ಭಯೋತ್ಪಾದನೆ ರಹಿತ ವಿಶ್ವದ ಅಗ್ರಗಣ್ಯ 25 ದೇಶಗಳ ಪೈಕಿ ಯುಎಇ

ದುಬೈ: ಭಯೋತ್ಪಾದನೆ ಇಲ್ಲದ ವಿಶ್ವದ ಅಗ್ರಗಣ್ಯ 25 ದೇಶಗಳ ಪೈಕಿ ಭಯೋತ್ಪಾದನೆಯು ಯಾವುದೇ ಪ್ರಭಾವ ಬೀರದ ದೇಶವಾಗಿ ಯುನೈಟೆಡ್ ಅರಬ್ ಎಮಿರೇಟ್ಸ್ ಹೊರಹೊಮ್ಮಿದೆ ಎಂದು ವಿಶ್ವ ಭಯೋತ್ಪಾದನಾ ಸೂಚ್ಯಂಕ ಹೇಳಿದೆ ಎಂಬುದಾಗಿ ನ್ಯಾಷನಲ್ ಮೀಡಿಯಾ ಕೌನ್ಸಿಲ್ ತಿಳಿಸಿದೆ.

ಭಯೋತ್ಪಾದನೆ ಆಧಾರಿತ 163 ದೇಶಗಳ ಪಟ್ಟಿಯಲ್ಲಿ ಯುಎಇ 130ನೇ ಸ್ಥಾನದಲ್ಲಿದೆ. ಸೂಚ್ಯಂಕವು ಪ್ರತಿ ದೇಶದಲ್ಲಿ ಭಯೋತ್ಪಾದಕ ಚಟುವಟಿಕೆಗಳು, ದಾಳಿಗಳು, ಮತ್ತು ಇತರ ಸಾವುನೋವುಗಳ ಸಂಖ್ಯೆಯನ್ನು ಆಧರಿಸಿದೆ. ಮಧ್ಯಪ್ರಾಚ್ಯದಲ್ಲಿ, ಇರಾಕ್, ಸಿರಿಯಾ ಮತ್ತು ಯಮೆನ್ ಮೊದಲ ಹತ್ತು ಸ್ಥಾನಗಳಲ್ಲಿವೆ. ಈ ಪಟ್ಟಿಯಲ್ಲಿ ಯುಎಇ 130 ನೇ ಸ್ಥಾನದಲ್ಲಿದ್ದು, ಅಪರೂಪದ ಘಟನೆಗಳು ನಡೆದ ವಿಭಾಗದಲ್ಲಿ ಗಣಿಸಲ್ಪಟ್ಟಿದೆ.

2019 ರಲ್ಲಿ ಭಯೋತ್ಪಾದಕ ಚಟುವಟಿಕೆಯ ಪರಿಣಾಮವಾಗಿ ಸಾವನ್ನಪ್ಪಿದವರ ಸಂಖ್ಯೆ 2018 ಕ್ಕೆ ಹೋಲಿಸಿದರೆ ಶೇಕಡಾ 15 ರಷ್ಟು ಕಡಿಮೆಯಾಗಿದೆ. 98ಕ್ಕೂ ಹೆಚ್ಚು ದೇಶಗಳಲ್ಲಿ ಭಯೋತ್ಪಾದಕ ಚಟುವಟಿಕೆಗಳು ಕಡಿಮೆಯಾಗಿದೆ. ಜಾಗತಿಕವಾಗಿ ಶೇಕಡಾ 38ರಷ್ಟು ಭಯೋತ್ಪಾದಕ ಸಾವುಗಳಿಗೆ ತಾಲಿಬಾನ್ ಕಾರಣವಾಗಿದೆ. ಈ ಪೈಕಿ ಅಫ್ಘಾನಿಸ್ತಾನವು ಮುಂಚೂಣಿಯಲ್ಲಿದೆ.

ಈ ಎಲ್ಲಾ ಅಂಕಿ ಅಂಶಗಳು ಯುಎಇಯು ಅತ್ಯಂತ ಸುರಕ್ಷಿತ ದೇಶವಾಗಿ ಸೂಚಿಸುತ್ತದೆ ಎಂದು ರಾಷ್ಟ್ರೀಯ ಮಾಧ್ಯಮ ಮಂಡಳಿ ಮಹಾನಿರ್ದೇಶಕ ಮನ್ಸೂರ್ ಅಲ್ ಮನ್ಸೂರಿ ಹೇಳಿದರು. ಅಫ್ಘಾನಿಸ್ತಾನ, ಇರಾಕ್, ನೈಜೀರಿಯಾ, ಸಿರಿಯಾ, ಪಾಕಿಸ್ತಾನ, ಸೊಮಾಲಿಯಾ, ಭಾರತ, ಯಮೆನ್, ಫಿಲಿಪೈನ್ಸ್ ಮತ್ತು ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯಗಳು ಭಯೋತ್ಪಾದಕ ಚಟುವಟಿಕೆಗಳಿಂದ ಹೆಚ್ಚು ಜರ್ಜರಿತ ದೇಶಗಳಾಗಿವೆ ಎಂದು ಅಂಕಿಯಾಂಶಗಳಿಂದ ತಿಳಿದು ಬಂದಿದೆ.

Leave a Reply

Your email address will not be published. Required fields are marked *

error: Content is protected !!