janadhvani

Kannada Online News Paper

ಯುಎಇ: ಕೊರೋನಾ ಲಕ್ಷಣ ಕಂಡುಬಂದಲ್ಲಿ, 24 ಗಂಟೆಯೊಳಗೆ ರೋಗ ಪತ್ತೆ ಹಚ್ಚುವ ವ್ಯವಸ್ಥೆ

ದುಬೈ: ಯುಎಇಯಲ್ಲಿ ಕೊರೋನಾ ವೈರಸ್ ಲಕ್ಷಣ ಕಂಡುಬಂದ ರೋಗಿಗಳ ರೋಗ ನಿರ್ಣಯವನ್ನು 24 ಗಂಟೆಯೊಳಗೆ ಪತ್ತೆ ಹಚ್ಚುವ ವ್ಯವಸ್ಥೆ ಮಾಡಲಾಗಿದೆ. ಕೊರೋನಾ ಶಂಕಿತರನ್ನು ಸುರಕ್ಷಿತವಾಗಿ ನಿಭಾಯಿಸುವ ಕಾರ್ಯವಿಧಾನಗಳನ್ನು ಸಚಿವಾಲಯವು ಅಂತಿಮಗೊಳಿಸಿದೆ.

ಈ ಮೊದಲು, ಯುನೈಟೆಡ್ ಅರಬ್ ಎಮಿರೇಟ್ಸ್ ನಲ್ಲಿ, ಕೊರೋನ ವೈರಸ್‌ ಪತ್ತೆಗಾಗಿ ಕೇವಲ ಒಂದು ವೈರಾಲಜಿ ಲ್ಯಾಬ್ ಮಾತ್ರ ಕಾರ್ಯಾಚರಿಸುತ್ತಿತ್ತು. ಇದೀಗ ಹೆಚ್ಚಿನ ವೈರಾಲಜಿ ಲ್ಯಾಬ್‌ಗಳನ್ನು ಪರೀಕ್ಷಿಸುವ ಪ್ರಕ್ರಿಯೆಯಲ್ಲಿದೆ ಎಂದು ಆರೋಗ್ಯ ಇಲಾಖೆ ಪ್ರಕಟಿಸಿದೆ. ವಿಶ್ವ ಆರೋಗ್ಯ ಸಂಸ್ಥೆಯ ಅನುಸಾರವಾಗಿ ಅವು ಕಾರ್ಯಾಚರಿಸಲಿದೆ.

ಕೊರೋನಾದ ಮಾಹಿತಿಯನ್ನು ದೃಢೀಕರಿಸಲು ಮತ್ತು ವಿನಿಮಯ ಮಾಡಿಕೊಳ್ಳುವ ಏಕೈಕ ಅಧಿಕೃತ ಕೇಂದ್ರವನ್ನು ಏರ್ಪಾಟು ಮಾಡಲಾಗಿದೆ. ಇದು ವದಂತಿಗಳನ್ನು ತಪ್ಪಿಸಲು ಮತ್ತು ಊಹಾಪೋಹಗಳನ್ನು ತಡೆಯಲು ಸಹಾಯ ಮಾಡಲಿದೆ. ಕೊರೋನಾ ಶಂಕಿತರ ತನಿಖೆ ಮತ್ತು ರೋಗ ನಿರ್ಣಯಕ್ಕಾಗಿ ವಿಶೇಷ ಆಸ್ಪತ್ರೆಗಳನ್ನು ನಿಯೋಜಿಸಲಾಗಿದೆ. ಕೊರೋನಾ ರೋಗ ಲಕ್ಷಣಗಳೊಂದಿಗೆ ರೋಗಿಯು ಯಾವುದೇ ಆರೋಗ್ಯ ಕೇಂದ್ರಕ್ಕೆ ಬಂದರೂ, 24 ಗಂಟೆಗಳ ಒಳಗೆ ಸೋಂಕಿಗೆ ಒಳಗಾಗಿದ್ದಾರೆಯೇ ಎಂದು ನಿರ್ಧರಿಸಲು ಸಾಧ್ಯವಾಗಲಿದೆ.

error: Content is protected !! Not allowed copy content from janadhvani.com