಧಕ್ಕೆ ತರುವಂತಹಾ ವ್ಯರ್ಥ ಸಾಹಸಕ್ಕೆ ಇಳಿದವರೆಲ್ಲಾ ನಾಶವಾಗಿ ಹೋಗಿದ್ದಾರೆ ಎಂದು ಹೇಳಿದರು.

ಅಶ್ರಫ್ ಸಖಾಫಿ ಸೂರಿಕುಮೇರು ಕಾರ್ಯಕ್ರಮವನ್ನು ಉದ್ಘಾಟಿಸಿ ದುಆ ಮಾಡಿದರು,ಸೆಂಟರ್ ಪ್ರಧಾನ ಕಾರ್ಯದರ್ಶಿ ಹಾಜಿ ಯೂಸುಫ್ ಸಯೀದ್ ನೇರಳಕಟ್ಟೆ,ಸುಲೈಮಾನ್ ಸೂರಿಕುಮೇರು,ಯೂಸುಫ್ ಹಾಜಿ,ಕರೀಂ ನೆಲ್ಲಿ,ಇಬ್ರಾಹಿಂ ಮುಸ್ಲಿಯಾರ್ ಹಳೀರ,ಅಬ್ದುಲ್ ಫತ್ತಾಹ್ ಹಳೀರ,ಅಶ್ರಫ್ ಪಾರ್ಪಕಜೆ,ಇಬ್ರಾಹಿಂ ಸೂರಿಕುಮೇರು,ಹಂಝ ಕಾಯರಡ್ಕ,ಅಬ್ಬಾಸ್ ಪಟ್ಲಕೋಡಿ,ಮುಂತಾದ ಗಣ್ಯರು ಉಪಸ್ಥಿತರಿದ್ದರು. ಇಸಾಕ್ ಮುಸ್ಲಿಯಾರ್ ಮಾಣಿ ಹಾಗೂ ಜಮಾಲ್ ಮಾಣಿ ಬೈತ್ ಹಾಡಿದರು,ಸಲೀಂ ಮಾಣಿ ಸ್ವಾಗತಿಸಿದರು, ನೌಶಾದ್ ಉಮ್ಮರ್ ಸೂರಿಕುಮೇರು ಧನ್ಯವಾದಗೈದರು.

error: Content is protected !! Not allowed copy content from janadhvani.com