janadhvani

Kannada Online News Paper

ಉಳ್ಳಾಲ: ಮಾರಕ ಕೊರೋನಾ ವೈರಸ್ ಹರಡುವುದನ್ನು ತಡೆಗಟ್ಪುವ ನಿಟ್ಟಿನಲ್ಲಿ, ಕೇಂದ್ರ ಹಾಗೂ ರಾಜ್ಯ ಸರಕಾರಗಳು ಜಾರಿಗೆ ತಂದಿರುವ ಲಾಕ್ ಡೌನ್ ಪರಿಣಾಮ ದಿನಗೂಲಿ ಕಾರ್ಮಿಕರು ಕಷ್ಟ ಅನುಭವಿಸುವಂತಾಗಿದೆ. ಪ್ರತಿಯೊಂದು ಪ್ರದೇಶಗಳಲ್ಲೂ ಬಡವರ್ಗ ಮಾತ್ರವಲ್ಲದೇ ಮಧ್ಯಮ ವರ್ಗದವರ ಬದುಕು ಕೂಡಾ ಶೋಚನೀಯ.

ಈ ನಿಟ್ಟಿನಲ್ಲಿ ಕಿನ್ಯ ಪ್ರದೇಶದ ವಿವಿಧ ಭಾಗದ 174 ಅರ್ಹ ಕುಟುಂಬಕ್ಕೆ ಊರಿನ ಎಸ್.ವೈ.ಎಸ್,ಎಸ್ಸೆಸ್ಸೆಫ್ ಸಂಘಟನೆಗಳ ಸಹಭಾಗಿತ್ವದಲ್ಲಿ ಇತ್ತೀಚೆಗೆ ಅಸ್ತಿತ್ವಕ್ಕೆ ಬಂದ “ಎಸ್.ವೈ.ಎಸ್ ಸಾಂತ್ವನ ಟೀಂ” ನೆರವನ್ನು ನೀಡಿದೆ.

ಪ್ರದೇಶದ ಖುತುಬಿನಗರ, ಮೀನಾದಿ, ಬೆಳರಿಂಗೆ, ಕುರಿಯ, ರಹ್ಮತ್ ನಗರ, ಉಕ್ಕುಡ, ಮೀಂಪ್ರಿ ಭಾಗದಿಂದ ಆಯ್ದ ಅರ್ಹ 174 ಕುಟುಂಬಕ್ಕೆ ಸರಿಸುಮಾರು ಒಂದು ಮುಕ್ಕಾಲು ಲಕ್ಷ ರೂಪಾಯಿ ಬೆಲೆಯ 15 ಬಗೆಯ ದಿನಸಿ ಸಾಮಾಗ್ರಿಗಳ ಕಿಟ್ ಅನ್ನು ವಿತರಿಸಲಾಯಿತು.

ಸಮಿತಿ ನಾಯಕ, ಸದಸ್ಯರ ಈ ಕಾರ್ಯಾಚರಣೆಗೆ ಊರಿನ ದಾನಿಗಳು ಹಾಗೂ ಗಲ್ಫ್ ನಾಡಿನಲ್ಲಿ ದುಡಿಯುತ್ತಿರುವ ಊರಿನ ಉದಾರಿಗಳ ಸೇವೆ, ಸಹಾಯ, ಸಹಕಾರ ಅನನ್ಯ ಹಾಗೂ ಅವರ್ಣನೀಯವಾಗಿದೆ.

ಸಮಿತಿ ಅಧ್ಯಕ್ಷ ಸಯ್ಯಿದ್ ಅಲವಿ ಅಲ್ ಹೈದ್ರೋಸಿ ತಂಙಳ್ ರವರ ಅಧ್ಯಕ್ಷತೆಯಲ್ಲಿ
ನಡೆದ ಕಿಟ್ ವಿತರಣಾ ಸರಳ ಸಮಾರಂಭದಲ್ಲಿ ಎಸ್.ವೈ.ಎಸ್ ದ.ಕ ವೆಸ್ಟ್ ಜಿಲ್ಲಾಧ್ಯಕ್ಷ ಅಶ್ಅರಿಯ್ಯಾ ಮುಹಮ್ಮದ್ ಅಲೀ ಸಖಾಫಿ ರವರು ಪ್ರಸ್ತುತ ಕಾರ್ಯಾಚರಣೆಯನ್ನು ಶ್ಲಾಘಿಸಿ ಶುಭ ಹಾರೈಸಿದರು.

ಊರಿನ ಸುನ್ನೀ ಸಂಘ,ಸಂಸ್ಥೆಗಳ ನಾಯಕರು ಈ ಮಹತ್ತರವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಸಾಂತ್ವನ ಟೀಂ ಕನ್ವೀನರ್ ಮಹ್ಬೂಬುರ್ರಹ್ಮಾನ್ ಸಖಾಫಿ ಕಿನ್ಯ ಸ್ವಾಗತಿಸಿ,ವಂದಿಸಿದರು.

error: Content is protected !!
%d bloggers like this: