janadhvani

Kannada Online News Paper

ಹಜ್ಜಾಜಿಗಳ ಸೇವೆ ಈ ಬಾರಿ ನೆನಪು ಮಾತ್ರ.

ಇಸ್ಹಾಕ್ ಸಿ.ಐ.ಫಜೀರ್
(KCF AL HAASA.

ಪವಿತ್ರ ‘ದ್ಸುಲ್‌ಹಜ್’ ತಿಂಗಳು ಸಮಾಗಮಗೊಳ್ಳುತ್ತಿದ್ದಂತೆ ಸೌದಿ ಅರೇಬಿಯಾದ ಅನಿವಾಸಿ ಕನ್ನಡಿಗರ ‘ಭರವಸೆಯ ಬೆಳಕು’ ಕೆಸಿಎಫ್ (ಕರ್ನಾಟಕ ಕಲ್ಚರಲ್ ಫೌಂಡೇಶನ್)ನ ಸೌದಿ ಅರೇಬಿಯಾದ ವಿವಿಧ ದಿಕ್ಕಿನಲ್ಲಿರುವ ಕಾರ್ಯಕರ್ತರ ತಂಡ ಜಗತ್ತಿನ ವಿವಿಧ ದಿಕ್ಕಿನಿಂದ ಪವಿತ್ರ ಹಜ್ಹ್ ನಿರ್ವಹಿಸಲು ಮಕ್ಕಾ,ಮದೀನಾ ತಲುಪುವ ಹಜ್ಹ್ ಯಾತ್ರಾರ್ಥಿಗಳ ಸೇವೆಗೈಯ್ಯಲು ಪ್ರತಿ ವರ್ಷ ಸಕಲ ಸನ್ನದ್ಧದೊಂದಿಗೆ ಧುಮುಕುತ್ತಾರೆ.

ಹಜ್ಹ್‌ನ ಕಡೆಯ ಮೂರು ದಿನ (ದ್ಸುಲ್‌ಹಜ್ಹ್ -11,12,13) ಮಿನ,ಮುಝ್ಧಲಿಫಾದಲ್ಲಿ ಲಕ್ಷಾಂತರ ಹಜ್ಜಾಜಿಗಳ ನೂಕು ನುಗ್ಗಲಿನಲ್ಲಿ
ಕಳೆದ ಐದಾರು ವರ್ಷಗಳಿಂದ ದಣಿವರಿಯದ ನಿಸ್ವಾರ್ಥ ಸೇವೆಯ ಫಲವಾಗಿ ಸೌದಿ ಸರಕಾರದ,ಆರೋಗ್ಯ ಇಲಾಖೆ ನೀಡುವ ಪ್ರಶಂಸ ಪತ್ರ ತನ್ನದಾಗಿಸಿಕೊಂಡ ಹೆಗ್ಗಳಿಕೆ ಕೆಸಿಎಫ್‌ಗೆ ಸಲ್ಲುತ್ತದೆ.

ಕಳೆದ ಮೂರು ಬಾರಿ ಹಜ್ಹಾಜಿಗಳ ಸೇವೆ ಮಾಡಲು ಕೆಸಿಎಫ್ ಮೂಲಕ ನನಗೆ ಅವಕಾಶ ಸಿಕ್ಕಿರುವುದು ಲೈಫ್ ಲಾಂಗ್ ಮರೆಯುವಂತದಲ್ಲ.
ಮಕ್ಕಾ ಒಂದು ಪ್ರದೇಶ ಬಿಟ್ಟು ಸೌದಿ ಅರೇಬಿಯಾದ ಇತರ ಪ್ರದೇಶಗಳಲ್ಲಿರುವ ಕೆಸಿಎಫ್ ಕಾರ್ಯಕರ್ತರು ಹಜ್ಹ್‌ ಕರ್ಮದ ಕಡೆಯ ಮೂರು ದಿನ ಮಿನ,ಮುಝ್ಧಲಿಫಾದಲ್ಲಿ ಮಾತ್ರ ಹಜ್ಜಾಜಿಗಳ ಸೇವೆ ಮಾಡುವುದಾದರೆ,
ಮಕ್ಕಾ(ಮದೀನಾ)ಪರಿಸರದಲ್ಲಿರುವ ಕೆಸಿಎಫ್ ಕಾರ್ಯಕರ್ತರು ವಿದೇಶದಿಂದ ಹಜ್ಹಾಜಿಗಳನ್ನು ಹೊತ್ತುಕೊಂಡು ಬರುವ ಮೊದಲ ವಿಮಾನ ಮಕ್ಕಾ,ಮದೀನಾ ತಲುಪುವ ಮೊದಲದಿನದಿಂದ ಹಜ್ಜ್ ಕರ್ಮ ಮುಗಿದು ಹಜ್ಜಾಜಿಗಳ ಕಡೆಯ ವಿಮಾನ ಸೌದಿ ಬಿಟ್ಟು ತೆರಳುವವರೆಗೂ (40 ದಿನ) ದಿನದ 24 ಗಂಟೆಯೂ ತಮ್ಮ ದುಡಿಮೆಯ ನಡುವೆ ಪ್ರತಿಫಲಾಪೇಕ್ಷೆ ಇಲ್ಲದೆ ಹಜ್ಜಾಜಿಗಳ ಸೇವೆಯಲ್ಲಿ ತೊಡಗಿಕೊಳ್ಳುತ್ತಾರೆ.

ಆದರೆ,ಈ ಬಾರಿ ನಮ್ಮ ನಿರೀಕ್ಷೆಯೆಲ್ಲಾ ಉಲ್ಟಾ ಪಲ್ಟಿಯಾಗಿದೆ.
ಕೋವಿಡ್-19 ಮಹಾಮಾರಿಯಿಂದ
ಹಜ್ಹಾಜಿಗಳ ಸೇವೆ ನನ್ನಂತಹ ನೂರಾರು KCF-HVC (Hajj volunteer core) ಕಾರ್ಯಕರ್ತರಲ್ಲಿ ನಿರಾಸೆ ಮೂಡಿಸಿದೆ.
ಇನ್ಶಾಅಲ್ಲಾಹ್ ಮುಂದಿನ ವರ್ಷದಿಂದ ಹಜ್ಜಾಜಿಗಳ ಸೇವೆಯನ್ನು ಮತ್ತೆ ಮುಂದುವರಿಸುವ ನಿರೀಕ್ಷೆ ನಮ್ನಲ್ಲಿದೆ
ಕರುಣಾಮಯಿ ಅಲ್ಲಾಹನು ಅನುಗ್ರಹಿಸಲಿ.

ತ್ಯಾಗ ಬಲಿದಾನಗಳ ಹಬ್ಬ
ಬಕ್ರೀದ್ ಶುಭಾಶಯಗಳು.”

error: Content is protected !! Not allowed copy content from janadhvani.com