janadhvani

Kannada Online News Paper

ಜಿಲ್ಲಾ ಸುನ್ನೀ ನಾಯಕರ ಸ್ನೇಹ ಸಮ್ಮಿಲನ: SSF ನೊಂದಿಗೆ ಕೈಜೋಡಿಸಿ- ಅಬೂಸುಫ್ಯಾನ್ ಮದನಿ

ಉಡುಪಿ: ಜಿಲ್ಲೆಯ ಸುನ್ನೀ ನಾಯಕರಾದ SYS, SJM, KMJ,SMA ಹಾಗೂ SSF ನ ಹಳೆಯ ಕಾಲದ ನಾಯಕರನ್ನೊಳಗೊಂಡ ನಾಯಕರ ಮಹಾ ಸಮ್ಮಿಲನವು ಅಜ್ಜರಕಾಡು ಸುನ್ನೀ ಕಛೇರಿಯಲ್ಲಿ ನಡೆಯಿತು.

ಮುಖ್ಯ ಭಾಷಣದೊಂದಿಗೆ ವಿಷಯ ಮಂಡಿಸಿದ ಕರ್ನಾಟಕ ಮುಸ್ಲಿಂ ಜಮಾಅತ್ ಉಪಾಧ್ಯಕ್ಷ ಅಬೂಸುಫ್ಯಾನ್ ಮದನಿಯವರು, ಎಲ್ಲ ನಾಯಕರು SSF ನ ಸದಸ್ಯತ್ವ ಅಭಿಯಾನದಲ್ಲಿ ಸಹಕರಿಸಿ, ಸುನ್ನತ್ ಜಮಾಅತ್ನೊಂದಿಗೆ ಕೈ ಜೋಡಿಸುವುದರೊಂದಿಗೆ ಎಲ್ಲ ದಿನವೂ ಕನಿಷ್ಟ 100 ರಕ ಅತ್ ಸುಜೂದ್ ಮಾಡುವ ನಾಯಕರಾಗಬೇಕೆಂದು ಕರೆ ಇತ್ತರು.

ಸಭೆಯಲ್ಲಿ ಅಧ್ಯಕ್ಷ ಸ್ಥಾನ ವಹಿಸಿ, ಉದ್ಘಾಟಿಸಿದ SSF ಉಡುಪಿ ಜಿಲ್ಲಾಧ್ಯಕ್ಷ ಅಹ್ಮದ್ ಶಬೀರ್ ಸಖಾಫಿ, ಯುವ ಜನತೆ ಪ್ರಸಕ್ತ ಸನ್ನಿವೇಶದಲ್ಲಿ ಮಾದಕ ದ್ರವ್ಯಗಳಿಂದ ಮುಕ್ತ ಹೊಂದುವಂತಾಗಲು , ಸ್ವಸ್ಥ ಸಮಾಜ ನಿರ್ಮಾಣಕ್ಕಾಗಿ ಸುನ್ನೀ ಪಡೆಯ ಅವಶ್ಯಕತೆ ಇದೆ.ಆ ನಿಟ್ಟಿನಲ್ಲಿ SSF ಸದಸ್ಯತ್ವಕ್ಕಾಗಿ ಸರ್ವರ ಬೆಂಬಲ ಕೋರಿದರು.ಬಳಿಕ ನಡೆದ ಚರ್ಚಾಕೂಟದಲ್ಲಿ SMA ಪ್ರ. ಕಾರ್ಯದರ್ಶಿ ಮಜೂರು ಸಖಾಫಿ, ರಾಜ್ಯ SSF ಕೋಶಾಧಿಕಾರಿ ರವೂಫ್ಖಾನ್ ಕುಂದಾಪುರ, SYS ನಾಯಕ ಅಡ್ವಕೇಟ್ ಹಂಝತ್ ಹೆಜಮಾಡಿ, SSF ಹಿರಿಯ ನಾಯಕ ಸಿದ್ದೀಕ್ ಮಾಸ್ಟರ್ ಕುಂದಾಪುರ ಭಾಗವಹಿದರು.

ಸಭೆಯಲ್ಲಿ ಮುಸ್ಲಿಂ ಜಮಾತ್ ಜಿಲ್ಲಾ ಕಾರ್ಯಾಧ್ಯಕ್ಷ ಸುಬ್ಹಾನ್ ಹೊನ್ನಾಳ, ಗುಡ್ವಿಲ್‌ಹಾಜಿ ಉಡುಪಿ, ಮನ್ಸೂರ್ ಹಾಜಿ ಕೋಡಿ, SJM ನಾಯಕ ಕಾಸಿಮಿ ಉಸ್ತಾದ್ , ಜಿಲ್ಲಾ SSF ನಾಯಕರಾದ ಮಜೀದ್ ಹನೀಫಿ, ಇಮ್ರಾನ್ ಬಶೀರ್, ಇಬ್ರಾಹಿಮ್ ಮಜೂರ್ ಹಾಜರಿದ್ದರು. SSF ಜಿಲ್ಲಾ ಪ್ರ‌.ಕಾರ್ಯದರ್ಶಿ NC ರಹೀಂ ಹೊಸ್ಮಾರ್ ಸ್ವಾಗತಿಸಿ, ನಿರೂಪಿಸಿದರು. ಜಿಲ್ಲಾ ಉಪಾಧ್ಯಕ್ಷ ಅಶ್ರಫ್ ಮುಸ್ಲಿಯಾರ್ ಧನ್ಯವಾದ ಸಲ್ಲಿಸಿದರು.
ಕೊನೆಯಲ್ಲಿ ತಹ್ಲೀಲ್‌ಹೇಳಿ ಅಗಲಿದ ಸುನ್ನೀ ನಾಯಕರಿಗಾಗಿ ದುಆ ನಡೆಸಲಾಯಿತು.

error: Content is protected !! Not allowed copy content from janadhvani.com