janadhvani

Kannada Online News Paper

ಬೆಂಗಳೂರು,ಡಿ.3: ದಕ್ಷಿಣ ಕನ್ನಡ ಜಿಲ್ಲೆಯ ಪ್ರಖ್ಯಾತ ಧಾರ್ಮಿಕ ಕೇಂದ್ರವಾಗಿರುವ ಉಳ್ಳಾಲ ಸಯ್ಯಿದ್ ಮದನಿ ದರ್ಗಾ ಸಮಿತಿಗೆ ಹೈಕೋರ್ಟ್ ನಲ್ಲಿ ಹಿನ್ನಡೆ.

ಉಳ್ಳಾಲ ಸಯ್ಯಿದ್ ಮದನಿ ಆಡಳಿತ ಸಮಿತಿಯಲ್ಲಿ ಗೊಂದಲವಿರುವ ಕಾರಣ ಸಯ್ಯಿದ್ ಮದನಿ ದರ್ಗಾ ಹಾಗೂ ಅದರ ಅಧೀನ ಸಂಸ್ಥೆಗಳಿಗೆ ಕರ್ನಾಟಕ ಸರ್ಕಾರವು ಆಡಳಿತಾಧಿಕಾರಿಯನ್ನಾಗಿ ಇಬ್ರಾಹಿಂ ಗೂನಡ್ಕರವರನ್ನು ನೇಮಕ ಮಾಡಿದ್ದು, ಈ ಆದೇಶಕ್ಕೆ ತಡೆ ನೀಡುವಂತೆ ಕೋರಿ ಉಳ್ಳಾಲ ದರ್ಗಾ ಸಮಿತಿಯು ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿತ್ತು.

ಅರ್ಜಿಯ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್ ನ ಏಕ ಸದಸ್ಯ ಪೀಠದ ನ್ಯಾಯಾಧೀಶರಾದ ಡಿ.ವೀರಪ್ಪರವರು ಸರ್ಕಾರಿ ಆದೇಶಕ್ಕೆ ತಡೆ ನೀಡಲು ನಿರಾಕರಿಸಿರುತ್ತಾರೆ.
ಈ ಮೂಲಕ ಇಬ್ರಾಹಿಂ ಗೂನಡ್ಕರವರು ಅಧಿಕಾರ ಸ್ವೀಕರಿಸಲು ಯಾವೂದೇ ನ್ಯಾಯಾಂಗ ಅಡೆತಡೆಗಳಿಲ್ಲದೆ ಸುಗಮವಾಗಿದೆ.

error: Content is protected !!
%d bloggers like this: