ಸೌದಿಯಲ್ಲಿ ಇನ್ಮುಂದೆ ಸಂಚಾರ ನಿಯಮ ಉಲ್ಲಂಘನೆಗೆ ಕಪ್ಪು ಚುಕ್ಕೆ

ರಿಯಾದ್: ಸಂಚಾರ ನಿಯಮ ಉಲ್ಲಂಘಿಸುವವರಿಗೆ ಸೌದಿ ಅರೇಬಿಯಾದಲ್ಲಿ ಕಪ್ಪು ಚುಕ್ಕೆಗಳನ್ನು ನೀಡಲಾಗುವ ಬಗ್ಗೆ ಚಿಂತನೆ ನಡೆಸಲಾಗಿದೆ. ಮೂರು ವರ್ಷಗಳಲ್ಲಿ 90 ಕಪ್ಪು ಚುಕ್ಕೆಗಳನ್ನು ಪಡೆದವರ ಚಾಲನಾ ಪರವಾನಗಿಯನ್ನು ರದ್ದು ಪಡಿಸಲಾಗುವುದು, ಸೇರಿದಂತೆ ಸಂಚಾರ ನಿಯಮಗಳ ಪರಿಷ್ಕರಣೆಯನ್ನು ಪ್ರಸ್ತಾಪಿಸಿದ್ದು, ಇದು ಯಾವಾಗ ಜಾರಿಯಾಗಲಿದೆ ಎಂದು ಸಂಚಾರ ನಿರ್ದೇಶನಾಲಯ ವ್ಯಕ್ತಪಡಿಸಿಲ್ಲ.

ಸಂಚಾರ ನಿಯಮ ಉಲ್ಲಂಘನೆಯ ಅನುಸಾರವಾಗಿ ಚಾಲಕರಿಗೆ ನಿಗದಿತ ಬ್ಲ್ಯಾಕ್ ಪಾಯಿಂಟ್‌ಗಳನ್ನು ನೀಡಲಾಗುವುದು.
ಮೊದಲ ಉಲ್ಲಂಘನೆಯ ದಾಖಲಾದ ಬಳಿಕ ಮೂರು ವರ್ಷಗಳಲ್ಲಿ 90 ಬ್ಲ್ಯಾಕ್ ಪಾಯಿಂಟ್ಸ್ ಪಡೆದವರ ಪರವಾನಗಿಗಳನ್ನು ರದ್ದುಗೊಳಿಸಲಾಗುತ್ತದೆ. 36 ಉಲ್ಲಂಘನೆಗಳಿಗೆ ತಲಾ ಎರಡು ಕಪ್ಪು ಬಿಂದುಗಳನ್ನು ನೀಡಲಾಗುತ್ತವೆ. ಆದರೆ ಕೆಲವು ಉಲ್ಲಂಘನೆಗಳು ಮೂರು ಕಪ್ಪು ಬಿಂದುಗಳನ್ನು ಪಡೆಯಬಹುದು.

ಉಲ್ಲಂಘನೆಗಳಿಗಾಗಿ ಪಡೆದ ಬ್ಲಾಕ್ ಪಾಯಿಂಟ್‌ಗಳ ಬಗ್ಗೆ ಚಾಲಕರಿಗೆ ಎಸ್‌ಎಂಎಸ್ ಅಥವಾ ಇ-ಮೇಲ್ ಮೂಲಕ ತಿಳಿಸಲಾಗುತ್ತದೆ. ಪರಿಷ್ಕೃತ ಟ್ರಾಫಿಕ್ ಕಾನೂನಿನ ಉಲ್ಲಂಘನೆಗಾಗಿ ತಾತ್ಕಾಲಿಕ ಅಥವಾ ಶಾಶ್ವತವಾಗಿ ಚಾಲನಾ ಪರವಾನಗಿಗಳನ್ನು ರದ್ದುಗೊಳಿಸಲು ಕೂಡ ಕಾನೂನು ಅನುಮತಿಸುತ್ತದೆ.

ಕೊನೆಯದಾಗಿ ಸಂಚಾರ ಕಾನೂನನ್ನು ಉಲ್ಲಂಘಿಸಿದವರು ಮತ್ತೆ ಒಂದು ವರ್ಷದ ಅವಧಿಗೆ ಬೇರೆ ಯಾವುದೇ ಉಲ್ಲಂಘನೆಗೆ ಗುರಿಯಾಗದಿದ್ದರೆ ಹಿಂದೆ ಅವರ ಮೇಲೆ ಹೇರಿದ ಕಪ್ಪು ಅಂಕಗಳನ್ನು ರದ್ದುಗೊಳಿಸಲಾಗುತ್ತದೆ. ಒಂದು ವರ್ಷದೊಳಗೆ ಎರಡನೇ ಬಾರಿಗೆ ಸಾರ್ವಜನಿಕ ಸುರಕ್ಷತೆಗೆ ಧಕ್ಕೆ ತರುವವರಿಗೆ, ಕಾನೂನಿನ ಪ್ರಕಾರ ಗಂಭೀರ ಉಲ್ಲಂಘನೆಯನ್ನು ಪುನರಾವರ್ತಿಸುವವರಿಗೆ ಕಾನೂನಿನ ಅನ್ವಯ ಗರಿಷ್ಠ ದಂಡವನ್ನು ವಿಧಿಸಲಾಗುತ್ತದೆ.

ಅತಿಯಾದ ವೇಗ, ಕುಡಿದು ವಾಹನ ಚಲಾಯಿಸುವುದು, ಕೆಂಪು ಸಿಗ್ನಲ್ ದಾಟುವುದು, ಅಪಾಯಕಾರಿಯಾಗಿ ಓವರ್‌ಟೇಕ್ ಮಾಡುವುದು, ವಿರುದ್ಧ ದಿಕ್ಕಿನಲ್ಲಿ ವಾಹನ ಓಡಿಸುವುದು ಮುಂತಾದ ಒಂಬತ್ತು ಉಲ್ಲಂಘನೆಗಳು ಸಾರ್ವಜನಿಕ ಸುರಕ್ಷತೆಯ ಬೆದರಿಕೆಗಳಾಗಿ ಪಟ್ಟಿಮಾಡಲಾಗಿದೆ.

Leave a Reply

Your email address will not be published. Required fields are marked *

error: Content is protected !!