4th July 2020

janadhvani

Kannada Online News Paper

ಎಸ್ಸೆಸ್ಸೆಫ್ ಈಶ್ವರಮಂಗಳ ಸೆಕ್ಟರ್ ವತಿಯಿಂದ ಪರಿಸರ ದಿನಾಚರಣೆ ಹಾಗೂ ಸಸಿ ವಿತರಣೆ

ಪುತ್ತೂರು: ಎಸ್ಸೆಸ್ಸೆಫ್ ಕ್ಯಾಂಪಸ್ ಈಶ್ವರಮಂಗಳ ಸೆಕ್ಟರ್ ವತಿಯಿಂದ ನಾಳೆಗೊಂದು ನೆರಳು ಎಂಬ ಘೋಷಣೆಯೊಂದಿಗೆ ವಿಶ್ವ ಪರಿಸರ ದಿನಾಚರಣೆ ಹಾಗೂ ಸಸಿ ವಿತರಣಾ ಕಾರ್ಯಕ್ರಮ ತೈಬಾ ಸೆಂಟರ್ ನಲ್ಲಿ ನಡೆಯಿತು.

ಎಸ್.ವೈ.ಎಸ್.ನಾಯಕರಾದ ಅಬ್ದುಲ್ ಅಝೀಝ್ ಮಿಸ್ಬಾಹಿ ತೈಬಾ ದಲ್ಲಿ ಸಸಿ ನೆಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಂತರ ಎಲ್ಲಾ ಶಾಖೆಗಳಿಗೆ ಸಸಿಯನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಫ್ ಈಶ್ವರಮಂಗಳ ಸೆಕ್ಟರ್ ಅಧ್ಯಕ್ಷರಾದ ಅಬೂಬಕ್ಕರ್ ಲತೀಫಿ,ಪ್ರಧಾನ ಕಾರ್ಯದರ್ಶಿ ನಾಸಿರ್ ಕುಕ್ಕಾಜೆ, ಕ್ಯಾಂಪಸ್ ಕಾರ್ಯದರ್ಶಿ ನೌಫಾನ್ ಕಾವು ಅಲ್ಲದೆ ಎಲ್ಲಾ ಶಾಖೆಗಳ ನಾಯಕರು, ಕ್ಯಾಂಪಸ್ ವಿಧ್ಯಾರ್ಥಿಗಳು ಉಪಸ್ಥಿತಿಯಿದ್ದರು.

error: Content is protected !!