janadhvani

Kannada Online News Paper

ವಿಟ್ಲ: ಸಂವಿಧಾನ ಸಂರಕ್ಷಣಾ ಸಮಿತಿ ಕೊಳ್ನಾಡು ಸಾಲೆತ್ತೂರು ಇದರ ವತಿಯಿಂದ CAA NRC NRP ವಿರುದ್ಧ ನಾಳೆ ಜನವರಿ 31ರಂದು ನಡೆಸಲು ನಿರ್ಧರಿಸಿದ್ದ ಪ್ರತಿಭಟನಾ ಸಮಾವೇಶವನ್ನು ಕಾರಣಾಂತರಗಳಿಂದ ಮುಂದೂಡಲಾಗಿದೆ.

ವಿಟ್ಲ ಪೋಲೀಸ್ ಠಾಣೆಯೆದುರು ಧರಣಿಕುಳಿತ ಪ್ರತಿಭಟನಾಕಾರರು

ಕೊನೇ ಗಳಿಗೆಯಲ್ಲಿ ಪೋಲೀಸರು ಅನುಮತಿ ನಿರಾಕರಿಸಿದ ಕಾರಣ ಫೆಬ್ರವರಿ,16-2020 ಆದಿತ್ಯವಾರದಂದು ನಡೆಸಲು ತೀರ್ಮಾನಿಸಲಾಗಿದೆ ಎಂದು ತಿಳಿದು ಬಂದಿದೆ.

ಕಾರ್ಯಕ್ರಮದಲ್ಲಿ ಹಾಜಿ ಅಬ್ದುಲ್ ಖಾದರ್ ಬಂಬ್ರಾಣ ಉಸ್ತಾದ್, ಡಾ.ಅಬ್ದುಲ್ ರಶೀದ್ ಝೈನಿ ಖಾಮಿಲ್ ಸಖಾಫಿ, ವಂದನೀಯ ಹ್ಯಾಂಡ್ರಿ ಡಿಸೋಜ, ಜ್ಞಾನ ಪ್ರಕಾಶ್ ಸ್ವಾಮೀಜಿ, ಮಹೇಂದ್ರ ಕುಮಾರ್ ಕೊಪ್ಪ, ಧ್ವಾರಕನಾಥ್ ಸರ್, ಮಾಜಿ ಸಚಿವ ಶ್ರೀ ಬಿ ರಮಾನಾಥ್ ರೈ, ಅಬ್ದುಲ್ ಮಜೀದ್ ಕೂಡ್ಲಿಪೇಟೆ ಭಾಷಣ ಮಾಡಲಿದ್ದಾರೆ.

ಹಲವು ಸಾಮಾಜಿಕ ಹೋರಾಟಗಾರರು, ಪ್ರಗತಿಪರ ಚಿಂತಕರು, ಪ್ರಮುಖ ಸಾಹಿತಿಗಳು ವಾಗ್ಮಿಗಳು ಹಾಗೂ ವಿವಿಧ ಸಮಾನ ಮನಸ್ಕ ಸಂಘಟನೆಗಳ ಮುಖಂಡರು,ಜಾತ್ಯತೀತ ಸಂಘಟನೆಗಳ ಮುಖಂಡರು, ಸಮಾನ ಮನಸ್ಕ ನಾಗರಿಕರು, ಹಲವಾರು ಪ್ರಮುಖ ಗಣ್ಯರು, ವಿದ್ಯಾರ್ಥಿಗಳು, ಯುವಕರು, ಸಾಮಾಜಿಕ ಧಾರ್ಮಿಕ ಮುಖಂಡರು ಭಾಗವಹಿಸಲಿದ್ದಾರೆ.

error: Content is protected !!
%d bloggers like this: