janadhvani

Kannada Online News Paper

ವೈದ್ಯಕೀಯ ತಪಾಸಣೆಗಾಗಿ ಅತ್ಯಾಧುನಿಕ ಪ್ರಯೋಗಾಲಯ- ಅರ್ಧ ತಾಸಿನಲ್ಲೇ ವಿಸಾ ಲಭ್ಯ

ದುಬೈ: ಇನ್ನು ಮುಂದೆ ದುಬೈನಲ್ಲಿ ವೈದ್ಯಕೀಯ ತಪಾಸಣೆ ಪೂರ್ಣಗೊಳಿಸಿದ ಬಳಿಕ ವಿಸಾ ಪಡೆಯಲು ಕೇವಲ ಅರ್ಧ ಗಂಟೆ ಸಾಕಾಗಲಿದೆ. ಇದಕ್ಕಾಗಿ ಹೊಸ ಅತ್ಯಾಧುನಿಕ ವೈದ್ಯಕೀಯ ಪ್ರಯೋಗಾಲಯಗಳನ್ನು ದುಬೈನಲ್ಲಿ ತೆರೆಯಲಾಗಿದೆ.

ಈ ಹಿಂದೆ 28 ಗಂಟೆಗಳನ್ನು ತೆಗೆದುಕೊಳ್ಳುತ್ತಿದ್ದ ಕ್ರಿಯೆಗಳಿಗೆ ಹೊಸ ಕೇಂದ್ರ ಮೂಲಕ ಕೇವಲ 30 ನಿಮಿಷಗಳು ಸಾಕಾಗಲಿದೆ. ದುಬೈನ ಕ್ರೌನ್ ಪ್ರಿನ್ಸ್ ಶೈಖ್ ಹಮ್ದಾನ್ ಬಿನ್ ಮುಹಮ್ಮದ್ ಅಲ್ ಮಕ್ತೂಮ್ ಅವರು ಸಾಲಿಮ್ ವೈದ್ಯಕೀಯ ಫಿಟ್ನೆಸ್ ಸ್ಮಾರ್ಟ್ ಕೇಂದ್ರಗಳನ್ನು ಉದ್ಘಾಟಿಸಿದ್ದು, ಈ ಫಿಟ್ನೆಸ್ ಕೇಂದ್ರಗಳನ್ನು ದುಬೈ ಆರೋಗ್ಯ ಪ್ರಾಧಿಕಾರ ನಡೆಸುತ್ತಿದೆ. ದುಬೈ ನಿವಾಸಿಗಳಿಗೆ ಸುಲಭವಾದ ಯೋಜನೆಯಾಗಿದೆ ಇದು ಎಂದು ಶೈಖ್ ಹಮ್ದಾನ್ ಹೇಳಿದ್ದಾರೆ.

error: Content is protected !! Not allowed copy content from janadhvani.com