janadhvani

Kannada Online News Paper

ದಾವಣಗೆರೆ : ದಾರುಲ್ ಉಲೂಮ್ ಅಲ್ ಫಾಯಿಝ್ ಮರ್ಕಝ್ ತ್ವೈಬಾ ದಾವಣಗೆರೆ ಇದರ ನೂತನ ನಮಾಝ್ ಕೊಠಡಿ ಲೋಕಾರ್ಪಣೆ ಗೊಂಡಿತು.

ಫಾರೂಕ್ ನಈಮಿ ಮದೀನಾ ಮುನವ್ವರ ನೂತನ ಕೊಠಡ ಉದ್ಘಾಟಿಸಿ, ಮಾತನಾಡಿದರು. ಮದೀನಾದಿಂದ ಊರಿಗೆ ಬರುವಾಗಲೇ ಧಾರ್ಮಿಕ ಜ್ಞಾನ ಹೊಂದಿರದ ಮಕ್ಕಳಿಗೆ ಲೌಕಿಕ ಧಾರ್ಮಿಕ ಜ್ಞಾನ ನೀಡುವ ಸಂಸ್ಥೆಯನ್ನು ಪ್ರಾರಂಭಿಸುವ ಹಂಬಲ ಹೊಂದಿದ್ದು, ಅದರಂತೆಯೇ ಈ ಸಂಸ್ಥೆಯನ್ನು ಸ್ಥಾಪಿಸಲಾಗಿದೆ. ಸಂಸ್ಥೆಯ ಏಳಿಗೆಗಾಗಿ ಖಾದರ್ ಹಾಜಿ ಬಾಂಬೆ, ಅಬ್ಬಾಸ್ ಹಾಜಿ ಉಳ್ಳಾಲ ಸೇರಿದಂತೆ ಹಲವರು ಸಹಕರಿಸಿದ್ದು, ಅಲ್ಲಾಹನು ಈ ಸಂಸ್ಥೆಯ ಏಳಿಗೆಗಾಗಿ ಸಹಕರಿಸಿದ ದಾನಿಗಳ ಕೊಡುಗೆಗಳನ್ನು ಸ್ವೀಕರಿಸಲಿ ಎಂದು ದುವಾ ನೆರವೇರಿಸಿದರು.

ನಂತರ ಡಾ.‌ರಾಶಿಕ್ ತರೀಕೆರೆ ಬೆಂಗಳೂರು, ಸಂಸ್ಥೆಯ ಕುರಿತು ಮಾಹಿತಿ ನೀಡಿದರು. ಮದರಸಗಳಲ್ಲಿ ಉತ್ತಮ ವಿಷಯಗಳನ್ನು ಕಲಿಸಲಾಗುತ್ತದೆ. ವಿದ್ಯಾರ್ಥಿಗಳು ಕಲಿತು ಉತ್ತಮರಾದರೆ ಮೆನೆ ಸಮಾಜ ಉತ್ತಮವಾಗುವುದರಲ್ಲಿ ಸಂಶಯವಿಲ್ಲ ಎಂದರು.
ಈ ವೇಳೆ ಕಮಲ್ ಮದನಿ, ಹೈದರ್ ಮುಈನಿ, ದಾದಪೀರ್, ನಿಯಾಝುಲ್ಲಾ ಆರೀಫುಲ್ಲ, ಶಫೀಯುಲ್ಲಾ ಮತ್ತಿತರರು ಉಪಸ್ಥಿತರಿದ್ದರು.
ವರದಿ : ಹಕೀಂ ಬೋಳಾರ್

error: Content is protected !!
%d bloggers like this: