ರಿಯಾದ್,ಮ.20: ಸೌದಿಯಲ್ಲಿ ಸಾರ್ವಜನಿಕ ಸಾರಿಗೆಯನ್ನು ನಿಷೇಧಿಸಲು ಗೃಹ ಸಚಿವಾಲಯ ಆದೇಶಿಸಿದೆ. ನಾಳೆ ಬೆಳಿಗ್ಗೆ 6 ಗಂಟೆಯಿಂದ ಈ ಆದೇಶ ಜಾರಿಗೆ ಬರಲಿದೆ. ದೇಶೀಯ ವಿಮಾನಗಳು, ಸಾರ್ವಜನಿಕ ಸಾರಿಗೆಯ ಬಸ್ಸುಗಳು, ರೈಲು ಸೇವೆಗಳು ಮತ್ತು ಟ್ಯಾಕ್ಸಿಗಳಿಗೆ ಈ ಆದೇಶ ಅನ್ವಯಿಸುತ್ತದೆ.
ನಾಳೆ ಬೆಳಿಗ್ಗೆ ಆರರಿಂದ 14 ದಿನಗಳವರೆಗೆ ಸೇವೆಗಳನ್ನು ಸ್ಥಗಿತಗೊಳಿಸಲಾಗುವುದು. ಆದರೆ ಖಾಸಗಿ ಸಂಸ್ಥೆಗಳ ಒಡೆತನದ ಸಿಬ್ಬಂದಿಗಳ ಬಸ್‌ಗಳನ್ನು ಬಳಸಬಹುದು. ಸರಕು ವಿಮಾನಗಳು ಮತ್ತು ರೈಲುಗಳು ಎಂದಿನಂತೆ ಕಾರ್ಯನಿರ್ವಹಿಸುತ್ತವೆ.
ದೇಶದಲ್ಲಿ ಒಟ್ಟು 274 ಕೋವಿಡ್ 19 ಪ್ರಕರಣಗಳು ದಾಖಲಾಗಿವೆ. ನಿನ್ನೆ ರಾತ್ರಿ ಮತ್ತೆ 36 ಜನರಿಗೆ ಈ ರೋಗ ಪತ್ತೆಯಾಗಿದೆ. ಈ ಪೈಕಿ 21 ಮಂದಿ ರಿಯಾದ್‌ನಲ್ಲಿದ್ದಾರೆ. 2 ಜನರ ಸ್ಥಿತಿ ಹದಗೆಟ್ಟಿದೆ. ಎಂಟು ಮಂದಿ ರೋಗ ಮುಕ್ತರಾಗಿದ್ದಾರೆ. ರೋಗಿಗಳ ಪೈಕಿ ಹೆಚ್ಚಿನವರು ವಿದೇಶಿಗಳಾಗಿದ್ದು, ಉಳಿದವರು ಇವರಿಂದ ರೋಗ ಹರಡಿದವರಾಗಿದ್ದಾರೆ.
ಆರೋಗ್ಯ, ಸೇವೆಗಳು ಮತ್ತು ಮೂಲಭೂತ ಸರಕುಗಳಾದ ಆಹಾರ, ಇಂಧನ, ನೀರು ಮತ್ತು ಸಂವಹನ ಮುಂತಾದ ಪ್ರಮುಖ ಕ್ಷೇತ್ರಗಳಿಗೆ ಸಂಬಂಧಿಸಿದ ಸಾರಿಗೆ, ಸರಕು ಸಾಗಣೆ ಮತ್ತು ಅಗತ್ಯ ಭದ್ರತಾ ಸಿಬ್ಬಂದಿಗಳ ವರ್ಗಾವಣೆ ಮುಂತಾದವುಗಳಿಗೆ ನಿಷೇಧ ಅನ್ವಯಿಸುವುದಿಲ್ಲ ಎಂದು ಎಸ್‌ಪಿಎ ವರದಿ ತಿಳಿಸಿದೆ.















ಇನ್ನಷ್ಟು ಸುದ್ದಿಗಳು
ಸೌದಿಯ ವೈಮಾನಿಕ ದಾಳಿ ಇರಾಕಿ ಜನತೆ ಅಥವಾ ಸರ್ಕಾರದ ವಿರುದ್ಧವಲ್ಲ- ಸೌದಿ ಅರೇಬಿಯಾ
ಇಸ್ರೇಲಿ ಉತ್ಪನ್ನಗಳ ಆಮದು ನಿಷೇಧ: ಐರ್ಲೆಂಡ್ ಕ್ರಮವನ್ನು ಸ್ವಾಗತಿಸಿದ ಕತಾರ್
ಪ್ರಾದೇಶಿಕ ಮಟ್ಟದಲ್ಲಿ ಅನಿಶ್ಚಿತತೆ: ಮೂರು ಗಲ್ಫ್ ದೇಶಗಳಿಗೆ ವಿಮಾನ ಸೇವೆ ಸ್ಥಗಿತ
ಅನಿವಾಸಿ ಭಾರತೀಯರ ಪಾಸ್ಪೋರ್ಟ್ ಶುಲ್ಕ ಹೆಚ್ಚಳ: ಮೂರು ವಾರಗಳಲ್ಲಿ ನಿರ್ಧಾರ ತಿಳಿಸುವಂತೆ ಕೇಂದ್ರಕ್ಕೆ ಕೋರ್ಟ್ ನಿರ್ದೇಶನ
ಹೋರ್ಮುಜ್ ಮೂಲಕ ಸುರಕ್ಷಿತ ಸಾರಿಗೆ- ಪ್ರಮುಖ ಚರ್ಚೆಗಾಗಿ ಇರಾನ್ಗೆ ತಲುಪಿದ ಒಮಾನ್ ನಿಯೋಗ
ಉಮ್ರಾ ಯಾತ್ರಿಕರಿಗೆ ಸಿಹಿ ಸುದ್ದಿ: ಒಂದು ವರ್ಷ ಕಾಲಾವಧಿಯ ‘ಮಲ್ಟಿ ಎಂಟ್ರಿ’ ಉಮ್ರಾ ವೀಸಾ ಬಿಡುಗಡೆ
ಭಾರತದ ವಿಮಾನ ಪ್ರಯಾಣಿಕರಿಗೆ ಸಿಹಿ ಸುದ್ದಿ: ಟಿಕೆಟ್ ದರಕ್ಕೆ ಮಾಸಿಕ ಕಂತಿನ ಸೌಲಭ್ಯ
ನಿಖರವಲ್ಲದ ಸುದ್ದಿ ಹಂಚಿಕೊಂಡರೆ ಅಪಾಯ- ನಕಲಿ ಸುದ್ದಿಗಳ ವಿರುದ್ಧ ಸೌದಿಯಲ್ಲಿ ಎಚ್ಚರಿಕೆ
ಸೌದಿ: ‘ಏಕೀಕೃತ ರಾಷ್ಟ್ರೀಯ ವೀಸಾ ಪ್ಲಾಟ್ಫಾರ್ಮ್’ ಅನುಷ್ಠಾನಕ್ಕೆ- ವೀಸಾ ಪ್ರಕ್ರಿಯೆಗಳು ಇನ್ನಷ್ಟು ಸುಲಭ
ಅಂತಾರಾಷ್ಟ್ರೀಯ ಸರ್ವೀಸ್ಗಳಲ್ಲಿ ದರ ಕಡಿತ – ಏರ್ ಇಂಡಿಯಾ ಎಕ್ಸ್ಪ್ರೆಸ್ ಘೋಷಣೆ