janadhvani

Kannada Online News Paper

ಜಿದ್ದಾ: ಇಂಡಿಗೊ ವೈಮಾನಿಕ ಸಂಸ್ಥೆಯು ಮಾರ್ಚ್ 29 ರಿಂದ ಜಿದ್ದಾದಿಂದ ಕೋಝಿಕೋಡ್‌ಗೆ ವಿಮಾನಯಾನ ಸೇವೆ ಆರಂಭಿಸಲಿದೆ. ಮುಂದಿನ ತಿಂಗಳು 16ರಿಂದ ಏರ್ ಇಂಡಿಯಾ ಜಂಬೊ ಸೇವೆಯನ್ನು ಪ್ರಾರಂಭಿಸುವುದಾಗಿ ಪ್ರಕಟಿಸಿದ ವೇಳೆಯಲ್ಲೇ ಈ ಸುದ್ದಿ ಹೊರಬಿದ್ದಿದೆ. ಇದರೊಂದಿಗೆ, ಜಿದ್ದಾ-ಕೋಝಿಕೋಡ್ ವಲಯದಲ್ಲಿ ಕಾರ್ಯನಿರ್ವಹಿಸುವ ಒಟ್ಟು ವಿಮಾನಯಾನಗಳ ಸಂಖ್ಯೆ ನಾಲ್ಕು ಆಗಲಿದೆ.

ಬೆಳಗ್ಗೆ 8:55 ಕ್ಕೆ ಕೋಝಿಕೋಡ್‌ನಿಂದ ಹೊರಟು ಮಧ್ಯಾಹ್ನ 12:20 ಕ್ಕೆ ಜಿದ್ದಾ ತಲುಪಲಿರುವ ವಿಮಾನವು, ಮಧ್ಯಾಹ್ನ 1:20ಕ್ಕೆ ಜಿದ್ದಾದಿಂದ ಹೊರಟು ರಾತ್ರಿ 9:35ಕ್ಕೆ ಕೋಝಿಕೋಡ್ ತಲುಪಲಿದೆ.

ಪ್ರತಿದಿನ ಸೇವೆ ಲಭ್ಯವಿದ್ದು, ಜಿದ್ದಾದಿಂದ ಕೋಝಿಕೋಡ್‌ಗೆ ಒನ್ ವೇ ಟಿಕೆಟ್ ದರವು ಸದ್ಯಕ್ಕೆ 750 ಸೌದಿ ರಿಯಾಲ್‌ ಆಗಿ ನಿಗದಿಪಾಡಿಸಲಾಗಿದೆ. ಆನ್‌ಲೈನ್‌ನಲ್ಲಿ ಟಿಕೆಟ್ ಬುಕಿಂಗ್ ಪ್ರಾರಂಭವಾಗಿದೆ. 25 ಕಿ.ಗ್ರಾಂ. ಚೆಕ್-ಇನ್ ಲಗೇಜ್ ಮತ್ತು 7 ಕಿ.ಗ್ರಾಂ. ಹ್ಯಾಂಡ್ ಬ್ಯಾಗೇಜ್ ಅನುಮತಿಸಲಾಗುತ್ತಿದೆ. 186 ಪ್ರಯಾಣಿಕರನ್ನು ಕೂರಿಸಬಲ್ಲ ಏರ್‌ಬಸ್ 320 ದರ್ಜೆಯ ವಿಮಾನವನ್ನು ಹಾರಾಟಕ್ಕೆ ಬಳಸಲಾಗುತ್ತದೆ.

ಪ್ರಸ್ತುತ, ಸೌದಿ ಏರ್ಲೈನ್ಸ್ ಮತ್ತು ಸ್ಪೈಸ್ ಜೆಟ್ ಜಿದ್ದಾ-ಕೋಝಿಕೋಡ್ ವಲಯದಲ್ಲಿ ಕಾರ್ಯನಿರ್ವಹಿಸುತ್ತಿವೆ. ಏರ್ ಇಂಡಿಯಾ ಜಂಬೊ ಸಹ ಮುಂದಿನ ತಿಂಗಳಿನಿಂದ ಪ್ರಯಾಣ ಬೆಳಸಲಿದೆ. ಈ ಮೂಲಕ ಜಿದ್ದಾ-ಕೋಝಿಕೋಡ್ ನಡುವೆ ನಾಲ್ಕು ನೇರ ವಿಮಾನಗಳು ಹಾರಾಟ ನಡೆಸಲಿದೆ. ಈ ಮೂಕ ಪ್ರಯಾಣಿಕರು ಮತ್ತು ಉಮ್ರಾ ಯಾತ್ರಾರ್ಥಿಗಳಿಗೆ ಪರಿಹಾರವಾಗಲಿದೆ ಎಂದು ನಿರೀಕ್ಷಿಸಲಾಗಿದೆ.

error: Content is protected !!
%d bloggers like this: