janadhvani

Kannada Online News Paper

ಕಾಶ್ಮೀರ: 370ನೇ ವಿಧಿ ರದ್ಧತಿ ಬಳಿಕ ಪ್ರವಾಸಿಗರ ಸಂಖ್ಯೆಯಲ್ಲಿ ಭಾರಿ ಇಳಿಮುಖ

ಶ್ರೀನಗರ, ಫೆ 4: ಭೂಮಿಯ ಮೇಲಿನ ಸ್ವರ್ಗ ಎಂದೇ ಹೆಸರುವಾಸಿ, ಚಿರಪರಿಚಿತವಾದ ಕಣಿವೆ ರಾಜ್ಯ ಕಾಶ್ಮೀರಕ್ಕೆ ಬರುವ ಪ್ರವಾಸಿಗರ ಸಂಖ್ಯೆಯಲ್ಲಿ ಭಾರಿ ಇಳಿಮುಖವಾಗಿದ್ದು, ಪರಿಣಾಮ ಭಾರೀ ಪ್ರಮಾಣದ ಉದ್ಯೋಗ, ಆದಾಯ ನಷ್ಟ ಸಂಭವಿಸಿದೆ ಎಂದು ಐಎಸ್ ವರದಿ ಹೇಳಿದೆ.370ನೇ ವಿಧಿಯನ್ನು ರದ್ದು ಮಾಡಿ, ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಿದ ನಂತರ ಪ್ರವಾಸೋದ್ಯಮಕ್ಕೆ ಭಾರಿ ಹೊಡೆತ, ಹಿನ್ನಡೆಯಾಗಿದೆ ಎನ್ನಲಾಗಿದೆ.

ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನದ ಸಂವಿಧಾನದ 370ನೇ ವಿಧಿಯನ್ನು ಹಿಂಪಡೆದ ಬಳಿಕ ಜನರು ತೀವ್ರವಾಗಿ ವಿರೋಧ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಕೆಲವರನ್ನು ಗೃಹಬಂಧನದಲ್ಲಿಡಲಾಗಿದ್ದು, ಶಾಂತಿ ಕದಡುವ ಸಾಧ್ಯತೆಯಿಂದ ಬಿಗಿ ಪೊಲೀಸ್‌ ಬಂದೋಬಸ್ತ್ ವಿಧಿಸಲಾಗಿತ್ತು. ಮಾತ್ರವಲ್ಲದೇ, ಅಂತರ್ಜಾಲ ಸೇರಿದಂತೆ ದೂರವಾಣಿ ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು. ಇತ್ತೀಚೆಗಷ್ಟೇ 2ಜಿ ತರಂಗ ಸೇವೆಯನ್ನು ಪ್ರಾರಂಭಿಸಲಾಗಿದೆ.

ಕಾಶ್ಮೀರ ಪ್ರವಾಸೋದ್ಯಮಕ್ಕೆ ಒಳ್ಳೆಯ ಹೆಸರನ್ನು ಪಡೆದಿದೆ. 2018ರ ಅಗಸ್ಟ್‌-ಡಿಸೆಂಬರ್‌ ತಿಂಗಳಲ್ಲಿ ಭಾರೀ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡಿದ್ದಾರೆ. 3,16,434 ಮಂದಿ ಪ್ರವಾಸಿಗರು ಅಲ್ಲಿಗೆ ತೆರಳಿದ್ದರು.2019ರ ಅಗಸ್ಟ್‌-ಡಿಸೆಂಬರ್‌ ತಿಂಗಳಲ್ಲಿ 43,059 ಪ್ರವಾಸಿಗರು ಮಾತ್ರ ಕಾಶ್ಮೀರಕ್ಕೆ ತೆರಳಿದ್ದಾರೆ. ಅಂದರೆ ಈ ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ. 86ರಷ್ಟು ಪ್ರವಾಸಿಗರು ಕಡಿಮೆಯಾಗಿದ್ದಾರೆ.

2019ರ ಜುಲೈ (ಕೇಂದ್ರಾಡಳಿತವಾಗುವ ಮುನ್ನ) ಯಲ್ಲಿ 1,52,525 ಪ್ರವಾಸಿಗರು ಭೇಟಿ ನೀಡಿದ್ದರೆ, ಅದೇ ವರ್ಷದ ಅಗಸ್ಟ್‌ನಲ್ಲಿ ಕೇವಲ 4,562 ಮಂದಿ ಸಂದರ್ಶಿಸಿದ್ದಾರೆ. ಇವರೆಲ್ಲ ತಿಂಗಳ ಮೊದಲ ವಾರ ಬಂದವರು.ಸೆಪ್ಟಂಬರ್‌ನಲ್ಲಿ 4,562 ಮಂದಿ ಪ್ರವಾಸಿಗರು ಭೇಟಿ ನೀಡಿದ್ದರೆ, ನವೆಂಬರ್‌ನಲ್ಲಿ 12,086ಕ್ಕೆ ಏರಿಕೆಯಾಗಿತ್ತು. ನವೆಂಬರ್‌ನಲ್ಲಿ ಗುಲ್ಮಾರ್ಗ್‌ ಆಚರಣೆ ಇದ್ದ ಕಾರಣ ಹೆಚ್ಚಾಗಿತ್ತು. ಆದರೆ ಡಿಸೆಂಬರ್‌ನಲ್ಲಿ 6,954ಕ್ಕೆ ಕುಸಿಯಿತು.

ಉದ್ಯೋಗ ನಷ್ಟ
ಪ್ರವಾಸೋದ್ಯಮದಲ್ಲಿ ಭಾರೀ ಕುಸಿತವಾಗಿರುವುದರಿಂದ ಅಪಾರ ಪ್ರಮಾಣದಲ್ಲಿ ಉದ್ಯೋಗ ನಷ್ಟ ಸಂಭವಿಸಿದೆ. ಅಲ್ಲಿನ ಜನರು ಪ್ರವಾಸೋದ್ಯಮ ಮತ್ತು ಗುಡಿ ಕೈಗಾರಿಕೆಯನ್ನು ಅವಲಂಬಿಸಿದ್ದಾರೆ. ಈಗ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಇಳಿಕೆಯಾಗಿರುವ ಕಾರಣದಿಂದ ಸುಮಾರು 1,44,500 ಉದ್ಯೋಗ ನಷ್ಟವಾಗಿದೆ.
ಮತ್ತೂಂದು ಹೊಸ ಕೇಂದ್ರಾಡಳಿತಗಸ್ಟ್‌ 5ರ ಬಳಿಕ ಅಂದಾಜು 15 ಸಾವಿರ ಕೋಟಿ ರೂ. ನಷ್ಟವನ್ನು ಅಲ್ಲಿನ ವಾಣಿಜ್ಯ ವಿಭಾಗ ಅನುಭವಿಸಿದೆ ಎಂದು ಹೇಳ ಲಾಗುತ್ತಿದೆ. ಶ್ರೀನಗರದ ದಾಲ್‌ ಲೇಕ್‌ನಲ್ಲಿ ಬೋಟಿಂಗ್‌ ಇಲ್ಲದೇ ಹಲವು ತಿಂಗಳುಗಳು ಕಳೆದಿವೆ.

error: Content is protected !! Not allowed copy content from janadhvani.com