ಖತಾರ್: ಚಾರಿಟಿ ಹೆಸರಿನಲ್ಲಿ ಅಕ್ರಮವಾಗಿ ಹಣ ಸಂಗ್ರಹಿಸುವವರ ವಿರುದ್ಧ ಕಠಿಣ ಕ್ರಮ

ದೋಹಾ: ಚಾರಿಟಿ ಹೆಸರಿನಲ್ಲಿ ಅಕ್ರಮವಾಗಿ ಹಣ ಸಂಗ್ರಹಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಕತರ್‌ನ ಇಸ್ಲಾಮಿಕ್ ವ್ಯವಹಾರಗಳ ಸಚಿವಾಲಯ ಹೇಳಿದೆ.ಈ ಬಗ್ಗೆ ಅನುಮಾನವಿರುವವರ ವಿರುದ್ಧ ಸಚಿವಾಲಯ ಕ್ರಮ ಕೈಗೊಳ್ಳಲು ಪ್ರಾರಂಭಿಸಿದೆ. ಅಂತಹ ಜನರ ಬಗ್ಗೆ ಸಚಿವಾಲಯವು ಎಚ್ಚರಿಕೆ ನೀಡಿದೆ.

ವಾಟ್ಸ್ ಆ್ಯಪ್, ಟ್ವಿಟರ್ ಸೇರಿದಂತೆ ಸಾಮಾಜಿಕ ಮಾಧ್ಯಮಗಳ ಮೂಲಕ ಹಣ ಸಂಗ್ರಹಿಸುವರನ್ನು ಸಚಿವಾಲಯವು ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ಎಂಡೋಮೆಂಟ್ ಜನರಲ್ ಡೈರೆಕ್ಟರೇಟ್ ಅಧಿಕಾರಿ ಮುಹಮ್ಮದ್ ಯಾಕೂಬ್ ಅಲ್-ಅಲಿ ಹೇಳಿದ್ದಾರೆ.

ದತ್ತಿ ನೀಡುವಿಕೆ ಮತ್ತು ಝಕಾತ್ ಸಂಗ್ರಹವನ್ನು ಅನುಮೋದಿತ ರೀತಿಯಲ್ಲಿ ಉತ್ತೇಜಿಸುವ ಉದ್ದೇಶವನ್ನು ಸಚಿವಾಲಯ ಹೊಂದಿದೆ. ಸ್ಥಳೀಯ ಚಾನೆಲ್‌ನೊಂದಿಗೆ ಮಾತನಾಡಿದ ಅಲ್-ಅಲಿ, ಸಂದೇಹಾಸ್ಪದ ಜನರನ್ನು ಗಮನನಲ್ಲಿಡಬೇಕು ಎಂದು ಹೇಳಿದರು.

ಚಾರಿಟಿ ನಿಯಂತ್ರಕ ಪ್ರಾಧಿಕಾರದೊಂದಿಗೆ ಸಹಕರಿಸಿ ಸಚಿವಾಲಯವು ಈ ಕ್ರಮ ಕೈಗೊಳ್ಳುತ್ತಿದೆ ಎಂದರು. ಅಪರಿಚಿತ ವ್ಯಕ್ತಿಗಳು ವಿವಿಧ ಯೋಜನೆಗಳಿಗೆ ಹಣ ಸಂಗ್ರಹಿಸುತ್ತಿದ್ದಾರೆ. ಅಂತಹ ಜನರು ಬಡ ಕುಟುಂಬಗಳ ದುಃಸ್ಥಿತಿ ಬಗ್ಗೆ ವಿವರಿಸಿ ಸಹಕಾರ ಪಡೆಯುತ್ತಾರೆ. ಅಗತ್ಯವಿರುವವರಿಗೆ ಸಹಾಯ ಮಾಡಲು ಬಯಸುವವರು ಅನುಮೋದಿತ ರೀತಿಯನ್ನು ಅವಲಂಬಿಸಬೇಕು ಎಂದು ಅಲ್ ಅಲಿ ಹೇಳಿದರು.

Leave a Reply

Your email address will not be published. Required fields are marked *

error: Content is protected !!