janadhvani

Kannada Online News Paper

ಕಾಸರಗೋಡು: 12 ಗಡಿ ರಸ್ತೆಗಳು ಸಂಪೂರ್ಣ ಬಂದ್- 5 ರಲ್ಲಿ ಕಠಿಣ ತಪಾಸಣೆ

ಮಂಜೇಶ್ವರ: ಕರ್ನಾಟಕದ ಗಡಿಯಲ್ಲಿರುವ ಜಿಲ್ಲೆಯ 12 ರಸ್ತೆಗಳನ್ನು ಮುಚ್ಚಲಾಗುವುದು. 5 ಗಡಿ ರಸ್ತೆಗಳಲ್ಲಿ ಕಠಿಣ ಭದ್ರತಾ ತಪಾಸಣಾ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ. ಡಿ.ಸಜಿತ್ ಬಾಬು ಹೇಳಿದರು.

ಮಂಜೇಶ್ವರದ ತೂಮಿನಾಡ್ ರಸ್ತೆ, ಕೆದುಂಬಾಡಿ ಪದವು ರಸ್ತೆ, ಸುಂಕದಕಟ್ಟೆ ಮುಡಿಪು ರಸ್ತೆ, ಕರುಡ ಪದವು ರಸ್ತೆ, ಮುಳಿಗದ್ದೆ ರಸ್ತೆ, ಬೆರಿಪದವು ರಸ್ತೆ, ಬದಿಯಡ್ಕದ ಸ್ವರ್ಗ ಅರಿಯಪದವ್ ರಸ್ತೆ, ಕೊಟ್ಟಿಯಾಡಿ ಪಳ್ಳತ್ತೂರ್ ಈಶ್ವರಮಂಗಳ ದೇಲಂಪಾಡಿ ರಸ್ತೆ, ಗಾಳಿಮುಖ ಈಶ್ವರಮಂಗಳ ದೇಲಂಪಾಡಿ ರಸ್ತೆ, ಬೇಡಗ ಚೆನ್ನಮ್ಕುಂಡ್ ಚಾಮಕೊಚ್ಚಿ ರಸ್ತೆ,ನಾಟ್ಟಕ್ಕಲ್ ಸುಳ್ಯಪದವ್ ರಸ್ತೆ ಸಂಪೂರ್ಣ ಮುಚ್ಚಲಾಗುವುದು.

ತಲಪಾಡಿ ರಾಷ್ಟ್ರೀಯ ಹೆದ್ದಾರಿ, ಅಡುಕಸ್ಥಳ ಅಡ್ಯನಡ್ಕ ರಸ್ತೆ, ಆದೂರ್ – ಕೊಟ್ಟಿಯಾಡಿ – ಸುಳ್ಯ ರಾಜ್ಯ ಹೆದ್ದಾರಿ, ಮಾಣಿಮೂಲ ಸುಳ್ಯ ರಸ್ತೆ ಮತ್ತು ಪಾನತ್ತೂರ್ ಚೆಂಪೇರಿ ಮಡಿಕೇರಿ ರಸ್ತೆಗಳಲ್ಲಿ ಹಾದುಹೋಗುವ ಪ್ರಯಾಣಿಕರನ್ನು ಪರಿಶೀಲಿಸಿದ ನಂತರವೇ ಬಿಡುಗಡೆ ಮಾಡಲಾಗುತ್ತದೆ.

5 ಗಡಿ ರಸ್ತೆಗಳಲ್ಲಿ ವೈದ್ಯರು, ಕಿರಿಯ ಆರೋಗ್ಯ ನಿರೀಕ್ಷಕರು, ಆರೋಗ್ಯ ಕಾರ್ಯಕರ್ತರು ಮತ್ತು ಪೊಲೀಸರ ತಂಡ ತಪಾಸಣೆ ನಡೆಸಲಿದೆ. ಕೊರೋನಾ ಕೋರ್ ಸಮಿತಿ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

error: Content is protected !! Not allowed copy content from janadhvani.com