ರಿಯಾದ್: ಮನೆ ಚಾಲಕ, ಮನೆ ಕೆಲಸದ ವೀಸಾದಲ್ಲಿ ಬರುವವರು ಪ್ರಥಮ ಮೂರು ತಿಂಗಳ ಪ್ರೊಬೇಷನ್ ಕಾಲದಲ್ಲಯೇ ಎಕ್ಸಿಟ್ ವೀಸಾ ಪಡೆದು ಹಿಂತಿರುಗಬಹುದು. 90 ದಿನಗಳಲ್ಲಿ ಇಖಾಮಾವನ್ನು ಪಡೆಯದವರ ಎಕ್ಸಿಟ್ ಪ್ರಕ್ರಿಯೆಯನ್ನು ಸೌದಿ ಪಾಸ್‌ಪೋರ್ಟ್ ವಿಭಾಗದ (ಜವಾಝಾತ್) ಆನ್‌ಲೈನ್ ಸೇವೆಯಾದ ಅಬ್ಶೀರ್ ಮೂಲಕ ಪೂರ್ಣಗೊಳಿಸಬಹುದು ಎಂದು ಪಾಸ್‌ಪೋರ್ಟ್ ಡೈರೆಕ್ಟರೇಟ್ ತಿಳಿಸಿದೆ.
ಹಾಗೆ ಮಾಡಲು ಉದ್ಯೋಗದಾತರಿಗೆ (ಪ್ರಾಯೋಜಕರು) ನಿಗದಿಪಡಿಸಿದ ಕೆಲವು ಷರತ್ತುಗಳಿವೆ. ಅವರ ಅಡಿಯಲ್ಲಿರುವ ಗೃಹ ಮತ್ತು ಗೃಹೇತರ ಕಾರ್ಮಿಕರ ಸಂಖ್ಯೆ 100 ಕ್ಕಿಂತ ಮೀರಬಾರದು. ಕೆಲಸಗಾರನು ಸೌದಿ ಅರೇಬಿಯಾದಿಂದ ಹೊರಗಿರುವ ಅಥವಾ ಮೃತಪಟ್ಟ ವ್ಯಕ್ತಿ ಅಥವಾ ಕೆಲಸ ಇಲ್ಲದ ವ್ಯಕ್ತಿಯಾಗಿರಬಾರದು. ಕಾಣೆಯಾಗಿದ್ದಾರೆ ಎಂದು ಜವಾಝಾತ್‌ನಲ್ಲಿ ದೂರು ದಾಖಲಾಗಿ ಹುರೂಬ್ ಮಾಡಲ್ಪಟ್ಟ ವ್ಯಕ್ತಿಯೂ ಆಗಿರಬಾರದು. ಕಾರ್ಮಿಕ, ಟ್ರಾಫಿಕ್ ಕಾನೂನು ಉಲ್ಲಂಘನೆಯ ದಂಡನೆಗೆ ಒಳಗಾಗಿರಬಾರದು. ಕಾರ್ಮಿಕನ ಪಾಸ್‌ಪೋರ್ಟ್ ಗೆ ಎರಡು ತಿಂಗಳು ಅಥವಾ ಅದಕ್ಕಿಂತ ಹೆಚ್ಚಿನ ಕಾಲಾವಧಿ ಇರಬೇಕು.
ಈ ಷರತ್ತುಗಳು ಅನ್ವಯಿಸುವ ಗೃಹ ಕಾರ್ಮಿಕರ ವೀಸಾಗಳನ್ನು ಮಾತ್ರ ಅಬ್ಶೀರ್ ಮೂಲಕ ಸೌದಿ ಅರೇಬಿಯಾಕ್ಕೆ ಬಂದ ಮೂರು ತಿಂಗಳೊಳಗೆ ರದ್ದುಗೊಳಿಸಬಹುದು. ಅಬ್ಶಿರ್ ಪೋರ್ಟಲ್ ಅನ್ನು ಪ್ರವೇಶಿಸಿ ‘ಖಿದ್ಮಾತುಲ್ ಮಕ್ಫುಲೀನ್’ ಎನ್ನುವ ಗುಂಡಿ ಒತ್ತುವ ಮೂಲಕ ನಿರ್ಗಮನ ವೀಸಾ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದು. ಎಲ್ಲಾ ದೇಶೀಯರು ಮತ್ತು ವಿದೇಶಿಯರು ಸೇವೆಗಳಿಗಾಗಿ ಅಬ್ಶೀರ್‌ನಲ್ಲಿ ನೋಂದಾಯಿಸಿಕೊಳ್ಳಬೇಕು ಎಂದು ಪಾಸ್‌ಪೋರ್ಟ್ ಇಲಾಖೆ ವಿನಂತಿಸಿದೆ.















ಇನ್ನಷ್ಟು ಸುದ್ದಿಗಳು
ಸೌದಿಯ ವೈಮಾನಿಕ ದಾಳಿ ಇರಾಕಿ ಜನತೆ ಅಥವಾ ಸರ್ಕಾರದ ವಿರುದ್ಧವಲ್ಲ- ಸೌದಿ ಅರೇಬಿಯಾ
ಇಸ್ರೇಲಿ ಉತ್ಪನ್ನಗಳ ಆಮದು ನಿಷೇಧ: ಐರ್ಲೆಂಡ್ ಕ್ರಮವನ್ನು ಸ್ವಾಗತಿಸಿದ ಕತಾರ್
ಪ್ರಾದೇಶಿಕ ಮಟ್ಟದಲ್ಲಿ ಅನಿಶ್ಚಿತತೆ: ಮೂರು ಗಲ್ಫ್ ದೇಶಗಳಿಗೆ ವಿಮಾನ ಸೇವೆ ಸ್ಥಗಿತ
ಅನಿವಾಸಿ ಭಾರತೀಯರ ಪಾಸ್‌ಪೋರ್ಟ್ ಶುಲ್ಕ ಹೆಚ್ಚಳ: ಮೂರು ವಾರಗಳಲ್ಲಿ ನಿರ್ಧಾರ ತಿಳಿಸುವಂತೆ ಕೇಂದ್ರಕ್ಕೆ ಕೋರ್ಟ್ ನಿರ್ದೇಶನ
ಹೋರ್ಮುಜ್ ಮೂಲಕ ಸುರಕ್ಷಿತ ಸಾರಿಗೆ- ಪ್ರಮುಖ ಚರ್ಚೆಗಾಗಿ ಇರಾನ್ಗೆ ತಲುಪಿದ ಒಮಾನ್ ನಿಯೋಗ
ಉಮ್ರಾ ಯಾತ್ರಿಕರಿಗೆ ಸಿಹಿ ಸುದ್ದಿ: ಒಂದು ವರ್ಷ ಕಾಲಾವಧಿಯ ‘ಮಲ್ಟಿ ಎಂಟ್ರಿ’ ಉಮ್ರಾ ವೀಸಾ ಬಿಡುಗಡೆ
ಭಾರತದ ವಿಮಾನ ಪ್ರಯಾಣಿಕರಿಗೆ ಸಿಹಿ ಸುದ್ದಿ: ಟಿಕೆಟ್ ದರಕ್ಕೆ ಮಾಸಿಕ ಕಂತಿನ ಸೌಲಭ್ಯ
ನಿಖರವಲ್ಲದ ಸುದ್ದಿ ಹಂಚಿಕೊಂಡರೆ ಅಪಾಯ- ನಕಲಿ ಸುದ್ದಿಗಳ ವಿರುದ್ಧ ಸೌದಿಯಲ್ಲಿ ಎಚ್ಚರಿಕೆ
ಸೌದಿ: ‘ಏಕೀಕೃತ ರಾಷ್ಟ್ರೀಯ ವೀಸಾ ಪ್ಲಾಟ್ಫಾರ್ಮ್’ ಅನುಷ್ಠಾನಕ್ಕೆ- ವೀಸಾ ಪ್ರಕ್ರಿಯೆಗಳು ಇನ್ನಷ್ಟು ಸುಲಭ
ಅಂತಾರಾಷ್ಟ್ರೀಯ ಸರ್ವೀಸ್ಗಳಲ್ಲಿ ದರ ಕಡಿತ – ಏರ್ ಇಂಡಿಯಾ ಎಕ್ಸ್ಪ್ರೆಸ್ ಘೋಷಣೆ