janadhvani

Kannada Online News Paper

ಎಸ್ಸೆಸ್ಸೆಫ್ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ವತಿಯಿಂದ ಅಡ್ಯಾರ್ ಕಣ್ಣೂರಿನಲ್ಲಿ ನಡೆಯುವ ಐತಿಹಾಸಿಕ ಜಿಲ್ಲಾ ಕ್ಯಾಂಪ್ “ಸಮರ್ಖಂದ್ District Assembly” ಅದರ ಪೂರ್ವಭಾವಿ ಸಭೆ “ಸೆಕ್ಟರ್ ಪ್ರಿ ಸಿಟ್ಟಿಂಗ್” ಕಾರ್ಯಕ್ರಮವು ಬಿಸಿರೋಡ್ ಜಿಲ್ಲಾ ಆಫೀಸಿನಲ್ಲಿ ನಡೆಯಿತು.ಎಸ್ಸೆಸ್ಸೆಫ್ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಇಬ್ರಾಹಿಂ ಸಖಾಫಿ ಸೆರ್ಕಳ ಅಧ್ಯಕ್ಷತೆ ವಹಿಸಿದ್ದರು. ಎಸ್ಸೆಸ್ಸೆಫ್ ದಕ್ಷಿಣ ಕನ್ನಡ ಜಿಲ್ಲಾ ಉಪಾಧ್ಯಕ್ಷ ತೌಸೀಫ್ ಸ‌ಅದಿ ಹರೇಕಳ ಸಭೆಯನ್ನು ಉದ್ಘಾಟಿಸಿದರು. ಸಮರ್ಖಂದ್ ಕ್ಯಾಂಪ್ ಅಮೀರ್ ಮುಹಮ್ಮದ್ ಅಲಿ ತುರ್ಕಳಿಕೆ ಕ್ಯಾಂಪ್ ನ ಕುರಿತ ಯೋಜನೆಯನ್ನು ಸವಿಸ್ತಾರವಾಗಿ ಮಂಡಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರೀಫ್ ನಂದಾವರ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಕ್ಯಾಂಪ್ ರಿಜಿಸ್ಟ್ರೇಶನ್ ಫಾರಂ ವಿತರಿಸಲಾಯಿತು. ಸೆಕ್ಟರ್, ಡಿವಿಶನ್, ಝೋನ್ ನ ಆಯ್ದ ಪ್ರತಿನಿಧಿಗಳು ಭಾಗವಾಗಿದ್ದರು.ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷ ಸಲೀಂ ಹಾಜಿ ಬೈರಿಕಟ್ಟೆ, ಕಾರ್ಯದರ್ಶಿಗಳಾದ ಜಮಾಲುದ್ದೀನ್ ಸಖಾಫಿ, ರಫೀಕ್ ಸುರತ್ಕಲ್, ಜಿಲ್ಲಾ ನಾಯಕರಾದ ಆರಿಫ್ ಝುಹ್ರಿ, ಪೈಝಲ್ ಝುಹ್ರಿ, ಹಕೀಂ ಕಳಂಜಿಬೈಲ್, ಮುಸ್ತಫಾ ಉರುವಾಲ್ ಪದವು, ಇಕ್ಬಾಲ್ ಮಾಚಾರ್, ಕರೀಂ ಕದ್ಕಾರ್ ಮುಂತಾದವರು ಉಪಸ್ಥಿತರಿದ್ದರು.ಕ್ಯಾಂಪ್ ಕನ್ವೀನರ್ ನವಾಝ್ ಸಖಾಫಿ ಅಡ್ಯಾರ್ ಪದವು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

error: Content is protected !!
%d bloggers like this: