ನಿತಾಖಾತ್: ಹಳದಿ ವರ್ಗ ಸಂಸ್ಥೆಗಳು ರೆಡ್ ಕ್ಯಾಟಗರಿಗೆ- ಅನಿವಾಸಿಗಳು ಆತಂಕದಲ್ಲಿ

ರಿಯಾದ್: ಸೌದಿ ಅರೇಬಿಯಾದ ಸ್ವದೇಶೀಕರಣ ಯೋಜನೆಯಾದ ನೀತಾಕಾತ್‌ನಿಂದ ಹಳದಿ ವರ್ಗದ ಸಂಸ್ಥೆಗಳನ್ನು ಕೆಂಪು ವರ್ಗಕ್ಕೆ ವರ್ಗಾಯಿಸಲಾಗುವುದು. ಹೊಸ ಬದಲಾವಣೆ ಜನವರಿ 26ರಿಂದ ಜಾರಿಗೆ ಬರಲಿದೆ. ಇದನ್ನು ಕಾರ್ಮಿಕ ಮತ್ತು ಸಾಮಾಜಿಕ ಅಭಿವೃದ್ಧಿ ಸಚಿವ ಅಹ್ಮದ್ ಅಲ್-ರಾಹ್ಜಿ ಘೋಷಿಸಿದ್ದಾರೆ.

ಖಾಸಗಿ ವಲಯದಲ್ಲಿ ಸ್ಥಳೀಯರಿಗೆ ಉದ್ಯೋಗಾವಕಾಶಗಳನ್ನು ಹೆಚ್ಚಿಸಲು 2011ರಲ್ಲಿ ನಿತಾಕಾತ್ ಯೋಜನೆಯನ್ನು ಪ್ರಾರಂಭಿಸಲಾಯಿತು. ಸೌದೀಕರಣವನ್ನು ಅನುಷ್ಠಾನಗೊಳಿಸುವ ದೃಷ್ಟಿಯಿಂದ, ಈ ಯೋಜನೆಯನ್ನು ಕೆಂಪು, ಹಳದಿ, ತಿಳಿ ಹಸಿರು, ಮಧ್ಯಮ ಹಸಿರು, ಕಡು ಹಸಿರು ಮತ್ತು ಪ್ಲಾಟಿನಂ ಎಂದು ಆರು ವಿಭಾಗಗಳಾಗಿ ವಿಂಗಡಿಸಲಾಗಿದೆ.

ಕೆಂಪು ವರ್ಗವು ಒಂದು ನಿರ್ದಿಷ್ಟ ಶೇಕಡಾ ಸೌದೀಕರಣವನ್ನು ಕಾರ್ಯಗತಗೊಳಿಸದ ಸಂಸ್ಥೆಗಳನ್ನು ಒಳಗೊಂಡಿದ್ದು, ಅವರು ಕಾರ್ಮಿಕ ಮತ್ತು ಸಾಮಾಜಿಕ ಅಭಿವೃದ್ಧಿ ಸಚಿವಾಲಯದಿಂದ ಸೇವೆಗಳನ್ನು ಪಡೆಯುವುದಿಲ್ಲ. ಇದಲ್ಲದೆ, ಕೆಂಪು ವರ್ಗದವರಿಗೆ ಕಾರ್ಮಿಕರ ಇಖಾಮಾಗಳು ಅಥವಾ ಕೆಲಸದ ಪರವಾನಗಿಗಳನ್ನು ನವೀಕರಿಸಲು ಅನುಮತಿಸಲಾಗುವುದಿಲ್ಲ.

ಹಳದಿ ಗುಂಪಿನ ಕಂಪೆನಿಗಳಿಗೆ ತಮ್ಮ ಕೆಲಸದ ಪರವಾನಗಿಯನ್ನು ನವೀಕರಿಸಲು ಮತ್ತು ನಿರ್ಬಂಧಗಳೊಂದಿಗೆ ಇಕಾಮಾವನ್ನು ನವೀಕರಿಸಲು ಅವಕಾಶ ನೀಡಲಾಗಿತ್ತು. ಹಳದಿ ವಿಭಾಗದಲ್ಲಿರುವ ಸಂಸ್ಥೆಗಳನ್ನು ಮುಂದಿನ ಜನವರಿ 26ರಿಂದ ಕೆಂಪು ವರ್ಗಕ್ಕೆ ವರ್ಗಾಯಿಸಲಾಗುವುದು. ಇದರೊಂದಿಗೆ, ಕೆಂಪು ವರ್ಗದವರ ಎಲ್ಲಾ ಮಾನದಂಡಗಳು ಹಳದಿ ವರ್ಗಕ್ಕೂ ಅನ್ವಯವಾಗಲಿದೆ.

Leave a Reply

Your email address will not be published. Required fields are marked *

error: Content is protected !!