janadhvani

Kannada Online News Paper

ವಿದೇಶಿ ಕಾರ್ಮಿಕರ ಮತ್ತು ಅವಲಂಬಿತರ ‘ಲೆವಿ’ ಕಡಿಮೆ ಗೊಳಿಸಲು ಶೂರಾ ಕೌನ್ಸಿಲ್ ಆಗ್ರಹ

ರಿಯಾದ್: ಸೌದಿ ವಿದೇಶಿ ಕಾರ್ಮಿಕರ ಮೇಲಿನ ತೆರಿಗೆ ಮತ್ತು ಅವಲಂಬಿತರ ತೆರಿಗೆಯನ್ನು ಕಡಿಮೆ ಮಾಡಲು ಶೂರ ಕೌನ್ಸಿಲ್ ಬೇಡಿಕೆ ಇಟ್ಟಿದೆ. ಕಳೆದ ವರ್ಷ ಜಾರಿಯಲ್ಲಿದ್ದ ಅದೇ ಮೊತ್ತವನ್ನು ಈ ವರ್ಷವೂ ಜಾರಿಗೊಳಿಸುವ ಬಗ್ಗೆ ಅಧ್ಯಯನ ನಡೆಸಬೇಕೆಂದು ಶೂರಾ ಕೌನ್ಸಿಲ್, ವಾಣಿಜ್ಯ ಮತ್ತು ಹೂಡಿಕೆ ಸಚಿವಾಲಯವನ್ನು ಒತ್ತಾಯಿಸಿದೆ.

ಈ ವರ್ಷದಿಂದ, ಸ್ವದೇಶೀಗಳಿಗಿಂತ ಹೆಚ್ಚು ವಿದೇಶೀಯರು ಕೆಲಸ ಮಾಡುವ ಖಾಸಗಿ ಸಂಸ್ಥೆಗಳಲ್ಲಿ ವಿದೇಶಿ ನೌಕರರಿಗೆ ಮಾಸಿಕ ವಿಧಿಸುವ ಲೆವಿ ಶುಲ್ಕ 800 ರಿಯಾಲ್ ಆಗಿದೆ. ವಿದೇಶಿಯರಿಗಿಂತ ಹೆಚ್ಚು ಸ್ಥಳೀಯ ಜನರನ್ನು ನೇಮಿಸಿಕೊಳ್ಳುವ ಸಂಸ್ಥೆಗಳಲ್ಲಿನ ವಿದೇಶಿ ಕಾರ್ಮಿಕರ ಮಾಸಿಕ ಲೆವಿಯು 700 ಆಗಿದೆ. ಕಳೆದ ವರ್ಷ ಇದು ಕ್ರಮವಾಗಿ 600 ರಿಯಾಲ್ ಮತ್ತು 500 ರಿಯಾಲ್ ಆಗಿತ್ತು.

ಏತನ್ಮಧ್ಯೆ, ಅವಲಂಬಿತರ ಲೆವಿ ಪ್ರಸ್ತುತ ತಿಂಗಳಿಗೆ 300 ರಿಯಾಲ್ ಆಗಿದ್ದು, ಮುಂದಿನ ಜುಲೈನಿಂದ ಇದು ನಾನೂರಕ್ಕೆ ಏರಲಿರುವ ಹಿನ್ನೆಲೆಯಲ್ಲಿ ಶೂರಾ ಕೌನ್ಸಿಲ್ ವಾಣಿಜ್ಯ ಮತ್ತು ಹೂಡಿಕೆ ಸಚಿವಾಲಯವನ್ನು ಲೆವಿ ಸ್ಥಿರೀಕರಣಕ್ಕೆ ಸಂಬಂಧಿಸಿದ ಎಲ್ಲಾ ವಿಷಯಗಳನ್ನು ಅಧ್ಯಯನ ಮಾಡಲು ಕೇಳಿದೆ.

ಸ್ಪೀಕರ್ ಡಾ.ಅಬ್ದುಲ್ಲಾ ಅಲುಶೈಖ್ ಅಧ್ಯಕ್ಷತೆಯಲ್ಲಿ ನಡೆದ ಕೌನ್ಸಿಲ್ ಸಭೆಯಲ್ಲಿ ವಿದೇಶಿಯರ ಬಹು ನಿರೀಕ್ಷಿತ ಪ್ರಸ್ತಾಪವನ್ನು ಮುಂದಿಡಲಾಯಿತು.

error: Content is protected !! Not allowed copy content from janadhvani.com