janadhvani

Kannada Online News Paper

ಬಜಾಲ್, ಫೆ.2 : ಅಲ್ ಸಫಾ ಫ್ರೆಂಡ್ಸ್ ಆರ್ಟ್ಸ್ ಅ್ಯಾಂಡ್ ಸ್ಪೋರ್ಟ್ಸ್ ಕ್ಲಬ್ (ರಿ) ಬಜಾಲ್ ಜಲ್ಲಿಗುಡ್ದೆ ಹಾಗೂ ಬ್ಲಡ್ ಡೋನರ್ಸ್ ಮಂಗಳೂರು (ರಿ) ಇದರ ಜಂಟಿ ಸಹಯೋಗದೊಂದಿಗೆ ಯೆನೆಪೋಯ ಬ್ಲಡ್ ಬ್ಯಾಂಕ್ ದೇರಳಕಟ್ಟೆ ಇದರ ಸಹಕಾರದೊಂದಿಗೆ ಬ್ಲಡ್ ಡೋನರ್ಸ್ ಮಂಗಳೂರು (ರಿ) ಇದರ 228ನೇ ರಕ್ತದಾನ ಶಿಬಿರವು ಅಲ್ ಸಫಾ ಫ್ರೆಂಡ್ಸ್ ಆರ್ಟ್ಸ್& ಸ್ಪೋರ್ಟ್ಸ್ ಕ್ಲಬ್ (ರಿ) ಕಚೇರಿ ಬಜಾಲ್ ಜೆಲ್ಲಿಗುಡ್ದೆಯಲ್ಲಿ ಯಶಸ್ವಿಯಾಗಿ ನಡೆಯಿತು.

ರಕ್ತದಾನ ಶಿಬಿರದ ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಮೊಹಮ್ಮದ್ ಹನೀಫ್ ದಾರಿಮಿ ಖತೀಬರು , ಎಂಜೆಎಂ ಬಜಾಲ್ ಪಡ್ಡು ದುವಾ ಮೂಲಕ ಉದ್ಘಾಟಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅಲ್ ಸಫಾ ಫ್ರೆಂಡ್ಸ್ ಗೌರವಾದ್ಯಕ್ಷರಾದ ಇಝಾ ಬಜಾಲ್ ಇಂತಹ ಸಾಮಾಜಿಕ ಚಿಂತನೆಯಲ್ಲಿ ನಡೆಯುವ ಸೌಹಾರ್ದ ರಕ್ತದಾನ ಶಿಬಿರಗಳು ಸಮಾಜದ ಸ್ವಾಸ್ಥ್ಯದ ಅಭ್ಯುದಯಕ್ಕಾಗಿ ಮುನ್ನುಡಿಯಾಗಲಿದೆ ಎಂದರು.

ಮುಖ್ಯ ಅಥಿತಿಗಳಾಗಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ
ಹರೇಕಳ ಹಾಜಬ್ಬ, ಜೆಡಿಎಸ್ ಜಿಲ್ಲಾದ್ಯಕ್ಷಾರಾದ ಮಹಮ್ಮದ್ ಕುಂಙಿ, ರೆಸ್ಕ್ಯೂ ಚಾರಿಟೇಬಲ್ ಟ್ರಸ್ಟ್ ಅದ್ಯಕ್ಷರಾದ ಜನಾಬ್ ಜಬ್ಬಾರ್ ಮಾರಿಪಳ್ಳ, ಕಂಕನಾಡಿ‌ ನಗರ ಠಾಣಾ ಉಪನಿರೀಕ್ಷಕರಾದ ಶ್ರೀ ಪ್ರದೀಪ್ ಕುಮಾರ್, ಕಾರ್ಪೊರೇಟರ್ಗಳಾದ ಅಶ್ರಪ್ ಬಜಾಲ್, ರಪೂಪ್ ಬಜಾಲ್ ಎಂ ಜೆ ಎಂ ಬಜಾಲ್ ಅದ್ಯಕ್ಷರಾದ ಮೊಹಮ್ಮದ್ ಅಲಿ ಬಜಾಲ್, ಮಾಜಿ ಕಾರ್ಪೊರೇಟರ್ ಅಬ್ದುಲ್ ಅಝೀಝ್ ಕುದ್ರೋಳಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಜನಾಬ್ ಉಮ್ಮರ್ ಫಾರೂಕ್, ಶ್ರೀಮತಿ ಸುಮತಿ ಹೆಗ್ಡೆ ಉಪಸ್ಥಿತರಿದ್ದರು

ರಘುನಾಥ್ ಸ್ವಾಗತಿಸಿ ಝಿಯಾದ್ ಜಲ್ಲಿಗುಡ್ಡೆ ಧನ್ಯವಾದ ಸಮರ್ಪಿಸಿದರು ಬ್ಲಡ್ ಡೋನರ್ಸ್ ಮಂಗಳೂರು ಅದ್ಯಕ್ಷರಾದ ಸಿದ್ದೀಕ್ ಮಂಜೇಶ್ವರ, ದಾವೂದ್ ಬಜಾಲ್, ಮುನಾಫಿಲ್ ಜೆಪ್ಪು, ರಫೀಕ್ ಬಜಪೆ , ರಿಝ್ವಾನ್ ಬಜಪೆ ಕಾರ್ಯಕ್ರಮ ಸಂಯೋಜಿಸಿದರು. ಶಿಭಿರದಲ್ಲಿ‌ ಎಪ್ಪತ್ತಕ್ಕೂ ಅಧಿಕ‌ ರಕ್ತದಾನಿಗಳು ರಕ್ತದಾನ ಮಾಡಿ ಶಿಭಿರದ ಯಶಸ್ಸಿಗಾಗಿ‌ ಸಹಕರಿಸಿದರು.

error: Content is protected !!
%d bloggers like this: