janadhvani

Kannada Online News Paper

ಜಿದ್ದಾ,ಡಿ.3: ಜಿದ್ದಾದಿಂದ ಪಾಕಿಸ್ತಾನದ ಇಸ್ಲಾಮಾಬಾದ್‌ಗೆ ಹಾರಾಟ ಆರಂಭಿಸಿದ್ದ ವಿಮಾನದಲ್ಲಿ ಮೂವರು ಹೃದಯಾಘಾತಕ್ಕೆ ಒಳಗಾಗಿದ್ದು, ಈ ಪೈಕಿ ಓರ್ವ ಸಾವನ್ನಪ್ಪಿರುವ ಆಘಾತಕಾರಿ ಘಟನೆ ವರದಿಯಾಗಿದೆ.

ಪಾಕಿಸ್ತಾನ್ ಇಂಟರ್ ನ್ಯಾಷನಲ್ ಏರ್ಲೈನ್ಸ್ ಪಿಕೆ-742 ವಿಮಾನ ಜಿದ್ದಾದಿಂದ ಇಸ್ಲಾಮಾಬಾದ್ ಗೆ ಭಾನುವಾರ ಹಾರಾಟ ಆರಂಭಿಸಿತ್ತು. ಆದರೆ ದಿಢೀರನೆ ದಂಪತಿ ಸಹಿತ ಮೂವರಿಗೆ ಹೃದಯಾಘಾತವಾದ ಪರಿಣಾಮ 225 ಪ್ರಯಾಣಿಕರಿದ್ದ ವಿಮಾನವನ್ನು ಕರಾಚಿ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿಸಲಾಗಿದೆ.

ಘಟನೆ ಬಳಿಕ ತಕ್ಷಣವೇ ನಾಗರಿಕ ವಿಮಾನಯಾನ ಸಂಸ್ಥೆಯ ಅಂಬುಲೆನ್ಸ್ ಹಾಗೂ ವೈದ್ಯರು ಕರಾಚಿ ವಿಮಾನ ನಿಲ್ದಾಣಕ್ಕೆ ಧಾವಿಸಿ ಅಸ್ವಸ್ಥ ಪ್ರಯಾಣಿಕರನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ವಿಮಾನ ತುರ್ತು ಭೂಸ್ಪರ್ಶ ಮಾಡುವ ಮೊದಲೇ ಓರ್ವ ಮಹಿಳಾ ಪ್ರಯಾಣಿಕರು ಅಸುನೀಗಿದ್ದು, ಹೃದಯಾಘಾತದಿಂದ ಅನಾರೋಗ್ಯಕ್ಕೊಳಗಾಗಿದ್ದ ಇತರ ಇಬ್ಬರು ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

error: Content is protected !!
%d bloggers like this: