ದುಬೈ: ಯುಎಇ ರೆಸಿಡೆನ್ಸಿ ವಿಸಾ ಇರುವವರು ಊರಲ್ಲಿ ಇದ್ದರೆ, ತಮ್ಮ ಹೆಸರನ್ನು ಯುಎಇ ವಿದೇಶಾಂಗ ಸಚಿವಾಲಯದ ವೆಬ್ಸೈಟ್ನಲ್ಲಿ ನೋಂದಾಯಿಸಿಕೊಳ್ಳಬೇಕು. ಈ ಮೂಲಕ ತುರ್ತು ಸಂದರ್ಭಗಳಲ್ಲಿ ವಲಸಿಗರಿಗೆ ಮರಳಲು ಅನುಕೂಲವಾಗಲಿದೆ ಎಂದು ಸಚಿವಾಲಯ ತಿಳಿಸಿದೆ.
ವಿದೇಶಾಂಗ ವ್ಯವಹಾರ ಮತ್ತು ಅಂತರ್ರಾಷ್ಟ್ರೀಯ ಸಹಕಾರ ಸಚಿವಾಲಯದ www.mofaic. gov.ae ವೆಬ್ ಸೈಟ್ ಮೂಲಕ ವಲಸಿಗರು ತಮ್ಮ ಹೆಸರುಗಳನ್ನು ನೋಂದಾಯಿಸಿಕೊಳ್ಳಬೇಕು. ಅನಿವಾಸಿಗಳು ಅವರ ಸ್ವದೇಶದಲ್ಲಿದ್ದರೆ ಅಥವಾ ಬೇರೆ ಯಾವುದೇ ವಿದೇಶದಲ್ಲಿದ್ದರೂ ಈ ಸೌಲಭ್ಯದೊಂದಿಗೆ ನೋಂದಾಯಿಸಿಕೊಳ್ಳಬೇಕು. ವೆಬ್ಸೈಟ್ನ ಸೇವಾ ವಿಭಾಗದಲ್ಲಿ ತವಜುದಿ ಎನ್ನುವ ಹೊಸ ಸೇವೆಯನ್ನು ಪ್ರಾರಂಭಿಸಲಾಗಿದೆ.
ಇದನ್ನು ಕ್ಲಿಕ್ ಮಾಡುವುದರ ಮೂಲಕ, ಕಳೆದ ಎರಡು ವಾರಗಳಲ್ಲಿ ಭೇಟಿ ನೀಡಿದ ದೇಶಗಳು, ಹೆಸರು, ಎಮಿರೇಟ್ಸ್ ಐಡಿ ಸಂಖ್ಯೆ, ಮೊಬೈಲ್ ಸಂಖ್ಯೆ, ಯುಎಇಯಲ್ಲಿರುವ ಸಂಬಂಧಿಯ ಮೊಬೈಲ್ ಸಂಖ್ಯೆ ಮತ್ತಿತರ ವಿವರಗಳನ್ನು ನೀಡಿ ನೋಂದಣಿ ಪೂರ್ಣಗೊಳಿಸಲು ಸಾಧ್ಯವಾಗುತ್ತದೆ. ತುರ್ತು ಪರಿಸ್ಥಿತಿಯಲ್ಲಿ ವಲಸಿಗರನ್ನು ಸುರಕ್ಷಿತವಾಗಿ ಹಿಂದಿರುಗಿಸಲು ವಿದೇಶಾಂಗ ಸಚಿವಾಲಯ ಇಂತಹ ಸೇವೆಯನ್ನು ಪ್ರಾರಂಭಿಸುತ್ತಿರುವುದು ಇದೇ ಮೊದಲು ಎನ್ನಲಾಗಿದೆ.















ಇನ್ನಷ್ಟು ಸುದ್ದಿಗಳು
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಸೌದಿ ಅರೇಬಿಯಾ ವಿರುದ್ಧ ಹೌತಿಗಳ ದಾಳಿ; 73 ನಾಗರಿಕರಿಗೆ ಗಾಯ
ಹಾರ್ಮುಜ್ ತೆರೆಯುವುದಕ್ಕೆ ಆದ್ಯತೆ; ಬಿಕ್ಕಟ್ಟು ಮುಂದುವರಿದರೆ ಕೈಗಾರಿಕಾ ದುರಂತ- ಕತಾರ್
ಸೌದಿಯ ವೈಮಾನಿಕ ದಾಳಿ ಇರಾಕಿ ಜನತೆ ಅಥವಾ ಸರ್ಕಾರದ ವಿರುದ್ಧವಲ್ಲ- ಸೌದಿ ಅರೇಬಿಯಾ
ಇಸ್ರೇಲಿ ಉತ್ಪನ್ನಗಳ ಆಮದು ನಿಷೇಧ: ಐರ್ಲೆಂಡ್ ಕ್ರಮವನ್ನು ಸ್ವಾಗತಿಸಿದ ಕತಾರ್
ಪ್ರಾದೇಶಿಕ ಮಟ್ಟದಲ್ಲಿ ಅನಿಶ್ಚಿತತೆ: ಮೂರು ಗಲ್ಫ್ ದೇಶಗಳಿಗೆ ವಿಮಾನ ಸೇವೆ ಸ್ಥಗಿತ
ಅನಿವಾಸಿ ಭಾರತೀಯರ ಪಾಸ್ಪೋರ್ಟ್ ಶುಲ್ಕ ಹೆಚ್ಚಳ: ಮೂರು ವಾರಗಳಲ್ಲಿ ನಿರ್ಧಾರ ತಿಳಿಸುವಂತೆ ಕೇಂದ್ರಕ್ಕೆ ಕೋರ್ಟ್ ನಿರ್ದೇಶನ
ಹೋರ್ಮುಜ್ ಮೂಲಕ ಸುರಕ್ಷಿತ ಸಾರಿಗೆ- ಪ್ರಮುಖ ಚರ್ಚೆಗಾಗಿ ಇರಾನ್ಗೆ ತಲುಪಿದ ಒಮಾನ್ ನಿಯೋಗ
ಉಮ್ರಾ ಯಾತ್ರಿಕರಿಗೆ ಸಿಹಿ ಸುದ್ದಿ: ಒಂದು ವರ್ಷ ಕಾಲಾವಧಿಯ ‘ಮಲ್ಟಿ ಎಂಟ್ರಿ’ ಉಮ್ರಾ ವೀಸಾ ಬಿಡುಗಡೆ
ಭಾರತದ ವಿಮಾನ ಪ್ರಯಾಣಿಕರಿಗೆ ಸಿಹಿ ಸುದ್ದಿ: ಟಿಕೆಟ್ ದರಕ್ಕೆ ಮಾಸಿಕ ಕಂತಿನ ಸೌಲಭ್ಯ