ಮದೀನಾ ಮುನವ್ವರದಲ್ಲಿ ಕೇರಳದ ಉಮ್ರಾ ಯಾತ್ರಾರ್ಥಿ’ಗಳಿಬ್ಬರ ಮರಣ, KCF ನಿಂದ ದಫನ ಕಾರ್ಯಕ್ಕೆ ನೆರವು

ಕೇರಳ ಮೂಲದ ಉಮ್ರಾ ಯಾತ್ರಾರ್ಥಿಯಾದ ತ್ರಿಶೂರ್ ನಿವಾಸಿ ನಸೀಮಾ ಸಿದ್ದೀಖ್ ಎಂಬವರು ಮದೀನದ ಕಿಂಗ್ ಪಹದ್ ಹಾಸ್ಪಿಟಲ್’ನಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಂದರ್ಭದಲ್ಲಿ ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ 22.11.2019 ರಂದು‌ ನಿಧಾನರಾಗಿದ್ದು.

ಹಾಗೂ ದಿನಾಂಕ 26.11.2019ರಂದು‌ ಮರಣಹೊಂದಿದ ಕೇರಳದ ಮಳಪುರಮ್ ನಿವಾಸಿ ಖದೀಜಾ ಎಂಬವರ ದಫನ ಕಾರ್ಯಕ್ಕೆ ಬೇಕಾಗಿ ಮದೀನ ಮುನವ್ವರದ ಕರ್ನಾಟಕ ಕಲ್ಚರಲ್ ಫೌಂಡೇಶನ್ ಇದರ ಸಾಂತ್ವನ ಕಾರ್ಯಕರ್ತರು ದಫನ ಕಾರ್ಯಕ್ಕೆ ಬೇಕಾದ ಕಾನೂನು ಪ್ರಕ್ರಿಯೆಗಳನ್ನು ಪೂರ್ತಿಗೊಳಿಸಿ. ಮರಣೋತ್ತರ ಕಾರ್ಯದಲ್ಲಿ ಅವರ ಕುಟುಂಬಕ್ಕೆ ನೆರವಾಗಿದೆ.

ಹೀಗೆ ಕಳೆದ ಅಕ್ಟೋಬರ್ ತಿಂಗಳಲ್ಲಿ 14 ಜನರ ದಫನ ಕಾರ್ಯಕ್ಕೆ ಬೇಕಾದ ಎಲ್ಲಾ ಅವಶ್ಯ ದಾಖಲೆಗಳನ್ನು ಸರಿಪಡಿಸಿ, ಭಾರತ ರಾಯಭಾರಿ ಕಚೇರಿ ಯಿಂದ ನಿರಪೇಕ್ಷಣಾ ಪತ್ರ ಪಡೆಯುವ ಹಾಗೂ ಮತ್ತಿತರ ಕಾನೂನು ಪ್ರಕ್ರಿಯೆಗಳಿಗೆ ನೆರವಾಗುತ್ತ ಅಂತಿಮ ಸಂಸ್ಕಾರದವರೆಗೆ ಕೆಸಿಎಫ್ ಕಾರ್ಯಕರ್ತರು ಮೃತರ ಸಂಬಂಧಿಕರೊಡನೆ ಕೈಜೋಡಿಸಿದ್ದಾರೆ.

ಭಾರತದ ವಿವಿಧ ರಾಜ್ಯಗಳಿಂದ ಆಗಮಿಸಿದ್ದ ಉಮ್ರಾ ಯಾತ್ರಾರ್ಥಿಗಳು ಮದೀನಾ ಮುನವ್ವರದಲ್ಲಿ ಮರಣ ಸಂಭವಿಸಿದ ಮಾಹಿತಿ ನಮಗೆ ಸಿಕ್ಕಾಗಲೇ ನಮ್ಮ ಸಾಂತ್ವನ ಇಲಾಖೆಯ ಕಾರ್ಯಕರ್ತರು ದಫನ ಕಾರ್ಯಕ್ಕೆ ಬೇಕಾದ ಎಲ್ಲಾ ಕಾನೂನು ಪ್ರಕ್ರಿಯೆಗಳಲ್ಲಿ ತೊಡಗಿಸಿಕೊಳ್ಳುತ್ತಾರೆ.

ಮಾತ್ರವಲ್ಲದೆ ಮರಣೋತ್ತರ ಕಾರ್ಯದಲ್ಲೂ ಭಾಗಿಯಾಗಿ ಮೃತರ ಕುಟುಂಬದವರನ್ನು ಸಾಂತ್ವನ ಪಡಿಸಲಾಗುತ್ತದೆ ಕಳೆದ ಎರಡು ವರ್ಷಗಳಲ್ಲಿ ಮದೀನಾ ಮುನವ್ವರದಲ್ಲಿ 100ಕ್ಕೂ ಅಧಿಕ ಮಂದಿಯ ದಫನ ಕಾರ್ಯಕ್ಕೆ ನೇರವಾಗಲು ಮದೀನಾ ಕೆ.ಸಿ.ಎಫ್ ಸಾಂತ್ವನ ಇಲಾಖೆಗೆ ಸಾಧ್ಯವಾಗಿದೆ,

Leave a Reply

Your email address will not be published. Required fields are marked *

error: Content is protected !!