janadhvani

Kannada Online News Paper

ಸೌದಿ: ಬಸ್ಸು, ಟ್ಯಾಕ್ಸಿ ಸಹಿತ ಸಾರ್ವಜನಿಕ ಸಾರಿಗೆ ನಿಷೇಧ

ರಿಯಾದ್,ಮ.20: ಸೌದಿಯಲ್ಲಿ ಸಾರ್ವಜನಿಕ ಸಾರಿಗೆಯನ್ನು ನಿಷೇಧಿಸಲು ಗೃಹ ಸಚಿವಾಲಯ ಆದೇಶಿಸಿದೆ. ನಾಳೆ ಬೆಳಿಗ್ಗೆ 6 ಗಂಟೆಯಿಂದ ಈ ಆದೇಶ ಜಾರಿಗೆ ಬರಲಿದೆ. ದೇಶೀಯ ವಿಮಾನಗಳು, ಸಾರ್ವಜನಿಕ ಸಾರಿಗೆಯ ಬಸ್ಸುಗಳು, ರೈಲು ಸೇವೆಗಳು ಮತ್ತು ಟ್ಯಾಕ್ಸಿಗಳಿಗೆ ಈ ಆದೇಶ ಅನ್ವಯಿಸುತ್ತದೆ.

ನಾಳೆ ಬೆಳಿಗ್ಗೆ ಆರರಿಂದ 14 ದಿನಗಳವರೆಗೆ ಸೇವೆಗಳನ್ನು ಸ್ಥಗಿತಗೊಳಿಸಲಾಗುವುದು. ಆದರೆ ಖಾಸಗಿ ಸಂಸ್ಥೆಗಳ ಒಡೆತನದ ಸಿಬ್ಬಂದಿಗಳ ಬಸ್‌ಗಳನ್ನು ಬಳಸಬಹುದು. ಸರಕು ವಿಮಾನಗಳು ಮತ್ತು ರೈಲುಗಳು ಎಂದಿನಂತೆ ಕಾರ್ಯನಿರ್ವಹಿಸುತ್ತವೆ.

ದೇಶದಲ್ಲಿ ಒಟ್ಟು 274 ಕೋವಿಡ್ 19 ಪ್ರಕರಣಗಳು ದಾಖಲಾಗಿವೆ. ನಿನ್ನೆ ರಾತ್ರಿ ಮತ್ತೆ 36 ಜನರಿಗೆ ಈ ರೋಗ ಪತ್ತೆಯಾಗಿದೆ. ಈ ಪೈಕಿ 21 ಮಂದಿ ರಿಯಾದ್‌ನಲ್ಲಿದ್ದಾರೆ. 2 ಜನರ ಸ್ಥಿತಿ ಹದಗೆಟ್ಟಿದೆ. ಎಂಟು ಮಂದಿ ರೋಗ ಮುಕ್ತರಾಗಿದ್ದಾರೆ. ರೋಗಿಗಳ ಪೈಕಿ ಹೆಚ್ಚಿನವರು ವಿದೇಶಿಗಳಾಗಿದ್ದು, ಉಳಿದವರು ಇವರಿಂದ ರೋಗ ಹರಡಿದವರಾಗಿದ್ದಾರೆ.

ಆರೋಗ್ಯ, ಸೇವೆಗಳು ಮತ್ತು ಮೂಲಭೂತ ಸರಕುಗಳಾದ ಆಹಾರ, ಇಂಧನ, ನೀರು ಮತ್ತು ಸಂವಹನ ಮುಂತಾದ ಪ್ರಮುಖ ಕ್ಷೇತ್ರಗಳಿಗೆ ಸಂಬಂಧಿಸಿದ ಸಾರಿಗೆ, ಸರಕು ಸಾಗಣೆ ಮತ್ತು ಅಗತ್ಯ ಭದ್ರತಾ ಸಿಬ್ಬಂದಿಗಳ ವರ್ಗಾವಣೆ ಮುಂತಾದವುಗಳಿಗೆ ನಿಷೇಧ ಅನ್ವಯಿಸುವುದಿಲ್ಲ ಎಂದು ಎಸ್‌ಪಿಎ ವರದಿ ತಿಳಿಸಿದೆ.

error: Content is protected !! Not allowed copy content from janadhvani.com