janadhvani

Kannada Online News Paper

ದೋಹಾ,ಮಾ.15: ಕೋವಿಡ್ 19 ಹರಡಿದ ಹಿನ್ನೆಲೆಯಲ್ಲಿ ಕತಾರ್‌ನಲ್ಲಿ ವೈರಸ್ ತಡೆಗಟ್ಟುವ ಕ್ರಮಗಳನ್ನು ಬಿಗಿಗೊಳಿಸಲಾಗಿದೆ. ಸೌದಿ ಹೊರತುಪಡಿಸಿ ಐದು ಕೊಲ್ಲಿ ರಾಷ್ಟ್ರಗಳ 89 ಜನರಿಗೆ ಇಂದು ಕೋವಿಡ್ 19 ದೃಢ ಪಡಿಸಿದೆ. ಕತಾರ್‌ನಲ್ಲಿ ಇಂದು ಅತಿ ಹೆಚ್ಚು ಪ್ರಕರಣಗಳು ಪತ್ತೆಯಾಗಿವೆ. 64 ವಲಸಿಗರಿಗೆ ದೃಢ ಪಡಿಸುವುದರೊಂದಿಗೆ, ಒಟ್ಟು ರೋಗಿಗಳ ಸಂಖ್ಯೆ 401 ತಲುಪಿದೆ.

ಕತಾರ್‌ನಲ್ಲಿ ಜಾರಿಗೆ ತಂದ ನಿರ್ಬಂಧಗಳು:

  • ದೋಹಾಕೆ ಬುಧವಾರದಿಂದ ಎಲ್ಲಾ ವಿಮಾನಗಳನ್ನು ನಿಷೇಧಿಸಲಾಗಿದೆ.
  • ವಿಮಾನಯಾನ ಸಂಸ್ಥೆಯನ್ನು ಎರಡು ವಾರಗಳವರೆಗೆ ನಿರ್ಬಂಧಿಸಲಾಗಿದೆ.
  • ದೋಹಾ ಮೆಟ್ರೋ ಸೇವೆ ಮತ್ತು ಸಾರ್ವಜನಿಕ ಬಸ್ ಸೇವೆ ಕಾರ್ವಾ ಭಾನುವಾರದಿಂದ ಕಾರ್ಯ ನಿರ್ವಹಿಸುವುದಿಲ್ಲ.
  • 55 ವರ್ಷಕ್ಕಿಂತ ಮೇಲ್ಪಟ್ಟವರು, ಗರ್ಭಿಣಿ, ಜೀವನಶೈಲಿ ರೋಗಿಗಳು ಮತ್ತು ಮೂತ್ರಪಿಂಡದ ರೋಗಿಗಳು ಮನೆಯಲ್ಲೇ ಕೆಲಸ ಮಾಡಬೇಕು.
  • ಹೋಟೆಲ್‌ಗಳಲ್ಲಿ ತಿನ್ನ ಬಾರದು,ನೀಡ ಬಾರದು, ಪಾರ್ಸೆಲ್ ನೀಡಬಹುದು.

ಪರಿಹಾರ ಯೋಜನೆಗಳು:

  • ಬ್ಯಾಂಕ್ ಸಾಲಗಳಿಗೆ ಆರು ತಿಂಗಳವರೆಗೆ ವಿನಾಯಿತಿ.
  • ಆಹಾರ ಮತ್ತು ವೈದ್ಯಕೀಯ ಉತ್ಪನ್ನಗಳು ತೆರಿಗೆ ಮುಕ್ತ.
  • ಅದರಂತೆ ಸರಕುಗಳ ಬೆಲೆಯನ್ನು ಕಡಿಮೆ ಮಾಡಬೇಕು.
  • ಆತಿಥ್ಯ, ಪ್ರವಾಸೋದ್ಯಮ ಮತ್ತು ಚಿಲ್ಲರೆ ವ್ಯಾಪಾರ ಸಂಸ್ಥೆಗಳಿಗೆ ವಿದ್ಯುತ್ ಅಥವಾ ನೀರಿನ ಬಾಡಿಗೆ ಇಲ್ಲ.
  • ಸಣ್ಣ ಉದ್ಯಮಗಳು ಮತ್ತು ಲಾಜಿಸ್ಟಿಕ್ಸ್ ಸಂಸ್ಥೆಗಳಿಗೆ ಕಟ್ಟಡ ಬಾಡಿಗೆ ಇಲ್ಲ.
error: Content is protected !!
%d bloggers like this: