janadhvani

Kannada Online News Paper

ರಾತ್ರಿ ಹೊತ್ತಲ್ಲಿ ಭಯಭೀತರಾಗುವ ಜಿದ್ದಾದ ‘ಹಡಗುಗಳ ಸ್ಮಶಾನ ಬೀಚ್’

ರಿಯಾದ್: ಸೌದಿ ಅರೇಬಿಯಾದ ಜಿದ್ದಾದಲ್ಲಿ ಹಡಗುಗಳ ಸ್ಮಶಾನ ಎನ್ನಬಹುದಾದ ಒಂದು ಬೀಚ್ ಇದೆ. ದಶಕಗಳ ಹಿಂದೆ, ಹವಳದ ಬಂಡೆಗಳು ಈ ಕಡಲತೀರವನ್ನು ದಾಟಿದ ಮೂರು ಹಡಗುಗಳನ್ನು ಅಪಘಾತಕ್ಕೆ ಈಡು ಮಾಡಿದ್ದವು. ರಾತ್ರಿಯ ಹೊತ್ತಿಗೆ ಭಯಭೀತಿ ಉಂಟುಮಾಡಬಲ್ಲ ಇತಿಹಾಸವನ್ನು ಹೊಂದಿದ ಶುಐಬಾ ಬೀಚ್ ಇನ್ನೊಂದು ಇತಿಹಾಸವನ್ನೂ ಹೊಂದಿದೆ.

ಜಿಸಾನ್ ಹೆದ್ದಾರಿ ಮೂಲಕ ಜಿದ್ದಾದಿಂದ ಸುಮಾರು 70 ಕಿ.ಮೀ ದೂರ ಸಂಚರಿಸಿದರೆ ಇಲ್ಲಿಗೆ ತಲುಪಬಹುದಾಗಿದೆ. ಇದೊಂದು ಜನಸಂಚಾರವಿಲ್ಲದ ಪ್ರತ್ಯೇಕ ತೀರವಾಗಿದ್ದು, ಅಲ್ಲಿ ಎರಡು ಹಡಗುಗಳು ವಾಲಿದ ರೀತಿಯಲ್ಲಿ ನಿಂತಿವೆ. ಪ್ರವಾದಿ ಮುಹಮ್ಮದ್ (ಸ) ಅವರ ಕಾಲದ ಬಳಿಕ ಖಲೀಫ ಆಗಿದ್ದ ಉಸ್ಮಾನ್ (ರ) ಅವರ ಕಾಲದಲ್ಲಿ ನಿರ್ಮಿಸಿದ ಬಂದರಿನ ಒಂದು ಭಾಗ ಇದು ಎನ್ನಲಾಗಿದೆ. ಹಾಳಾದ ಹಡಗುಗಳಲ್ಲಿ ದೊಡ್ಡದು ರೋ ಪ್ಯಾಕ್ಸ್ ಹಡಗು ಆಗಿದ್ದು, ಇದನ್ನು 1966ರಲ್ಲಿ ಹಾಲೆಂಡ್ ನಿರ್ಮಿಸಿದ್ದವು.

1993 ರಲ್ಲಿ, ಜಿದ್ದಾದ ಹೆಬ್ಬಾಗಿಲಾಗಿರುವ ಶುಐಬಾದಲ್ಲಿನ ಹವಳದ ಬಂಡೆಗಳಿಗೆ ಈ ಹಡಗು ಅಪ್ಪಳಿಸಿ ಅಪಘಾತಕ್ಕೀಡಾಗಿತ್ತು. ಅಪಘಾತಗಳು ಇಲ್ಲಿ ವಿರಳವಲ್ಲ. 2015ರಲ್ಲಿ, ಜರ್ಮನ್ ಪುರಾತತ್ತ್ವಜ್ಞರು ಪ್ರವಾದಿಯ ಕಾಲದಲ್ಲಿ ಹವಳದ ಬಂಡೆಗೆ ಅಪ್ಪಳಿಸಿ ಸಮುದ್ರದಲ್ಲಿ ಮುಳುಗಿದ ಹಡಗನ್ನು ಕಂಡುಹಿಡಿದಿದ್ದರು. ಸಮುದ್ರದ ತೀರದಲ್ಲಿಯೂ ಹವಳದ ಬಂಡೆಗಳ ನಿಶಾನಿಗಳು ಕಾಣಬಹುದಾಗಿದ್ದು, ಸಂಜೆ ಹೊತ್ತಲ್ಲಿ ಈ ಬೀಚ್ ಸುಂದರವಾಗಿ ಕಂಗೊಳಿಸುತ್ತದೆ.

ಬೀಚ್, ರಸ್ತೆಯಿಂದ ಸ್ವಲ್ಪ ದೂರದಲ್ಲಿದ್ದು, ಪರಿಣಾಮವಾಗಿ, ರಾತ್ರಿಯಲ್ಲಿ ಬೆಟ್ಟದಂತೆ ತೀರಕ್ಕೆ ಬಡಿಯುವ ಅಲೆಗಳ ಮಧ್ಯೆ ಈ ಹಡಗು ಕಂಡು ಭಯಭೀತಿಗೊಳಗಾಗ ಬಹುದು. ಇಂದು ಈ ತೀರವು ಪ್ರಯಾಣಿಕರಿಗೆ ನೆಚ್ಚಿನ ತಾಣವಾಗಿದೆ.

error: Content is protected !! Not allowed copy content from janadhvani.com