janadhvani

Kannada Online News Paper

ಕರ್ನಾಟಕ ಮುಸ್ಲಿಂ ಜಮಾಅತ್: ಬಳ್ಳಾರಿ ಜಿಲ್ಲಾ ಸಮಿತಿ ಅಸ್ತಿತ್ವಕ್ಕೆ

ಬಳ್ಳಾರಿ: ಕರ್ನಾಟಕ ಮುಸ್ಲಿಂ ಜಮಾಅತ್ ಇದರ ಬಳ್ಳಾರಿ ಜಿಲ್ಲಾ ಸಮಿತಿಯನ್ನು ಅಸ್ತಿತ್ವಕ್ಕೆ ತರಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೌಲಾನಾ ಅಬೂಸುಫ್ಯಾನ್ ಮದನಿ ವಹಿಸಿದ್ದು ರಾಜ್ಯ ವಕ್ಫ್ ಮಂಡಳಿ ಸದಸ್ಯ ಯಾಕೂಬ್ ಯೂಸುಫ್ ಹೊಸನಗರ ಉದ್ಘಾಟಿಸಿದರು.

ಮೌಲಾನಾ ಶಾಫಿ ಸಅದಿ ಆಯ್ಕೆ ಪ್ರಕ್ರಿಯೆಗೆ ನಾಯಕತ್ವ ನೀಡಿದರು. ‘ಪ್ರಜಾ ಭಾರತ’ ವಿಷಯ ಮಂಡನೆಯನ್ನು ಚಿಂತಕ ಹಾಗೂ ಬರಹಗಾರ ಅಬ್ದುಲ್ ಹಮೀದ್ ಬಜ್ಪೆ ಮಂಡಿಸಿದರು. ‘ಬದಲಾವಣೆ ನಮ್ಮಿಂದಲೇ’ ವಿಷಯವನ್ನು ಪ್ರೊ ಸಾದಿಕ್ ಮಲೆಬೆಟ್ಟು ಮಂಡಿಸಿದರು.

ಸಭೆಯಲ್ಲಿ ಮೌಲಾನಾ ಇಬ್ರಾಹಿಂ ಸಖಾಫಿ, ಅಬ್ದುಲ್ ನವಾಝ್ ಬಳ್ಳಾರಿ, ಮೌಲಾನಾ ಬಳ್ಳಾರಿ ಖಾಝಿ ಮುಹಿನುದ್ದೀನ್, ಬಳ್ಳಾರಿ ನಗರಸಭಾ ಅಧ್ಯಕರು ಝರ್ಫಾಕ್ ಅಹ್ಮದ್ ಮುಂತಾದವರು ಭಾಗವಹಿಸಿದ್ದರು.

ಅಧ್ಯಕ್ಷರಾಗಿ ಮಾಜಿ ಮೂಡ ಚೇರ್ಮನ್ ಜನಾಬ್ ಹುಮಯೂನ್ ಖಾನ್, ಪ್ರಧಾನ ಕಾರ್ಯದರ್ಶಿಯಾಗಿ ವರದ ಗೌಸ್ ಸಾಹೇಬ್ ಹಡಗಲಿ ಹಾಗೂ 33 ಮಂದಿ ಸದಸ್ಯರನ್ನೊಳಗೊಂಡ ಜಿಲ್ಲಾ ಸಮಿತಿಯನ್ನು ಆರಿಸಲಾಯಿತು.

error: Content is protected !! Not allowed copy content from janadhvani.com