janadhvani

Kannada Online News Paper

ದುಬೈ: ಕೋವಿಡ್ 9 ತಡೆಗಟ್ಟುವ ಹಿನ್ನಲೆಯಲ್ಲಿ ಯುಎಇಯು ವೀಸಾ ನೀಡುವುದನ್ನು ತಾತ್ಕಾಲಿಕವಾಗಿ ತಡೆಹಿಡಿದಿದೆ. ಈ ತಿಂಗಳ 17 ರಿಂದ ಯಾವುದೇ ವೀಸಾ ನೀಡಲಾಗುವುದಿಲ್ಲ. ರಾಜತಾಂತ್ರಿಕ ಪಾಸ್‌ಪೋರ್ಟ್‌ಗಳನ್ನು ಹೊಂದಿರುವವರಿಗೆ ಮಾತ್ರ ವಿನಾಯಿತಿ ನೀಡಲಾಗಿದೆ. ಅಬುಧಾಬಿಯ ಪ್ರವಾಸಿ ತಾಣಗಳಿಗೆ ಪ್ರವೇಶವನ್ನೂ ನಿಷೇಧಿಸಲಾಗಿದ್ದು, ಶೈಖ್ ಝಾಯಿದ್ ಗ್ರ್ಯಾಂಡ್ ಮಸೀದಿಯನ್ನು ಕೂಡ ಮುಚ್ಚಲಾಗುವುದು ಎನ್ನಲಾಗಿದೆ.

ಯುಎಇ ರಾಷ್ಟ್ರೀಯನ್ನರು ಮತ್ತು  ಹಿರಿಯ ವಿದೇಶೀ ನಾಗರಿಕರು ಮನೆ ಬಿಟ್ಟು ಹೊರಡದಂತೆ ಮನವಿ ಮಾಡಲಾಗಿದೆ. ಬಹ್‌ರೈನ್ ಫಾರ್ಮುಲಾ ಒನ್ ಕಾರ್ ರೇಸ್ ಸೇರಿದಂತೆ ಅಸಂಖ್ಯಾತ ಕಾರ್ಯಕ್ರಮಗಳನ್ನು ಕೂಡ ಈಗಾಗಲೇ ತಡೆಯಲಾಗಿದೆ. ಶಾರ್ಜಾದಲ್ಲಿ ಅತೀ ಹೆಚ್ಚು ಜನಸೇರುವ ಎಲ್ಲಾ ಕೂಟಗಳನ್ನು ನಿಷೇಧಿಸಿದೆ. ಕೊಲ್ಲಿ ರಾಷ್ಟ್ರಗಳು ಆರ್ಥಿಕ ಪ್ಯಾಕೇಜ್‌ಗಳನ್ನು ಘೋಷಿಸುವ ಮೂಲಕ ವ್ಯವಹಾರಿಕ ಮತ್ತು ಆರ್ಥಿಕ ಬಿಕ್ಕಟ್ಟನ್ನು ಪರಿಹರಿಸಲು ಮುಂದಾಗಿವೆ.

error: Content is protected !!
%d bloggers like this: