janadhvani

Kannada Online News Paper

ರಿಯಾದ್,ಮಾ.24: ಸೌದಿಯಲ್ಲಿ ಕೋವಿಡ್ 19 ಬಾಧಿತ ವ್ಯಕ್ತಿಯೊಬ್ಬರು ಮರಣ ಹೊಂದಿದ್ದಾರೆ. ಇಂದು, ಸೌದಿಯಲ್ಲಿ 205 ಜನರಿಗೆ ಕೋವಿಡ್ 19 ಸೋಂಕು ತಗುಲಿರುವುದಾಗಿ ದೃಢಪಡಿಸಲಾಗಿದೆ. ಇದರೊಂದಿಗೆ ರೋಗಿಗಳ ಸಂಖ್ಯೆ 767 ತಲುಪಿದೆ. ಅಫ್ಘಾನಿಸ್ತಾನದ 51 ವರ್ಷದ ವ್ಯಕ್ತಿ ಮದೀನಾದಲ್ಲಿ ನಿಧನ ಹೊಂದಿದ್ದು, ಇದರೊಂದಿಗೆ ಸೌದಿ ಅರೇಬಿಯಾದಲ್ಲಿ ಪ್ರಥಮ ಕೋವಿಡ್-19 ಮರಣ ದಾಖಲಾಗಿದೆ.

ಇಂದಿನ ಹೊಸ ಪ್ರಕರಣಗಳು ಈ ಕೆಳಗಿನಂತಿವೆ. ರಿಯಾದ್‌ನಲ್ಲಿ 69, ಜಿದ್ದಾದಲ್ಲಿ 82, ಅಲ್-ಬಹಾದಲ್ಲಿ 12, ಬೀಶಾ ಮತ್ತು ನಜ್ರಾನ್‌ನಲ್ಲಿ ತಲಾ 8,ಅಬಹಾ,ಖತೀಫ್ ಮತ್ತು ದಮ್ಮಾಮ್ ನಲ್ಲಿ ತಲಾ 6, ಜಿಝಾನ್ ನಲ್ಲಿ 3, ಖೋಬರ್ ಮತ್ತು ದಹ್ರಾನ್ ನಲ್ಲಿ ತಲಾ 2, ಮದೀನಾದಲ್ಲಿ ಒಬ್ಬರಿಗೆ ಸೋಂಕು ದೃಢಪಡಿಸಲಾಗಿದೆ.

ಒಟ್ಟು ಪ್ರಕರಣಗಳಲ್ಲಿ 28 ಮಂದಿಯನ್ನು ರೋಗ ಮುಕ್ತರಾಗಿ ಈಗಾಗಲೇ ಬಿಡುಗಡೆ ಮಾಡಲಾಗಿದೆ. ದೃಢ ಪಡಿಸಿದ 119 ಮಂದಿ ಈ ಹಿಂದೆ ವಿದೇಶದಿಂದ ಮರಳಿದವರಾಗಿದ್ದಾರೆ.

error: Content is protected !!
%d bloggers like this: