janadhvani

Kannada Online News Paper

ದುಬೈ: ಯುಎಇಯು ರಾಷ್ಟ್ರೀಯ ದಿನದ ಭಾಗವಾಗಿ ಮತ್ತೊಂದು ವಿಶ್ವ ದಾಖಲೆಯನ್ನು ನಿರ್ಮಿಸಿದ್ದು, ಗಗನ ಹಾರಾಟದ ವೇಳೆ ಹಾರಿಸಿದ ಅತಿದೊಡ್ಡ ಧ್ವಜವು ದಾಖಲೆಯನ್ನು ಸ್ಥಾಪಿಸಿದೆ.

ದುಬೈ ರಾಜಕುಮಾರ ಪ್ರಿನ್ಸ್ ಶೈಖ್ ಹಮ್ದಾನ್ ಅವರು, ಯುಎಇ ಧ್ವಜದೊಂದಿಗೆ ದುಬೈ ಪಾಮ್ ಜುಮೇರಾ ಮೇಲೆ ವಿಮಾನದಿಂದ ಹಾರಿದ ಸ್ಕೈ ಡೈವರ್‌ಗಳ ಅದ್ಭುತ ಪ್ರದರ್ಶನವನ್ನು ಹಂಚಿಕೊಂಡಿದ್ದಾರೆ.

144.28 ಚದರ ಮೀಟರ್ ಅಳತೆಯ ಧ್ವಜವನ್ನು ಸಾಹಸಿಗಳು ಹಾರಿಸಿದರು. ಈ ಸಂದರ್ಭವನ್ನು ರಾಷ್ಟ್ರದ ಮತ್ತೊಂದು ಹೆಮ್ಮೆಯ ಕ್ಷಣವೆಂದು ಶೈಖ್ ಹಮ್ದಾನ್ ಬಿನ್ ಮುಹಮ್ಮದ್ ಬಿನ್ ರಾಶಿದ್ ಅಲ್ ಮಕ್ತೂಂ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿರುವ ವೀಡಿಯೊದಲ್ಲಿ ಸಂತೋಷ ಹಂಚಿಕೊಂಡಿದ್ದಾರೆ.

error: Content is protected !!
%d bloggers like this: